MLA Ashok Rai: ದೈವದ ವಿಚಾರದಲ್ಲಿ ಬಿಜೆಪಿಯವರ ಸಿದ್ಧಾಂತವೇ ಬೇರೆ : ದೈವಕ್ಕೆ ನ್ಯಾಯ ಕೊಡಿಸಲು ಇವರು ಯಾರು? : ಪುತ್ತೂರು ಶಾಸಕ ಅಶೋಕ್ ರೈ

MLA Ashok Rai: ಇನ್ನೇನು ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು ಪಕ್ಷ ಪಕ್ಷಗಳ ನಡುವೆ ಕಾದಾಟ ಶುರುವಾಗಿದೆ, ಇದೀಗ ಪುತ್ತೂರು ಶಾಸಕ ಅಶೋಕ್ ರೈ ಅವರು ಬಿಜೆಪಿಯನ್ನು ಟೀಕಿಸಿದ್ದು, “ಬಿಜೆಪಿಯವರು ತಾವು ಚುನಾವಣೆಯಲ್ಲಿ ಜಯಗಳಿಸಿದರೆ ಕೊರಗಜ್ಜನಿಗೆ ಹಾಗೂ ಇತರ ದೈವ ದೇವರುಗಳಿಗೆ ನ್ಯಾಯ ಕೊಡಿಸುವುದಾಗಿ ಹೇಳುತ್ತಿದ್ದು, ಕೊರಗಜ್ಜನಿಗೆ ನ್ಯಾಯ ಕೊಡಿಸಲು ಬಿಜೆಪಿಯವರಿಗೆ ಮಾತ್ರವಲ್ಲ ಯಾರಿಂದಲೂ ಅದು ಸಾಧ್ಯವಿಲ್ಲ. ಏಕೆಂದರೆ ನಮಗೆಲ್ಲರಿಗೂ ನ್ಯಾಯ ನ್ಯಾಯ ನೀಡುವುದು ಕೊರಗಜ್ಜ” ಎಂದು ತಿಳಿಸಿದ್ದಾರೆ.

 

ಇದನ್ನೂ ಓದಿ: Dakshina Kannada: ಸೌಜನ್ಯ NOTA ಚಳವಳಿಗೆ ಇನ್ನೂ ಧುಮುಕದ ಒಕ್ಕಲಿಗರ ಸಂಘಗಳು; ನಾಯಕರೇ ಸಾವಾಗಿರೋದು ನಿಮ್ಮ ಮನೆಯಲ್ಲಿ !!!

ಇತ್ತೀಚೆಗೆ ಕೊಡಿಪ್ಪಾಡಿಯಲ್ಲಿ ಹೊಸದಾದ ವಲಯ ಕಾಂಗ್ರೆಸ್ ಕಚೇರಿಯನ್ನು ಉದ್ಘಾಟಿಸಿದ ಅವರು, ಬಿಜೆಪಿಯವರಿಗೆ ಚುನಾವಣೆ ಬಂದಾಗ ಮಾತ್ರ ದೈವ ದೇವರುಗಳು ನೆನಪಾಗುತ್ತವೆ. ಬಿಜೆಪಿಗರಿಗೆ ಚುನಾವಣೆ ಸಂದರ್ಭದಲ್ಲಿ ಮಾತ್ರ ದೈವಗಳು ನೆನಪಾಗುತ್ತವೆ. ಯಾರೇ ಆಗಲಿ ದೈವಗಳ ಬಗ್ಗೆ ಈ ರೀತಿ ಹೇಳಿಕೆ ನೀಡುವುದು ಸರಿ ಬರುವುದಿಲ್ಲ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Canada: ‘ಡಾಕ್ಟ್ರೇ, ಡಾಕ್ಟ್ರೇ ಪ್ಲೀಸ್ ಈ ಎರಡು ಕೈ ಬೆರಳು ಕತ್ತರಿಸಿ’ ಎಂದು ಹಠ ಹಿಡಿದ ಯುವಕ – ಕಾರಣ ?

ಕೆಲವರು ನಕಲಿ ಹಿಂದುತ್ವದ ಮೂಲಕ ಜನರ ಭಾವನೆಗಳ ಜೊತೆ ಚೆಲ್ಲಾಟವಾಡುತ್ತಿದ್ದು ಅಂತಹವರಿಗೆ ದೇವರೇ ಸರಿಯಾದ ಬುದ್ಧಿ ಕಲಿಸುತ್ತಾನೆ. ನಾವುಗಳು ನಮ್ಮ ಕಷ್ಟ ಪರಿಹರಿಸಿಕೊಳ್ಳಲು ದೇವರ ಬಳಿ ಹೋಗುತ್ತೇವೆ ಆದರೆ ಬಿಜೆಪಿಯವರ ಸಿದ್ಧಾಂತವೆ ಬೇರೆಯಾಗಿದೆ ಎಂದು ಕುಟುಕಿದ್ದಾರೆ.

Leave A Reply

Your email address will not be published.