Suicide: ಖ್ಯಾತ ಯೌಟ್ಯೂಬ್ ಜೋಡಿ 7 ಅಂತಸ್ತಿನ ಅಪಾರ್ಟ್ಮೆಂಟ್ ನಿಂದ ಹಾರಿ ಆತ್ಮಹತ್ಯೆ

Suicide: ಖ್ಯಾತ ಯುಟ್ಯೂಬರ್ ಜೋಡಿಯೊಂದು ಹರಿಯಾಣದ ಬಹದುರ್ಗಡ್‌ನಲ್ಲಿ ವಾಸವಾಗಿದ್ದ ತಮ್ಮ 7 ಅಂತಸ್ತಿನ ಅಪಾರ್ಟ್ಮೆಂಟ್ ನಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.

 

ಇದನ್ನೂ ಓದಿ: US: ಅಪ್ರಾಪ್ತ ವಿದ್ಯಾರ್ಥಿಯೊಂದಿಗೆ ಶಿಕ್ಷಕಿಯ ಲವ್ವಿ ಡವ್ವಿ – ಬೆತ್ತಲೆಯಾಗಿಯೇ ಪೋಲಿಸರಿಗೆ ತಗಲಾಕ್ಕೊಂಡ್ಲು !!

ಮೃತ ದುರ್ದೈವಿಗಳನ್ನು ಗರ್ವಿತ್ (25), ನಂದಿನಿ (22) ಎಂದು ಪೊಲೀಸರು ಗುರುತಿಸಿದ್ದಾರೆ. ಗರ್ವಿತ್ ಹಾಗೂ ನಂದಿನಿ ಪರಸ್ಪರ ಲಿವಿಂಗ್ ರಿಲೇಷನ್ಶಿಪ್ ನಲ್ಲಿದ್ದರು, ಇಬ್ಬರೂ ಸಹ ಯೂಟ್ಯೂಬ್ ನಲ್ಲಿ ಕಂಟೆಂಟ್ ಕ್ರಿಯೇಟರ್ಗಳಾಗಿದ್ದರು. ಇತ್ತೀಚಿಗಷ್ಟೇ ಡೆಹ್ರಾಡೂನ್‌ನಿಂದ ಬಹದುರ್ಗಡ್‌ಗೆ ಅವರ ತಂಡದ ಸಮೇತ ಆಗಮಿಸಿದ್ದರು.

ಇದನ್ನೂ ಓದಿ: Parliment Election: ಕಾಂಗ್ರೆಸ್ ಅಭ್ಯರ್ಥಿಯ ಪ್ರಚಾರಕ್ಕೆ ಜನರೇ ಸಂಗ್ರಹಿಸಿ ಕೊಟ್ಟರು 50 ಲಕ್ಷ !!

ಯಾವುದೋ ಒಂದು ವಿಚಾರಕ್ಕೆ ಇಬ್ಬರ ನಡುವೆ ಗಲಾಟೆ ನಡೆದಿದ್ದು, ಬಳಿಕ ಇಬ್ಬರೂ ಸಹ ಜೊತೆಗೂಡಿ ಸಾಯೋದಕ್ಕೆ ನಿರ್ಧರಿಸಿ, ಬಿಲ್ಡಿಂಗ್ ನಿಂದ ಹಾರಿ ಸತ್ತಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.

ಇನ್ನು ಆತ್ಮಹತ್ಯೆ ಪ್ರಕರಣ ಬಹದುರ್ಗಡ್‌ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

Leave A Reply

Your email address will not be published.