Women Health: ರಾತ್ರಿಯ ಸಮಯದಲ್ಲಿ ಬ್ರಾ ಧರಿಸಿ ಮಲಗುವುದರಿಂದಾಗುವ  ದುಷ್ಪರಿಣಾಮ ಏನು ಅಂತ ನಿಮಗೆ ಗೊತ್ತಾ? : ಇಲ್ಲಿದೆ ನೋಡಿ ಉತ್ತರ

Women Health: ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ಒಳ ಉಡುಪು  ಧರಿಸಿರುವುದರ ಬಗ್ಗೆ ಅವರವರ ವೈಯಕ್ತಿಕ ಆದ್ಯತೆ ಇರುತ್ತದೆ. ನೀವು ಪ್ರತಿನಿತ್ಯ ಮಲಗುವಾಗ ಬ್ರಾ ಧರಿಸಬೇಕೆ ಅಥವಾ ಬೇಡವೇ ಎಂಬುದರ ಬಗ್ಗೆ ಎಂದಾದರೂ ಯೋಚಿಸಿದ್ದೀರಾ? ಒಂದು ವೇಳೆ ಬ್ರಾ ದರಿಸದೆಯೇ ಮಲಗಿದರೆ ಅದರಿಂದ ಆಗುವ ಪ್ರಯೋಜನವೇನು? ಬ್ರಾ ಧರಿಸಿ ಮಲಗುವುದರಿಂದ ಏನಾದರೂ ತೊಂದರೆ ಆಗುತ್ತದೆಯೇ? ಎಂಬ ಪ್ರಶ್ನೆ ನಿಮ್ಮನ್ನು ಕಾಡುತ್ತಿದ್ದರೆ  ಅದಕ್ಕೆ ಇಲ್ಲಿದೆ ಉತ್ತರ.

ಮನುಷ್ಯನ ದೇಹದ ಪ್ರತಿ ಅಂಗಾಂಗಗಳಿಗೂ ರಕ್ತ ಸಂಚಾರ ಅತಿ ಮುಖ್ಯ ಒಂದು ವೇಳೆ ನಾವು ಅದನ್ನು ಬಿಗಿಯಾದ ಬಟ್ಟೆ ಧರಿಸುವುದರ ಮೂಲಕ ಅದನ್ನು ತಡೆಹಿಡಿದರೆ ಅದು ದೇಹಕ್ಕೆ ಹಾನಿ ಉಂಟು ಮಾಡಿದಂತಾಗುತ್ತದೆ. ವಿಶೇಷವಾಗಿ ಮಹಿಳೆಯರಲ್ಲಿ  ಸ್ತನ ಆರೋಗ್ಯ ಮತ್ತು ರಕ್ತದ ಹರಿವು ತುಂಬಾ ಮುಖ್ಯ. ಸಾಮಾನ್ಯವಾಗಿ ಮಹಿಳೆಯರು ತಮ್ಮ ಸ್ತನದ ಮೇಲ್ಬಾಗದಲ್ಲಿ ಬ್ರಾ ಧರಿಸುತ್ತಾರೆ. ಈ ಬ್ರಾಗಳನ್ನು ತುಂಬಾ ಸಮಯ ಹಾಕಿ ಕೊಳ್ಳುವುದರಿಂದ ತುಂಬಾ  ಬಿಗಿಯಾಗಿ ರಕ್ತ ಸಂಚಾರಕ್ಕೆ ಮತ್ತು ಸ್ತನದ ಆರೋಗ್ಯದ ಮೇಲೆ ತುಂಬಾ ದುಷ್ಪರಿಣಾಮ ಬೀರುತ್ತದೆ.

ನಮ್ಮಲ್ಲಿ ಅನೇಕ ಮಹಿಳೆಯರು ರಾತ್ರಿಯ ಸಮಯದಲ್ಲಿ ಬ್ರಾ ಧರಿಸಬೇಕೋ ಬೇಡವೋ? ಎಂಬ ಅನುಮಾನ ಕಾಡುತ್ತಿರುತ್ತದೆ. ಆದರೆ ಇದಕ್ಕೆ ಸರಿಯಾದ ವೈಜ್ಞಾನಿಕ/ವೈದ್ಯಕೀಯ ಕಾರಣಗಳು ಇದುವರೆಗೂ ತಿಳಿದುಬಂದಿಲ್ಲ. ಆದರೆ ಮಹಿಳೆಯರ ಸ್ತನದ ರಕ್ತ ಸಂಚಾರ ಹಾಗೂ ಆರೋಗ್ಯದ ದೃಷ್ಟಿಯಿಂದ ರಾತ್ರಿಯ ಹೊತ್ತು ಬ್ರಾ ಧರಿಸಬಾರದು.

ರಾತ್ರಿಯ ಸಮಯದಲ್ಲಿ ಏಕೆ ಬ್ರಾ ಧರಿಸಬಾರದು ಎಂಬುದಕ್ಕೆ ಕಾರಣಗಳು :

ಆರಾಮದಾಯಕ ನಿದ್ರೆಗಾಗಿ : ರಾತ್ರಿಯ ಸಮಯದಲ್ಲಿ ಬ್ರಾ ಧರಿಸುವುದರಿಂದ ಮಲಗುವಾಗ ಕಿರಿಕಿರಿ ಎನಿಸುವುದರಿಂದ, ಆರಾಮದಾಯಕ ನಿದ್ರೆ ಮಾಡಲು ಸಾಧ್ಯವಾಗುವುದಿಲ್ಲ. ದೀರ್ಘ ಸಮಯದ ವರೆಗೆ ಬ್ರಾ ಧರಿಸುವುದರಿಂದ ಉಸಿರುಗಟ್ಟಿದಂತಾಗಿ ನಿದ್ರೆ ಬರುವುದಿಲ್ಲ. ಆದ್ದರಿಂದ ಆರಾಮದಾಯಕ ನಿದ್ರೆ ಮಾಡಲು ಬ್ರಾ ತೆಗೆದು ಮಲಗುವುದರಿಂದ ನೆಮ್ಮದಿಯ ನಿದ್ರೆ ಮಾಡಬಹುದು.

ಸೋಂಕು ತಪ್ಪಿಸಲು : ಹೆಚ್ಚಿನ ‌ಸಮಯ ಬ್ರಾ ಧರಿಸುವುದರಿಂದ ಸ್ತನಗಳ ಸುತ್ತಲೂ ಬೆವರು ಸಂಗ್ರಹವಾಗುತ್ತದೆ, ಅಲ್ಲಿ ಬ್ಯಾಕ್ಟೀರಿಯಾಗಳು ಮತ್ತು ಶಿಲೀಂಧ್ರಗಳ ಸೋಂಕನ್ನು ಉಂಟುಮಾಡುತ್ತವೆ. ಇದರಿಂದಾಗಿ ದಿನವಿಡೀ ಧರಿಸಿದ ನಂತರ ರಾತ್ರಿಯಲ್ಲಿ ನಿಮ್ಮ ಬ್ರಾ ತೆಗೆದು ಮಲಗುವುದು ಉತ್ತಮ.

ತುರಿಕೆಯ ಸಮಸ್ಯೆಯಿಂದ ರಕ್ಷಿಸಿಕೊಳ್ಳಲು : ಹಗಲು ರಾತ್ರಿ ಬ್ರಾ ಧರಿಸುವುದರಿಂದ ಮಹಿಳೆಗೆ ಸಿಸ್ಟ್ ಸಮಸ್ಯೆ ಉಂಟಾಗುತ್ತದೆ. ಇದನ್ನು ದೀರ್ಘಕಾಲದವರೆಗೆ ಧರಿಸುವುದರಿಂದ ಚರ್ಮದ ತುರಿಕೆ ಸಮಸ್ಯೆಗಳು ಉಂಟಾಗಬಹುದು. ಇದಲ್ಲದೆ, ಬ್ರೆಸ್ಟ್ ಟ್ಯೂಮರ್ ಸಮಸ್ಯೆಯ ಸಾಧ್ಯತೆಯೂ ಹೆಚ್ಚು. ಆದ್ದರಿಂದ ರಾತ್ರಿಯ ಸಮಯದಲ್ಲಿ ಬ್ರಾ ಧರಿಸದಿರುವುದು ಒಳ್ಳೆಯದು.

ರಕ್ತದ ಹರಿವನ್ನು ತಡೆಯುವುದರಿಂದ ರಕ್ಷಿಸಲು : ರಾತ್ರಿ ಸಮಯದಲ್ಲಿ ಬ್ರಾ ಧರಿಸಿ ಮಲಗುವುದರಿಂದ ಸ್ತನಗಳಲ್ಲಿ ಸರಿಯಾದ ರಕ್ತ ಸಂಚಾರವಾಗದೆ  ಅಂಗಾಂಶಗಳಿಗೆ ಹಾನಿ ಉಂಟಾಗುತ್ತದೆ. ಆದ್ದರಿಂದ ಬ್ರಾ ತೆಗೆದು ಮಲಗುವುದರಿಂದ ರಕ್ತ ಸಂಚಾರವಾಗಿ ಸ್ತನದ ಆರೋಗ್ಯವನ್ನು ಹೆಚ್ಚಿಸುತ್ತದೆ.

ಅತಿಯಾದ ಬೆನ್ನು ನೋವು : ದಿನವಿಡೀ ಬ್ರಾ ಧರಿಸಿದ ಬಳಿಕ, ನೀವು ರಾತ್ರಿಯ ಸಮಯದಲ್ಲಿಯೂ  ಅದನ್ನು ತೆಗೆಯದಿದ್ದರೆ ಬೆನ್ನುನೋವಿನ ಸಮಸ್ಯೆ ಉಂಟಾಗುತ್ತದೆ. ನೆನಪಿರಲಿ, ಬಿಗಿಯಾದ ಅಥವಾ ಚಿಕ್ಕದಾದ ಬ್ರಾಗಳು ಬೆನ್ನುನೋವಿಗೆ ಕಾರಣವಾಗುತ್ತದೆ.

ಕೊನೆಯದಾಗಿ ಬ್ರಾ ಧರಿಸುವುದು ಬಿಡುವುದು ನಿಮ್ಮ ಅಂತಿಮ ಆಯ್ಕೆಯಾಗಿರುತ್ತದೆ. ಕೆಲವೊಬ್ಬರಿಗೆ ಬ್ರಾ ಧರಿಸಿ ಮಲಗುವುದು ಆರಾಮ ಎನಿಸಿದರೆ ಇನ್ನು ಕೆಲವರಿಗೆ ಅದನ್ನು ತೆಗೆದು ಮಲಗುವುದರಿಂದ ಆರಾಮದಾಯಕ ಎನಿಸಿ ಬಹುದು. ಆದರೆ ಆರೋಗ್ಯದ ದೃಷ್ಟಿಯಿಂದ ಬ್ರಾ ತೆಗೆದು ಮಲಗುವುದು ಉತ್ತಮ.

ಇದನ್ನೂ ಓದಿ: JDS-BJP ಮೈತ್ರಿಗೆ ಬಿಗ್ ಶಾಕ್ ಕೊಟ್ಟ ರೇವಣ್ಣ; ಹಾಸನದಲ್ಲಿ ಪ್ರಜ್ವಲ್ ರೇವಣ್ಣ ಜೊತೆ ಎಚ್.ಡಿ ರೇವಣ್ಣ ಕೂಡ ಸ್ಪರ್ಧೆ !!ಕೊನೇ ಕ್ಷಣದಲ್ಲಿ ಅಚ್ಚರಿ ನಡೆ

Leave A Reply

Your email address will not be published.