B.S.Yediyurappa: ಬಾಲಕಿಗೆ ಲೈಂಗಿಕ ಕಿರುಕುಳ ಆರೋಪ; ಬಿಎಸ್ ಯಡಿಯೂರಪ್ಪ ಧ್ವನಿ ಮಾದರಿ ಸಂಗ್ರಹ

B.S.Yediyurappa: ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪ ಎದುರಿಸುತ್ತಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಶುಕ್ರವಾರ ವಿಚಾರಣೆ ನಡೆಸಿರುವ ಸಿಐಡಿ ಅಧಿಕಾರಿಗಳು, ಅವರ ‘ಧ್ವನಿ’ ಮಾದರಿಯನ್ನು ಸಂಗ್ರಹಿಸಿದ್ದಾರೆ.

ಇದನ್ನೂ ಓದಿ: CET Exam: ವಿದ್ಯಾರ್ಥಿಗಳ ಇಚ್ಛಾನುಸಾರವೇ ಸಿಇಟಿ ಕೇಂದ್ರ ಹಂಚಿಕೆ- ಕೆಇಎ

ತನಿಖಾಧಿಕಾರಿ ನೋಟಿಸ್‌ ಜಾರಿ ಹಿನ್ನೆಲೆಯಲ್ಲಿ ಆರೋಪಿ ಯಡಿಯೂರಪ್ಪ ಕಾರ್ಲ್ ಟನ್‌ ರಸ್ತೆಯ ಸಿಐಡಿ ಕಚೇರಿಗೆ ಆಗಮಿಸಿ ದ್ದರು. ಸುಮಾರು ಒಂದು ಗಂಟೆ ಕಾಲ ತನಿಖಾಧಿಕಾರಿ ಮುಂದೆ ಹಾಜರಾಗಿದ್ದರು. ಆರೋಪಿ ಯಡಿಯೂರಪ್ಪ ಸಂತ್ರಸ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದನ್ನು ಆಕ್ಷೇಪಿಸಿದೆ ಎಂದು ಸಂತ್ರಸ್ತೆ ತಾಯಿ ವಿಡಿಯೊವೊಂದನ್ನು ತನಿಖಾಧಿಕಾರಿಗಳಿಗೆ ನೀಡಿದ್ದಾರೆ. ಈ ವಿಡಿಯೊದಲ್ಲಿ ಘಟನೆ ಕುರಿತು ಬಿಎಸ್‌ವೈ ಹಾಗೂ ಮಹಿಳೆ ನಡುವೆ ಮಾತುಕತೆ ನಡೆದಿದೆ.

ಇದನ್ನೂ ಓದಿ: Crime: ಕಳ್ಳತನದಲ್ಲೂ ದೇವರಿಗೂ ಪಾಲು ಕೊಡುತ್ತಿದ್ದ ಕಳ್ಳರು

‘ವಿಡಿಯೊದಲ್ಲಿ ಬಿಎಸ್‌ವೈ ಸಂಭಾಷಣೆ ಖಚಿತಪಡಬೇಕಿದೆ. ಈ ನಿಟ್ಟಿನಲ್ಲಿ ಅವರ ಧ್ವನಿ ಮಾದರಿ ಸಂಗ್ರಹಿಸಲಾಗಿದೆ. ಈ

ಮಾದರಿಯನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಲಾಗುವುದು. ವರದಿ ಬಂದ ಬಳಿಕ ಮುಂದಿನ ಕಾನೂನು ಕ್ರಮ ಜರುಗಿಸಲಾಗುತ್ತದೆ. ಪ್ರಕರಣಕ್ಕೆ ಸಂಬಂಧಿಸಿ ದಂತೆ ಆರೋಪಿ ಹೇಳಿಕೆ ದಾಖಲಿಸಿಲ್ಲ. ಅಗತ್ಯಬಿದ್ದರೆ ಮತ್ತೊಮ್ಮೆ ವಿಚಾರಣೆಗೆ ಕರೆಸಲಾಗುವುದು,” ಎಂದು ಸಿಐಡಿ ಉನ್ನತ ಮೂಲಗಳು ತಿಳಿಸಿವೆ.

ಸಹಾಯ ಯಾಚಿಸಿ ಮನೆಗೆ ತೆರಳಿದ್ದ ವೇಳೆ 17 ವರ್ಷದ ಅಪ್ರಾಪ್ತಗೆ ಬಿ.ಎಸ್. ಯಡಿಯೂರಪ್ಪ ಲೈಂಗಿಕ ಕಿರುಕುಳ ನೀಡಿರುವ ಆರೋಪ ಸಂಬಂಧ ಸದಾಶಿವನಗರ ಠಾಣೆಯಲ್ಲಿ ಎಫ್‌ಐಆ‌ರ್ ದಾಖಲಾಗಿತ್ತು. ಈ ಪ್ರಕರಣದ ಬಗ್ಗೆ ಸಿಐಡಿ ತನಿಖೆ ನಡೆಸುತ್ತಿದೆ.

ಸಿಐಡಿ ತನಿಖೆ ಸಮರ್ಪಕವಾಗಿಲ್ಲ. ಆರೋಪಿಗೆ ಅನುಕೂಲವಾಗುವಂತೆ ತನಿಖೆ ನಡೆಯುತ್ತಿದೆ. ಹೀಗಾಗಿ, ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಕೋರಿ ಸಂತ್ರಸ್ತೆ ತಾಯಿ ಇತ್ತೀಚೆಗೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ಪತ್ರ ಬರೆದಿದ್ದರು.

Leave A Reply

Your email address will not be published.