Home ದಕ್ಷಿಣ ಕನ್ನಡ Dakshina Kannada (Nelyadi): ಮದುವೆಗೆ ತೆರಳುತ್ತಿದ್ದ ಬಸ್ಸು-ಕಂಟೈನರ್‌ ನಡುವೆ ಅಪಘಾತ; 20 ಮಂದಿಗೆ ಗಾಯ, ಆಸ್ಪತ್ರೆಗೆ...

Dakshina Kannada (Nelyadi): ಮದುವೆಗೆ ತೆರಳುತ್ತಿದ್ದ ಬಸ್ಸು-ಕಂಟೈನರ್‌ ನಡುವೆ ಅಪಘಾತ; 20 ಮಂದಿಗೆ ಗಾಯ, ಆಸ್ಪತ್ರೆಗೆ ದಾಖಲು

Dakshina Kannada (Nelyadi)

Hindu neighbor gifts plot of land

Hindu neighbour gifts land to Muslim journalist

Dakshina Kannada (Nelyadi): ಖಾಸಗಿ ಬಸ್‌ ಮತ್ತು ಕಂಟೈನರ್‌ ವಾಹನದ ನಡುವೆ ಅಪಘಾತವೊಂದು ಸಂಭವಿಸಿ ಹಲವರು ಗಂಭೀರವಾಗಿ ಗಾಯಗೊಂಡ ಘಟನೆಯೊಂದು ಇಂದು ನಡೆದಿದೆ.

ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ನೆಲ್ಯಾಡಿ ಸಮೀಪದ ಉದನೆ ಎಂಬಲ್ಲಿ ಈ ಭೀಕರ ಅಪಘಾತ ಸಂಭವಿಸಿದೆ. ವಿವಾಹ ಕಾರ್ಯಕ್ರಮವೊಂದಕ್ಕೆ ಭಾಗಿಯಾಗಲು ಹೊರಟ ಖಾಸಗಿ ಬಸ್‌ ಇನ್ನೊಂದು ಬಸ್ಸನ್ನು ಓವರ್‌ಟೇಕ್‌ ಮಾಡುವ ಭರದಲ್ಲಿ ಈ ಅಪಘಾತ ಸಂಭವಿಸಿದೆ ಎಂದು ವರದಿಯಾಗಿದೆ.

ಗಂಭೀರವಾಗಿ ಗಾಯಗೊಂಡ ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಬಸ್ಸು ಪಿರಿಯಾಪಟ್ಟಣದಿಂದ ಧರ್ಮಸ್ಥಳಕ್ಕೆ ತೆರಳುತ್ತಿದ್ದು, ವರನ ಮದುವೆ ದಿಬ್ಬಣದ ಬಸ್ಸು ಇದಾಗಿತ್ತು. ಬಸ್‌ನಲ್ಲಿ ಪ್ರಯಾಣ ಮಾಡುತ್ತಿದ್ದ 20 ಮಂದಿ ಗಾಯಗೊಂಡಿದ್ದು, ಅವರನ್ನು ನೆಲ್ಯಾಡಿ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ನೆಲ್ಯಾಡಿ ಹೊರಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: NOTA For Soujanya: ಬಿಜೆಪಿ ನಾಯಕರಿಗೆ ತಲೆನೋವಾದ ಸೌಜನ್ಯ ನೋಟಾ ಅಭಿಯಾನ, 7 ಲಕ್ಷ ಹೋರಾಟಗಾರರ ಮತ ಯಾರಿಗೆ ?!