Bengaluru: ವಿಡಿಯೋದಲ್ಲಿ ಮಾಡುವಂತೆ S’X ಮಾಡಬೇಕೆಂದು ಗಂಡನ ಕಿರುಕುಳ – ಕಾಲ್ ಗರ್ಲ್ ಕರೆಸಿ ಹೆಂಡತಿ ಎದುರು ಮಾಡಿದ್ದೇನು?

Bengaluru: ದಾಂಪತ್ಯ ಜೀವನದಲ್ಲಿ ಅರ್ಥ ಮಾಡಿಕೊಂಡು ಬಾಳುವೆ ನಡೆಸುವುದು, ಎಲ್ಲವನ್ನು ಸಹಿಸಿಕೊಳ್ಳುವುದು ಅಥವಾ ಯಾವುದೇ ಕಷ್ಟ-ಸುಖಗಳು ಬಂದಾಗ ಜೊತೆಗೆ ಇದ್ದು ಹೊಂದಾಣಿಕೆ ಮಾಡಿಕೊಳ್ಳುವುದು ಮಾತ್ರ ಮುಖ್ಯವಾಗುವುದಿಲ್ಲ. ಇದರೊಂದಿಗೆ ಲೈಂಗಿಕ ಜೀವನವು(Physical Contact) ಕೂಡ ಪ್ರಮುಖವಾಗುತ್ತದೆ. ಆದರೆ ಹಲವರ ಬದುಕಿನಲ್ಲಿ ಬಿರುಕು ಮೂಡಲು ಈ ಲೈಂಗಿಕ ವಿಚಾರವೇ ಕಾರಣವಾಗಿರುತ್ತದೆ. ಅಂತೆಯೇ ಇಲ್ಲೊಂದೆಡೆ ಸಂಭೋಗದ ಕುರಿತು ಗಂಡನೋರ್ವ ತನ್ನ ಹೆಂಡತಿಗೆ ಇನ್ನಿಲ್ಲದ ಕಿರುಕುಳ ನೀಡಿದ್ದಾನೆ. ಕೊನೆಗೆ ಕಾಲ್ ಗರ್ಲ್ ಅನ್ನು ಮನೆಗೆ ಕರೆಸಿಕೊಂಡು ಏನೇನು ಮಾಡಿದ್ದಿನೆಂದು ನೀವೇ ನೋಡಿ.
ಇದನ್ನೂ ಓದಿ: Jammu Kashmir: ಮುಳುಗಿದ ದೋಣಿ; ಶಾಲಾ ಮಕ್ಕಳು ಜಲಸಮಾಧಿ
ಇಂದು ಮೊಬೈಲ್ ಮಾಯೆಯಿಂದ ಸೋಷಿಯಲ್ ಮೀಡಿಯಾಗಳಲ್ಲಿ ತಕ್ಷಣ ಸಿಗುವ ಪೋರ್ನ್ ವಿಡಿಯೋಗಳು ಅನೇಕರ ಜಿವನದ ಮೇಲೆ, ಸಂಸಾರದ ಮೇಲೆ ಪ್ರಭಾವ ಬೀರುತ್ತವೆ. ಸಂಸಾರವನ್ನೇ ಒಡೆದು ಹಾಕುತ್ತವೆ. ಅಂತೆಯೇ ನಮ್ಮ ಬೆಂಗಳೂರಿನ(Bengaluru)ಲ್ಲೊಬ್ಬ ಪತಿರಾಯ ತನ್ನ ಹೆಂಡತಿಗೆ ಅಶ್ಲೀಲ ವಿಡಿಯೋ ನೋಡಿಕೊಂಡು ಅದರಂತೆ ನಾವು ಮಾಡೋಣ ಎಂದು ಹಿಂಸಿಸುತ್ತಿದ್ದಾನೆ. ನಿರಂತರವಾಗಿ ಕಿರುಕುಳ ಕೊಡುತ್ತಿದ್ದಾನೆ. ಅಷ್ಟೇ ಅಲ್ಲದೆ ಹೆಂಡತಿ ಒಪ್ಪದಿದ್ದಕ್ಕೆ ಕಾಲ್ ಗರ್ಲ್ ಮನೆಗೆ ಕರೆಸಿ ಆಕೆಯೆದುರೇ ಅಸಭ್ಯವಾಗಿ ವರ್ತಿಸುತ್ತಾನೆ. ಇದಕ್ಕೆ ಆತನ ಅಪ್ಪ- ಅಮ್ಮ ಕೂಡ ಸಾಥ್ ನೀಡಿದ್ದಾರೆ. ಇದರಿಂದ ನೊಂದ ಪತ್ನಿ ಅತ್ತೆ-ಮಾವ ಸೇರಿ ಗಂಡನ ಮೇಲೆ ದೂರು ದಾಖಲಿಸಿದ್ದಾಳೆ.
ಇದನ್ನೂ ಓದಿ: Hubballi: ಭೀಕರ ಕಾರು ಅಪಘಾತ; ಸ್ಥಳದಲ್ಲೇ ಮೂವರ ದಾರುಣ ಸಾವು
ಏನಿದು ಪ್ರಕರಣ?
ಸಂತ್ರಸ್ತೆಗೆ ಈ ಹಿಂದೆ ಬೇರೆ ವ್ಯಕ್ತಿಯ ಜತೆಗೆ ಮದುವೆಯಾಗಿತ್ತು. ಆದರೆ, ಆ ಮದುವೆ ಇಷ್ಟವಾಗದೆ ಗಂಡನನ್ನು ತೊರೆದು ಹೈದರಾಬಾದ್‌ಗೆ ತೆರಳಿ ನೆಲೆಸಿದ್ದರು. ನಂತರ ಅಲ್ಲಿ ವಿಘ್ನೇಶ್ವರ್ ಜೊತೆ ಪ್ರೀತಿಯಲ್ಲಿ ಬಿದ್ದಿದ್ದಾಳೆ. ಬಳಿಕ ಸಂತ್ರಸ್ತೆ ಹಾಗೂ ವಿಘ್ನೇಶ್ವರನ್ 2018ರಲ್ಲಿ ತಿರುಪತಿಯಲ್ಲಿ ಮದುವೆಯಾಗಿದ್ದಾರೆ. ಆರಂಭದಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತು. ಆದರೆ ನಂತರದಲ್ಲಿ ವಿಘ್ನೇಶ್ವರ್ ಮನೆಯವರೆಲ್ಲರೂ ಸಂತ್ರಸ್ತೆಗೆ ಕಿರುಕಳು ನೀಡಲು ಶುರುಮಾಡಿದ್ದಾರೆ. ಜೀವ ಬೆದರಿಕೆಯನ್ನೂ ಹಾಕಿದ್ದಾರೆ. ಇದು ಮನೆಯವರ ಕಾಟವಾದರೆ ಗಂಡನದ್ದು ಬೇರೆಯದೇ ಕಾಟ.
ಇತ್ತ ಪತಿ ವಿಘ್ನೇಶ್ವರನ್ ಅಶ್ಲೀಲ ವಿಡಿಯೋಗಳನ್ನು ತೋರಿಸಿ, ಆ ಮಾದರಿಯಲ್ಲಿ ಸಂಭೋಗ ಮಾಡುವಂತೆ ಲೈಂಗಿಕ ಕಿರುಕುಳ ನೀಡಿದ್ದಾನೆ. ವಿನಾಕಾರಣ ಜಗಳ ತೆಗೆದು ಹಲವು ಬಾರಿ ಹಲ್ಲೆ ಮಾಡಿದ್ದಾನೆ. 2023ರ ಮೇನಲ್ಲಿ ಹೈದರಾಬಾದ್‌ನಿಂದ ಸಂತ್ರಸ್ತೆಯನ್ನು ಬೆಂಗಳೂರಿಗೆ ಕರೆತಂದಿದ್ದಾನೆ. ಇಲ್ಲಿಯೂ ಆತ ಸರಿಯಾಗಿ ನೋಡಿಕೊಳ್ಳದೆ ಕಿರಕುಳ ಮುಂದುವರೆಸಿದ್ದಾನೆ. ಮನೆಗೆ ಕಾಲ್ ಗರ್ಲ್‌ಗಳನ್ನು ಕರೆಸಿಕೊಂಡು ಸಂತ್ರಸ್ತೆಯ ಎದುರು ಅಸಭ್ಯವಾಗಿ ವರ್ತಿಸಿ ಮಾನಸಿಕ ಕಿರುಕುಳ ನೀಡಿದ್ದಾನೆ.
ಸದ್ಯ 28 ವರ್ಷದ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಜೆ.ಪಿ.ನಗರ 7ನೇ ಹಂತದ ನಿವಾಸಿಗಳಾದ ಪತಿ ವಿಘ್ನೇಶ್ವರನ್(36), ಅತ್ತೆ ವಿಜಯಲಕ್ಷ್ಮೀ(60), ಮಾವ ಕಲೈ ಸೇಲ್ವನ್(63), ನಾದಿನಿ ಪ್ರಿಯದರ್ಶಿನಿ(30) ವಿರುದ್ಧ ಎಫ್‌ಐಆರ್ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.