DK Shivakumar: ಡಿಕೆ ಶಿವಕುಮಾರ್ ಆತ್ಮಹತ್ಯೆ ಮಾಡಿಕೊಂಡರೆ 50 ಕೋಟಿ ಕೊಡುತ್ತೇನೆ – ಬೆಳಗಾವಿಯಲ್ಲಿ ಯತ್ನಾಳ್ ಘೋಷಣೆ

DK Shivakumar: ರೈತರ ವಿಚಾರವಾಗಿ ಹಗುರವಾಗಿ ಮಾತನಾಡಿದ ಸಚಿವ ಶಿವಾನಂದ ಪಾಟೀಲ ಅತ್ಮಹತ್ಯೆ ಮಾಡಿಕೊಂಡರೆ ನಾನು ₹5 ಕೋಟಿ ಪರಿಹಾರ ಕೊಡುತ್ತೇನೆ. ಅವರ ಮಾತನ್ನು ಬೆಂಬಲಿಸಿದ್ಧ ಡಿಸಿಎಂ ಡಿ.ಕೆ.ಶಿವಕುಮಾ‌ರ್ ಆತ್ಮಹತ್ಯೆ ಮಾಡಿಕೊಂಡರೆ ₹50 ಕೋಟಿ ಕೊಡುತ್ತೇನೆ’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ (Basana Gowda Patil yatnal) ಹೇಳಿಕೆ ನೀಡಿದ್ದಾರೆ.

 

ಇದನ್ನು ಓದಿ: Government New Project: ವನ್ಯಜೀವಿಗಳಿಗೆ ಸೋಲಾರ್ ವಿದ್ಯುತ್! ಸರ್ಕಾರಕ್ಕೆ ಹೇಳಲೇಬೇಕು ಬಿಗ್ ಥ್ಯಾಂಕ್ಸ್

ನಿನ್ನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ಚುನಾವಣಾ ಪ್ರಚಾರ ಸಂದರ್ಭ ಮಾತನಾಡಿದ ಅವರು, ‘ರೈತರು ಪರಿಹಾರದ ಆಸೆಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದು ಸಚಿವ ಶಿವಾನಂದ ಅವರು ವಿಧಾನಸೌಧದಲ್ಲೇ ಈ ಹಿಂದೆ ಹೇಳಿಕೆ ನೀಡಿದ್ದಾರೆ. ಅವತ್ತೇ, ‘ನೀವು ಕೂಡಾ ಆತ್ಮಹತ್ಯೆ ಮಾಡಿಕೊಂಡು ತೋರಿಸಿ’ ಎಂದು ನಾನು ಹೇಳಿದ್ದೆ. ಈಗಲೂ ಹೇಳುತ್ತೇನೆ; ನಮ್ಮ ಬಳಿ ಹಣವಿಲ್ಲದಿದ್ದರೂ ಜನರಿಂದ ಸಂಗ್ರಹಿಸಿ ನಿಮ್ಮ ಕುಟುಂಬಕ್ಕೆ ಕೊಡುತ್ತೇವೆ’ ಎಂದು. ಅವರು ಹೇಳಿದ್ದಾರೆ.

ಇದನ್ನೂ ಓದಿ: Hyderabad: 60 ವರ್ಷದ ವ್ಯಕ್ತಿಯ ದೇಹದಿಂದ 418 ಕಿಡ್ನಿ ಕಲ್ಲುಗಳನ್ನು ತೆಗೆದ ವೈದ್ಯರು : ಹೈದರಾಬಾದ್ ವೈದ್ಯರ ಅಪರೂಪದ ಸಾಧನೆ

‘ತಾನು ಪಂಚಮಸಾಲಿ ಎಂದು ಪುತ್ರಿ ಪರವಾಗಿ ಮತ ಕೇಳುತ್ತಿರುವ ಶಿವಾನಂದ ಪಾಟೀಲ ಅವರು, ಪಂಚಮಸಾಲಿ ಹೋರಾಟ ನಡೆದಾಗ ಇವರೆಲ್ಲ ಎಲ್ಲಿ ಹೋಗಿದ್ದರು’ ಎಂದು ಯತ್ನಾಳ್ ಖಾರವಾಗಿ ಕುಟುಕಿದ್ದಾರೆ. ‘ಬಿಜೆಪಿ ಪಕ್ಷವು 400 ಸ್ಥಾನಗಳನ್ನು ಗೆದ್ದರೂ ಸಂವಿಧಾನ ಬದಲಾವಣೆ ಮಾಡುವುದಿಲ್ಲ. ಬದಲಾವಣೆಯ ಮಾತು ಆಡಿದವರಿಗೆ ಪಕ್ಷದ ಟಿಕೆಟ್ ಅನ್ನೇ ಕೊಟ್ಟಿಲ್ಲ’ ಎಂದವರು ಹೇಳಿದ್ದಾರೆ.

ಈ ಸಂದರ್ಭ ಮಾತನಾಡಿದ ಬಿಜೆಪಿ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, “ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಮೂಲಕ ಜನರನ್ನು ಹರಕೆಯ ಕುರಿ ಮಾಡುತ್ತಿದೆ. ಮುಂದೊಂದು ದಿನ ದೇಶವನ್ನೇ ಬಲಿ ಕೊಡುತ್ತದೆ’ ಎಂದಿದ್ದಾರೆ.

Leave A Reply

Your email address will not be published.