Home News Marriage News: ಕುಡಿದು ತೂರಾಡಿಕೊಂಡು ಎಂಟ್ರಿ ಕೊಟ್ಟ ಮದುಮಗ! ಮುಂದಾಗಿದ್ದಾದರೂ ಏನು?

Marriage News: ಕುಡಿದು ತೂರಾಡಿಕೊಂಡು ಎಂಟ್ರಿ ಕೊಟ್ಟ ಮದುಮಗ! ಮುಂದಾಗಿದ್ದಾದರೂ ಏನು?

Marriage News

Hindu neighbor gifts plot of land

Hindu neighbour gifts land to Muslim journalist

Marriage News: ನಾನಾ ಕಾರಣಗಳಿಂದ ಮದುವೆಗಳು ಮುರಿದು ಬೀಳುವ ಘಟನೆಗಳನ್ನು ನಾವು ನೋಡುತ್ತಲೇ ಇರುತ್ತೇವೆ. ಕೇರಳದ ಪತ್ತನಂತಿಟ್ಟ ಜಿಲ್ಲೆಯ ಕೊಜೆಂಚೇರಿಯ ತಡಿಯೂರಿನಲ್ಲಿ ಇಂತಹದ್ದೇ ಘಟನೆ ನಡೆದಿದೆ. ಇನ್ನು ಸ್ವಲ್ಪ ಹೊತ್ತಿನಲ್ಲಿ ಮದುವೆಯಾಗಬೇಕಿದ್ದ ವರ ಕುಡಿದು ಮದುವೆ ಮಂಟಪಕ್ಕೆ ಬಂದಿದ್ದಾನೆ. ಮದುವೆ ಡ್ರೆಸ್ ನಲ್ಲಿ ಮದ್ಯ ಸೇವಿಸಿ ಕಾರಿನಲ್ಲಿ ಚರ್ಚ್ ಗೆ ಬಂದಿದ್ದರು. ಕಾರಿನಿಂದ ಇಳಿಯಲೂ ಆಗ್ತಾ ಇರಲಿಲ್ಲ ಆತನಿಗೆ. ಕಾರಿನಿಂದ ಇಳಿದಾಗ ಗಲಾಟೆ ಮಾಡಿದರು ಈ ಮದುಮಗ. ಧರ್ಮಗುರುಗಳ ಬಳಿ ಅಸಭ್ಯವಾಗಿ ಮಾತನಾಡಿದ್ದಾನೆ. ಈ ಘಟನೆಯಿಂದ ಮದುವೆಗೆ ಬಂದಿದ್ದವರೆಲ್ಲ ಬೆಚ್ಚಿಬಿದ್ದಿದ್ದಾರೆ.

ಇದನ್ನೂ ಓದಿ: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ-2 ಬರೆಯುವ ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿ 

ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿದರು. ಆದರೂ ಅಳಿಯನ ಗಲಾಟೆ ನಿಲ್ಲಲಿಲ್ಲ. ಈತನ ವಿರುದ್ಧ ಮದ್ಯ ಸೇವಿಸಿ ತೊಂದರೆ ನೀಡಿದ ಆರೋಪದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ವೈದ್ಯಕೀಯ ಪರೀಕ್ಷೆಯಲ್ಲಿ ಮದ್ಯ ಸೇವಿಸಿರುವುದು ಬೆಳಕಿಗೆ ಬಂದಿದೆ. ವಿದೇಶದಲ್ಲಿ ಕೆಲಸ ಮಾಡುತ್ತಿದ್ದ ಯುವಕ ಮದುವೆಗಾಗಿ ರಾಜ್ಯಕ್ಕೆ ಬಂದಿದ್ದ. ಬೆಳಗ್ಗೆಯಿಂದ ಮದ್ಯ ಸೇವಿಸುತ್ತಿರುವುದು ಕಂಡು ಬಂದಿದೆ ಎಂದು ಸಂಬಂಧಿಕರು ತಿಳಿಸಿದ್ದಾರೆ. ಕೊನೆಗೆ ವರನ ತಂಡ ವಧುವಿನ ಕುಟುಂಬಕ್ಕೆ ರೂ.6 ಲಕ್ಷ ನೀಡಲು ನಿರ್ಧರಿಸಿದೆ.

ಇದನ್ನೂ ಓದಿ: Mangaluru: ಉಳ್ಳಾಲದ ವೈದ್ಯ ಯುವತಿ ಪಿಜಿಯಲ್ಲಿ ಸಾವು

ವಿವಿಧ ಕಾರಣಗಳಿಂದ ಮದುವೆಗಳು ಕೊನೆಗೊಳ್ಳುವ ಘಟನೆಗಳು ಸಾಮಾನ್ಯವಾಗಿದೆ. ಕೆಲ ದಿನಗಳ ಹಿಂದೆ ತೆಲಂಗಾಣದಲ್ಲಿ ಇಂತಹದ್ದೇ ಘಟನೆ ನಡೆದಿತ್ತು. ನಿಜಾಮಾಬಾದ್ ಮೂಲದ ಮಹಿಳೆ ಹಾಗೂ ಜಗಿತ್ಯ ಮೂಲದ ಯುವಕನ ಮದುವೆ ನಿಶ್ಚಯವಾಗಿದೆ. ವಧುವಿನ ಮನೆಯಲ್ಲೂ ನಿಶ್ಚಿತಾರ್ಥಕ್ಕೆ ವ್ಯವಸ್ಥೆ ಮಾಡಲಾಗಿತ್ತು. ನಿಶ್ಚಿತಾರ್ಥದಲ್ಲಿ ಕುರಿ ಮಾಂಸ ಬಡಿಸಿಲ್ಲ ಎಂದು ಗಲಾಟೆ ನಡೆದಿದೆ. ವರನ ಮನೆಯವರು ಜಗಳವಾಡಿದ್ದು, ಅಂತಿಮವಾಗಿ, ಈ ಮದುವೆಯನ್ನು ರದ್ದುಗೊಳಿಸಲಾಯಿತು.