Home Social Bengaluru: ಫೇಸ್ಬುಕ್‌ನಲ್ಲಿ ಕಾರ್ಲ್‌ಗರ್ಲ್‌ಗಾಗಿ ಕರೆಮಾಡಿ ಎಂದು ಪತ್ನಿಯ ಫೋಟೋ ಸಹಿತ ನಂಬರ್‌ ಹಾಕಿ ಪೋಸ್ಟ್‌ ಮಾಡಿದ...

Bengaluru: ಫೇಸ್ಬುಕ್‌ನಲ್ಲಿ ಕಾರ್ಲ್‌ಗರ್ಲ್‌ಗಾಗಿ ಕರೆಮಾಡಿ ಎಂದು ಪತ್ನಿಯ ಫೋಟೋ ಸಹಿತ ನಂಬರ್‌ ಹಾಕಿ ಪೋಸ್ಟ್‌ ಮಾಡಿದ ಪತಿ

Bengaluru

Hindu neighbor gifts plot of land

Hindu neighbour gifts land to Muslim journalist

Bengaluru: ಕಾರ್ಲ್‌ ಗರ್ಲ್‌ ಬೇಕಿದ್ದರೆ ಈ ನಂಬರ್‌ಗೆ ಕರೆ ಮಾಡಿ ಎಂದು ತನ್ನ ಪತ್ನಿಯ ಫೋಟೋ ಹಾಗೂ ನಂಬರನ್ನು ಫೇಸ್ಬುಕ್‌ನಲ್ಲಿ ಹಾಕಿದ ವಿಲಕ್ಷಣ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ನಂದಿನಿ ಲೇಔಟ್‌ ಪೊಲೀಸ್‌ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

ಇದನ್ನೂ ಓದಿ: CET Hall Ticket: ಸಿಇಟಿ ಹಾಲ್ ಟಿಕೆಟ್ ಡೌನ್‌ಲೋಡ್ ಮಾಡಿಕೊಳ್ಳಿ

ಬೆಂಗಳೂರಿನ ನಂದಿನಿ ಲೇಔಟ್‌ನ ಸತ್ಯನಾರಾಯಣ ರೆಡ್ಡಿ ಹಾಗೂ ಆತನ ಪತ್ನಿ ಇವರಿಬ್ಬರ ಮಧ್ಯೆ ದಾಂಪತ್ಯ ಕಲಹವಿತ್ತು. 2019 ರಲ್ಲಿ ಇವರಿಬ್ಬರು ಮದುವೆಯಾಗಿದ್ದು, ಇದೀಗ ಕಳೆದ ಒಂದು ವರ್ಷದಿಂದ ಇವರು ಬೇರೆ ಬೇರೆ ಇದ್ದಾರೆ. ಪತಿ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡುತ್ತಿದ್ದರಿಂದ ಪತ್ನಿ ಈತನಿಂದ ದೂರವಾಗಿದ್ದು, ಇದನ್ನೇ ನೆಪ ಮಾಡಿದ ಆರೋಪಿ ಪತಿ ಸೇಡು ತೀರಿಸಿಕೊಳ್ಳಲು ಸಾಮಾಜಿಕ ಮಾಧ್ಯಮ ಫೇಸ್ಬುಕ್‌ನಲ್ಲಿ ಈ ರೀತಿಯ ಪೋಸ್ಟ್‌ ಹಾಕಿದ್ದಾನೆ ಎಂದು ವರದಿಯಾಗಿದೆ.

ಇದನ್ನೂ ಓದಿ: CET Exam: ಸಿಇಟಿ ಶುಲ್ಕ ಪಾವತಿ & ಪರೀಕ್ಷೆ ಆಯ್ಕೆಗೆ ಏಪ್ರಿಲ್ 12ರವರೆಗೆ ಗಡುವು

ಈತ ಅನ್ಯ ಹೆಸರಿನಲ್ಲಿ ಫೇಸ್ಬುಕ್‌ ಪೇಜ್‌ ಕ್ರಿಯೇಟ್‌ ಮಾಡಿ ಅದರಲ್ಲಿ ಪತ್ನಿಯ ದೂರವಾಣಿ ಸಂಖ್ಯೆ, ಫೊಟೋ ಮತ್ತು ಆಕೆಯ ಸಹೋದರನ ಮೊಬೈಲ್‌ ಸಂಖ್ಯೆ ಹಾಕಿ ಪೋಸ್ಟ್‌ ಮಾಡಿದ್ದ. ಜೊತೆಗೆ ಕಾಲ್‌ಗರ್ಲ್‌ ಬೇಕಿದ್ದಲ್ಲಿ ಸಂಪರ್ಕ ಮಾಡಿ ಎಂದು ಬೇರೆ ಹಾಕಿದ್ದು, ನಂತರ ಹೆಂಡತಿ ಮತ್ತು ಸಹೋದರನಿಗೆ ಸಿಕ್ಕಾಪಟ್ಟೆ ಫೋನ್‌ ಕರೆ ಬರಲು ಪ್ರಾರಂಭವಾಗಿದ್ದರಿಂದ ಬೇಸತ್ತ ಇವರಿಬ್ಬರು ನಂದಿನಿ ಲೇಔಟ್‌ ಪೊಲೀಸ್‌ ಠಾಣೆಯಲ್ಲಿ ದೂರನ್ನು ದಾಖಲು ಮಾಡಿದ್ದಾರೆ.