PM Modi: ಸಂವಿದಾನವನ್ನು ನಾನಲ್ಲ, ಅಂಬೇಡ್ಕರ್ ಬಂದರೂ ಬದಲಾಯಿಸಲು ಆಗಲ್ಲ – ಪ್ರಧಾನಿ ಮೋದಿ

PM Modi: ಲೋಕಸಭಾ ಚುನಾವಣೆ(Parliament Election) ಹತ್ತಿರವಾದಂತೆ ರಾಷ್ಟ್ರಾದ್ಯಂತ ಸಂವಿಧಾನ ಬದಲಾವಣೆ ವಿಚಾರ ಭಾರಿ ಚರ್ಚೆಯಾಗುತ್ತಿದೆ. ಬಿಜೆಪಿ(BJP) ಸಂಸದರೊಬ್ಬರು ಹುಟ್ಟು ಹಾಕಿದಂತಹ ವಿಚಾರ ಇದೀಗ ದೇಶಾದ್ಯಂತ ಸದ್ದು ಮಾಡುತ್ತಿದೆ. ಅದರಲ್ಲೂ ಕಾಂಗ್ರೆಸ್ ಇದನ್ನೇ ಬಂಡವಾಳ ಮಾಡಿಕೊಂಡು ಬಿಜೆಪಿಯ ವಿರುದ್ಧ ವಾಗ್ದಾಳಿ ನಡೆಸುತ್ತಿದೆ. ಇದು ಬಿಜೆಪಿಗೂ ಕೊಂಚ ಇರುಸು ಮುರುಸು ಉಂಟುಮಾಡಿದ್ದು ಸತ್ಯ. ಆದರೆ ಈಗ ಇದೆಲ್ಲದಕ್ಕೂ ಪ್ರಧಾನಿ ಮೋದಿ(PM Modi) ಅವರು ಪೂರ್ಣವಿರಾಮ ನೀಡಿದ್ದಾರೆ.
ಇದನ್ನೂ ಓದಿ: Arecanut Price: ಅಡಿಕೆ ಬೆಲೆಯಲ್ಲಿ ಬಂಪರ್ ಏರಿಕೆ !!
ಇಂದು(ಏ 12) ಪ್ರಧಾನಿ ನರೇಂದ್ರ ಮೋದಿ ಲೋಕಸಭಾ ಚುನಾವಣೆ ಪ್ರಯುಕ್ತ ರಾಜಸ್ಥಾನದ(Rajasthan) ಬಾರ್ಮರ್‌ನಲ್ಲಿ ಬಿಜೆಪಿ ಅಭ್ಯರ್ಥಿ ಕೈಲಾಶ್ ಚೌಧರಿ ಅವರನ್ನು ಬೆಂಬಲಿಸಿ ಆದರ್ಶ ಕ್ರೀಡಾಂಗಣದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ ಪ್ರಧಾನಿ ಮೋದಿ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಅಲ್ಲದೆ ಸಂವಿಧಾನ ಬದಲಾವಣೆ ಕುರಿತು ಪ್ರತಿಕ್ರಿಯಿಸಿದ ಅವರು ಸಂವಿಧಾನವೇ(Constution) ನಮಗೆ ಗೀತೆ, ಬೈಬಲ್, ಕುರಾನ್ ಇದ್ದಂತೆ. ಅದನ್ನು ಬಿಜೆಪಿ ಬಿಡಿ, ನನ್ನನ್ನೂ ಬಿಡಿ, ಬಾಬಾ ಸಾಹೇಬ್ ಅಂಬೇಡ್ಕರ್(Ambedkhar) ಅವರೇ ಬಂದರೂ ಬದಲಾಯಿಸಲು ಸಾಧ್ಯವಿಲ್ಲ ಎಂದು ಪ್ರಧಾನಿ ಹೇಳಿದರು.
ಇದನ್ನೂ ಓದಿ: Lifestyle: ಲೈಂಗಿಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಈ ಆಹಾರಗಳು ಅದ್ಭುತವಾಗಿ ಕೆಲಸ ಮಾಡುತ್ತವೆ : ಅವು ಯಾವುವು ಗೊತ್ತಾ ?
ಬಳಿಕ ಮಾತನಾಡಿದ ಅವರು ಕಾಂಗ್ರೆಸ್(Congress) ವಿರುದ್ಧ, ಇಂಡಿಯಾ ಕೂಟದ ವಿರುದ್ಧ ಕಿಡಿಕಾರಿದರು. ಬಾಬಾ ಸಾಹೇಬರನ್ನು ಬದುಕಿದ್ದಾಗ ಚುನಾವಣೆಯಲ್ಲಿ ಕಾಂಗ್ರೆಸ್ (Congress) ಸೋಲುವಂತೆ ಮಾಡಿತ್ತು. ಅವರಿಗೆ ಭಾರತ ರತ್ನ ಕೊಡಲಿಲ್ಲ. ತುರ್ತು ಪರಿಸ್ಥಿತಿ ಹೇರಿ ಸಂವಿಧಾನವನ್ನು ರದ್ದುಪಡಿಸಲು ಯತ್ನಿಸಿದ ಕಾಂಗ್ರೆಸ್ ಈಗ ಬಿಜೆಪಿ ವಿರುದ್ಧ ಆರೋಪ ಮಾಡುತ್ತಿದೆ. ಭಾರತ ಮೈತ್ರಿಕೂಟದ ಸದಸ್ಯರು ಭಾರತದ ವಿರುದ್ಧ ಎಷ್ಟು ದ್ವೇಷವನ್ನು ತುಂಬಿದ್ದಾರೆ ಎಂಬುದು ಅವರ ಪ್ರಣಾಳಿಕೆಯಲ್ಲಿ ಗೋಚರಿಸುತ್ತದೆ ಎಂದು ಮೋದಿ ಹೇಳಿದರು. ಇದೀಗ ಈ ಮೈತ್ರಿಕೂಟಕ್ಕೆ ಸೇರ್ಪಡೆಗೊಂಡಿರುವ ಮತ್ತೊಂದು ಪಕ್ಷ ದೇಶದ ವಿರುದ್ಧ ಅತ್ಯಂತ ಅಪಾಯಕಾರಿ ಘೋಷಣೆ ಮಾಡಿದೆ. ಭಾರತದ ಪರಮಾಣು ಶಸ್ತ್ರಾಸ್ತ್ರಗಳನ್ನು ನಾಶಪಡಿಸುತ್ತೇವೆ ಎಂದು ಅವರು ತಮ್ಮ ಪ್ರಣಾಳಿಕೆಯಲ್ಲಿ ಬರೆದಿದ್ದಾರೆ ಎಂದು ಹರಿಹಾಯ್ದರು.
ಅಲ್ಲದೆ ದೇಶದಲ್ಲಿ ಪ್ರಪ್ರಥಮ ಬಾರಿಗೆ ಸಂವಿಧಾನ ದಿನಾಚರಣೆಗೆ ಚಾಲನೆ ನೀಡಿದವರು ಮೋದಿ, ಈ ಕಾಂಗ್ರೆಸ್ ಅವರು ಅದನ್ನೂ ಆಚರಿಸಲು ಹಿಂದೇಟು ಹಾಕಿದರು. ಬಾಬಾಸಾಹೇಬ್ ಅಂಬೇಡ್ಕರ್ ಅವರಿಗೆ ಸಂಬಂಧಿಸಿದ ಐದು ಯಾತ್ರಾಸ್ಥಳಗಳನ್ನು ನಾನು ಅಭಿವೃದ್ಧಿಪಡಿಸಿದ್ದೇನೆ, ಆದ್ದರಿಂದ ಕಾಂಗ್ರೆಸ್ ಮತ್ತು ಭಾರತ ಮೈತ್ರಿಕೂಟದ ಸುಳ್ಳುಗಳ ಬಗ್ಗೆ ಎಚ್ಚರದಿಂದಿರಬೇಕು. ಬಾಬಾಸಾಹೇಬ್ ಅಂಬೇಡ್ಕರ್ ಮತ್ತು ಸಂವಿಧಾನವನ್ನು ಅವರು ಅವಮಾನಿಸಿದ್ದಾರೆ,” ಎಂದು ಅವರು ಹೇಳಿದರು.