Home Latest Health Updates Kannada Lifestyle: ಬೇಸಿಗೆಯಲ್ಲಿ ಗರ್ಭಿಣಿ ಸ್ತ್ರೀಯರು ತಮ್ಮ ಆರೋಗ್ಯ ಕಾಪಾಡಿಕೊಳ್ಳಲು ಏನು ಮಾಡಬೇಕು? : ಇಲ್ಲಿದೆ ನೋಡಿ...

Lifestyle: ಬೇಸಿಗೆಯಲ್ಲಿ ಗರ್ಭಿಣಿ ಸ್ತ್ರೀಯರು ತಮ್ಮ ಆರೋಗ್ಯ ಕಾಪಾಡಿಕೊಳ್ಳಲು ಏನು ಮಾಡಬೇಕು? : ಇಲ್ಲಿದೆ ನೋಡಿ ಉತ್ತರ

Lifestyle

Hindu neighbor gifts plot of land

Hindu neighbour gifts land to Muslim journalist

Lifestyle: ಬಿರು ಬೇಸಿಗೆಯ ಋತುವಿನಲ್ಲಿ ಗರ್ಭಧಾರಣೆಯು  ಸವಾಲಾಗಿರುತ್ತದೆ ಏಕೆಂದರೆ ಈ ಸಮಯದಲ್ಲಿ ದೇಹದ ಉಷ್ಣತೆಯು ಸ್ವಲ್ಪ ಹೆಚ್ಚಾಗುವುದರೊಂದಿಗೆ ಬಿಸಿ ಮತ್ತು ಆರ್ದ ವಾತಾವರಣ ಸಂಬಂಧಿತ ಕಾಯಿಲೆಗಳು ಅಪಾಯವನ್ನುಂಟುಮಾಡುತ್ತವೆ.

ಇದನ್ನೂ ಓದಿ: Soujanya Fight Committee: ಸೌಜನ್ಯ ಹೋರಾಟ ಸಮಿತಿಯಿಂದ ಪತ್ರಿಕಾಗೋಷ್ಠಿ; ನೋಟ ಅಭಿಯಾನ

ದೇಹವನ್ನು ತಂಪಾಗಿರಿಸುವ ಆರಾಮದಾಯಕವಾದ ಹತ್ತಿ ಬಟ್ಟೆಗಳೊಂದಿಗೆ ಬೇಸಿಗೆಯ ಶಾಖವನ್ನು ನಿಭಾಯಿಸಲು ಹೆಚ್ಚಿನ ನೀರಿನ ಸೇವನೆ ಮಾಡಬೇಕೆಂದು ತಜ್ಞರು ಶಿಫಾರಸು ಮಾಡುತ್ತಾರೆ.

ದಿನನಿತ್ಯದ 7-8 ಗ್ಲಾಸ್ ನೀರಿನ ಹೊರತಾಗಿ, ಗರ್ಭಿಣಿ ಸ್ತ್ರೀಯರು ತಮ್ಮ ಆಹಾರದಲ್ಲಿ ಸೌತೆಕಾಯಿ, ಕಲ್ಲಂಗಡಿ ಮತ್ತು ತೆಂಗಿನಕಾಯಿಯಂತಹ ಹಣ್ಣುಗಳು ಮತ್ತು ತರಕಾರಿಗಳನ್ನು ಸಹ ಸವಿಸಬೇಕು. ಇದು ದೇಹದಲ್ಲಿ ನೀರಿನ ಪ್ರಮಾಣವನ್ನು ಹೆಚ್ಚಿಸುವುದು ಮಾತ್ರವಲ್ಲದೆ ಸ್ನಾಯು ಮತ್ತು ನರಗಳ ಕಾರ್ಯವನ್ನು ನಿಯಂತ್ರಿಸುತ್ತದೆ ಮತ್ತು ಹಾನಿಗೊಳಗಾದ ಅಂಗಾಂಶಗಳನ್ನು ಪುನರ್ ನಿರ್ಮಿಸಲು ಸಹಾಯ ಮಾಡುವ ಎಲೆಕ್ಟೋಲೈಟ್‌ಗಳನ್ನು ಸಮತೋಲನಗೊಳಿಸುತ್ತದೆ.

ಇದನ್ನು ಓದಿ: Viral Video: ರೈಲಲ್ಲಿ ಹುಡುಗನನ್ನು ಬಾತ್ ರೂಮ್’ಗೆ ಎಳೆದೊಯ್ದು ಲಾಕ್ ಮಾಡಿಕೊಂಡ ಮಂಗಳಮುಖಿ !! ಮುಂದಾಗಿದ್ದೇ ವಿಚಿತ್ರ

ಬೇಸಿಗೆಯ ಗರ್ಭಾವಸ್ಥೆಯಲ್ಲಿ ಅನುಸರಿಸಬೇಕಾದ ಪ್ರಮುಖ ಸಲಹೆಗಳು :

ಬೇಸಿಗೆ ಕಾಲದಲ್ಲಿ ಗರ್ಭಿಣಿ ಸ್ತ್ರೀಯರು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ನಿರ್ದಿಷ್ಟ ಕ್ರಮಗಳನ್ನು ಅನುಸರಿಸಬೇಕಾಗುತ್ತದೆ.

ತಂಪಾದ ವಾತಾವರಣದಲ್ಲಿವುದು : ಅಧಿಕ ಬಿಸಿಯಾಗುವ ಅಪಾಯವನ್ನು ತಗ್ಗಿಸಲು ಫ್ಯಾನ್ ಅಥವಾ ಹವಾನಿಯಂತ್ರಣವನ್ನು ಬಳಸುವ ಮೂಲಕ ತಂಪಾದ ವಾತಾವರಣವನ್ನು ಕಾಪಾಡಿಕೊಳ್ಳಿ, ಇದು ಶಾಖದ ಬಳಲಿಕೆಯಿಂದ ರಕ್ಷಣೆ ನೀಡುತ್ತದೆ.

ಹೈಡೇಟಿಂಗ್ ಆಹಾರಗಳ ಸೇವನೆ : ದೇಹದಲ್ಲಿ ನಿರ್ಜಲೀಕರಣವನ್ನು ಎದುರಿಸಲು ಹೆಚ್ಚಿನ ನೀರಿನ ಅಂಶವುಳ್ಳ ಕಲ್ಲಂಗಡಿ, ಸೌತೆಕಾಯಿ ಮತ್ತು ಎಳನೀರನ್ನು ನಿತ್ಯ ಆಹಾರದಲ್ಲಿ ತೆಗೆದುಕೊಳ್ಳುವುದು.

ಬಿಸಿಲಿನಲ್ಲಿ ಹೊರಗೆ ಹೋಗದಿರುವುದು : ವಿಶೇಷವಾಗಿ ಸೂರ್ಯನೆತ್ತಿಯ ಮೇಲೆ ಬಂದಾಗ ಮನೆಯಿಂದ ಹೊರಗೆ ಹೆಜ್ಜೆ ಹಾಕಬೇಡಿ. ಒಂದು ವೇಳೆ ಹೋಗಲೇಬೇಕೆಂದಾದರೆ ನೀವು ಹೊರಾಂಗಣದಲ್ಲಿ ಸನ್‌ಸ್ಮಿನ್ ಅನ್ನು ಬಳಸುವುದು.

ಆರಾಮದಾಯಕ ಉಡುಪು ಧರಿಸಿ : ಸಡಿಲವಾದ ಹತ್ತಿ ಉಡುಪುಗಳನ್ನು ಧರಿಸಿ ಮತ್ತು ಸಂಶ್ಲೇಷಿತ, ಬಿಗಿಯಾದ ಬಟ್ಟೆಗಳನ್ನು ಆದಷ್ಟು ಧರಿಸದೆ ಇದ್ದರೆ ಒಳ್ಳೆಯದು.

ನಿಮ್ಮ ದೇಹದ ಮಾತನ್ನು ಆಲಿಸಿ : ಕೊನೆಯದಾಗಿ, ತಲೆತಿರುಗುವಿಕೆ, ಅತಿಯಾದ ಆಯಾಸದಂತಹ ಎಚ್ಚರಿಕೆಯ ಚಿಹ್ನೆಗಳನ್ನು ಗಮನಿಸಿ ಮತ್ತು ಅಗತ್ಯವಿದ್ದರೆ ತಕ್ಷಣ ವೈದ್ಯಕೀಯ ನೆರವು ಪಡೆಯಿರಿ.