Cow Smugglers: ತುಮಕೂರು: ಕಂಟೇನರ್ ವಾಹನದಲ್ಲಿ ಅಕ್ರಮ ಗೋ ಸಾಗಾಟ
Cow Smugglers: ಅಕ್ರಮ ಗೋವು ಸಾಗಾಟ ಮಾಡುತ್ತಿದ್ದವರನ್ನು ಬಜರಂಗದಳ ಕಾರ್ಯಕರ್ತರು ಪತ್ತೆ ಮಾಡಿರುವ ಘಟನೆಯೊಂದು ತುಮಕೂರಿನ ಕ್ಯಾತ್ಸಂದ್ರ ಬಳಿಯಿರು ಟೋಲ್ ಬಳಿ ದಾಳಿ ಮಾಡಿದ ಸಂದರ್ಭದಲ್ಲಿ ಪತ್ತೆಯಾಗಿದೆ. ಕಂಟೇನರ್ನಲ್ಲಿ ಒಟ್ಟು 20 ಗೋವುಗಳು ಇರುವುದು ಕಂಡು ಬಂದಿದೆ.
ಚಿತ್ರದುರ್ಗದಿಂದ ತುಮಕೂರು ಮಾರ್ಗವಾಗಿ ಬೆಂಗಳೂರು ಕಡೆಗೆ ಹೋಗುತ್ತಿದ್ದ ಈ ಕಂಟೇನರ್ನಲ್ಲಿ 20 ಗೋವುಗಳನ್ನು ಅತಿ ಹಿಂಸಾತ್ಮಕ ರೀತಿಯಲ್ಲಿ ಸಾಗಣೆ ಮಾಡಲಾಗುತ್ತಿತ್ತು. ಇದೀಗ 2020 ರ ಗೋ ಹತ್ಯೆ ನಿಷೇಧ ಕಾನೂನು ಕಾಯ್ದೆ ಅನ್ವಯ ಕ್ಯಾತ್ಸಂದ್ರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಇದನ್ನೂ ಓದಿ: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ವಾರಾಂತ್ಯಕ್ಕೆ ವರುಣನ ಆಗಮನ; ನಿಮ್ಮ ಜಿಲ್ಲೆ ಇದೆಯೇ? ಚೆಕ್ ಮಾಡಿ
ಹಾಸನದಲ್ಲಿ ಗೋಮಾಂಸದ ಅಕ್ರಮ ಮಾರಾಟದ ಜಾಲವೊಂದು ಪತ್ತೆಯಾಗಿದ್ದು, ಮಾಂಸ ಮಾರಾಟಕ್ಕಾಗಿ ದುರುಳರು ಸುಮಾರು 60ಕ್ಕೂ ಅಧಿಕ ಗೋವುಗಳ ವಧೆ ಮಾಡಿದ್ದಾರೆ. ಈ ಘಟನೆ ಜಿಲ್ಲೆಯ ಚನ್ನರಾಯಪಟ್ಟಣದ ಬಾಗೂರು ರಸ್ತೆಯಲ್ಲಿ ನಡೆದಿದೆ. ಪೊಲೀಸರು ನಿಖರ ಮಾಹಿತಿ ಮೇರೆಗೆ ದಾಳಿ ನಡೆಸಿದ್ದು, ಈ ಸಂದರ್ಭದಲ್ಲಿ ಐದು ಗೋವುಗಳನ್ನು ರಕ್ಷಣೆ ಮಾಡಿದ್ದು, 60 ಗೋವುಗಳನ್ನು ಕೊಂದು ಅವುಗಳನ್ನು ನೇತು ಹಾಕಲಾಗಿದೆ ಎಂದು ವರದಿಯಾಗಿದೆ. ಪೊಲೀಸರು 10 ಸಾವಿರ ಕೆಜಿ ಗೋಮಾಂಸವನ್ನು ವಶಪಡಿಸಿದ್ದಾರೆ.
ಗೋವುಗಳ ಸಂಹರಿಸಿ ಅವುಗಳ ರಕ್ತವನ್ನು ಕೆರೆಗೆ ಬಿಡುತ್ತಿದ್ದರು ಎಂಬ ಮಾಹಿತಿ ಕೂಡಾ ಪೊಲೀಸರಿಗೆ ಇತ್ತು. ಗೋಮಾಂಸವನ್ನು ವಶಪಡಿಸಿಕೊಂಡಿದ್ದಾರೆ ಪೊಲೀಸರು. ಮೊಹಮ್ಮದ್ ಅಬ್ದುಲ್ ಹಕ್ ಎಂಬುವವರ ವಿರುದ್ಧ ಗೋ ಮಾಂಸ ಅಕ್ರಮ ಮಾರಾಟದ ಆರೋಪವಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: HSRP: ಇಂತಹ ವಾಹನಗಳಿಗೆ HSRP ನಂಬರ್ ಪ್ಲೇಟ್ ಅಳವಡಿಕೆ ಸಾಧ್ಯವಿಲ್ಲ !!