of your HTML document.

Shivaram Hebbar: ಲೋಕಸಭೆ ಚುನಾವಣೆ ಹೊತ್ತಲ್ಲೇ ಬಿಜೆಪಿಗೆ ಶಾಕಿಂಗ್‌ ನ್ಯೂಸ್‌; ಕಾಂಗ್ರೆಸ್‌ ಸೇರಲಿರುವ ಬಿಜೆಪಿ ಶಾಸಕ ಶಿವರಾಮ್‌ ಹೆಬ್ಬಾರ್‌ ಪುತ್ರ

Shivaram Hebbar: ಬಿಜೆಪಿ ಶಾಸಕ ಶಿವರಾಂ ಹೆಬ್ಬಾರ್‌ ಅವರ ಪುತ್ರ ವಿವೇಕ್‌ ಹೆಬ್ಬಾರ್‌ ಅವರು ಇಂದು ಕಾಂಗ್ರೆಸ್‌ ಸೇರ್ಪಡೆಯಾಗಲಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: Mangaluru: ಮಂಗಳೂರಿನಲ್ಲಿ ಎಳನೀರು ಕುಡಿದ ಸುಮಾರು 15 ಮಂದಿ ಏಕಾಏಕಿ ಅಸ್ವಸ್ಥ

2023 ರ ವಿಧಾನಸಭಾ ಚುನಾವಣೆ ಬಳಿಕ ಬಿಜೆಪಿಯಿಂದ ದೂರವ ಕಾಯ್ದುಕೊಂಡ ಯಲ್ಲಾಪುರ ಬಿಜೆಪಿ ಶಾಸಕ ಶಿವರಾಂ ಹೆಬ್ಬಾರ್‌ ಅವರು ರಾಜ್ಯಸಭಾ ಚುನಾವಣೆ ನಂತರ ಮತದಾನ ಮಾಡದೇ ಸುಮ್ಮನಿದ್ದರು. ಅಲ್ಲದೇ ಸಿಎಂ ಸಿದ್ದರಾಮಯ್ಯ ಸೇರಿ ಕೈ ನಾಯಕರನ್ನೆಲ್ಲ ಹೊಗಳುತ್ತಿದ್ದ ಇವರ ವಿರುದ್ಧ ಬಿಜೆಪಿಯವರಿಗೆ ಅನುಮಾನ ಆಗಲೇ ಮೂಡಿತ್ತು. ಲೋಕಸಭಾ ಚುನಾವಣೆ ಬಂದರೂ ಶಿವರಾಂ ಹೆಬ್ಬಾರ್‌ ಬಿಜೆಪಿ ಅಭ್ಯರ್ಥಿ ಪರ ಪ್ರಚಾರಕ್ಕೆ ಹೋಗಿಲ್ಲ.

ಇದನ್ನೂ ಓದಿ: Bengaluru: ಫೇಸ್ಬುಕ್‌ನಲ್ಲಿ ಕಾರ್ಲ್‌ಗರ್ಲ್‌ಗಾಗಿ ಕರೆಮಾಡಿ ಎಂದು ಪತ್ನಿಯ ಫೋಟೋ ಸಹಿತ ನಂಬರ್‌ ಹಾಕಿ ಪೋಸ್ಟ್‌ ಮಾಡಿದ ಪತಿ

ಇದೆಲ್ಲ ಬೆಳವಣಿಗೆಯ ನಡುವೆ ಅವರ ಪುತ್ರ ಇಂದೇ ಕಾಂಗ್ರೆಸ್‌ ಸೇರ್ಪಡೆಯಾಗುತ್ತಿದ್ದಾರೆ ಎಂದು ಮೂಲಗಳು ತಿಳಿಸಿದೆ ಎಂದು ವರದಿಯಾಗಿದೆ. ಮಾಹಿತಿ ಪ್ರಕಾರ ಬನವಾಸಿಯಲ್ಲಿ ಇಂದು ವಿವೇಕ್‌ ಹೆಬ್ಬಾರ್‌ ತಮ್ಮ ಅಪಾರವಾದ ಅಭಿಮಾನಿ ಬಳಗದಿಂದ ಕಾಂಗ್ರೆಸ್‌ ಪಕ್ಷಕ್ಕೆ ಸೇರಲಿದ್ದಾರೆ. ಸಮಯ ನಿಗದಿಯಾಗಿದ್ದು, ಶಿವರಾಮ್‌ ಹೆಬ್ಬಾರ್‌ ಅವರ ಮೌನಕ್ಕೆ ತೆರೆ ಬಿದ್ದಿದೆ. ಇವರು ಕೂಡಾ ಕಾಂಗ್ರೆಸ್‌ ಅತಿ ಶೀಘ್ರದಲ್ಲೇ ಸೇರ್ಪಡೆಯಾಗಲಿದ್ದಾರೆ ಎನ್ನುವ ಮಾಹಿತಿ ಇದೆ.

Leave A Reply

Your email address will not be published.