China: ಅರುಣಾಚಲ ಪ್ರದೇಶದ 30 ಸ್ಥಳಗಳಿಗೆ ಹೊಸ ಹೆಸರು ನಾಮಕರಣ ಮಾಡಿದ ಚೀನಾ
China: ಅರುಣಾಚಲ ಪ್ರದೇಶ ತನ್ನದು ಎಂಬ ವಾದ ಮುಂದುವರಿಸಿರುವ ಚೀನಾ, ಅರುಣಾಚಲ ಪ್ರದೇಶ ವಿವಿಧ ಸ್ಥಳಗಳಿಗೆ 30 ಹೊಸ ಚೀನೀ ಹೆಸರುಗಳಿರುವ 4ನೇ ಪಟ್ಟಿ ಬಿಡುಗಡೆ ಮಾಡಿದೆ.
ಅರುಣಾಚಲ ಚೀನಾದ್ದಲ್ಲ ಎಂದು ಭಾರತ ಅನೇಕ ಬಾರಿ ಹೇಳಿದ್ದು, ಅರುಣಾಚಲ ಪ್ರದೇಶದ ಮೇಲೆ ಚೀನಾದ ಹಕ್ಕು ಮಂಡನೆಯನ್ನು ಭಾರತ ತಿರಸ್ಕರಿಸಿದೆ. ಆದರೂ ಚೀನಾ ಮಾತ್ರ, ಅರುಣಾಚಲ ತನ್ನ ಅವಿಭಾಜ್ಯ ಅಂಗ ಎಂದು ಹೇಳುತ್ತಲೇ ಇದೆ. ಈ ನಿಮಿತ್ತ ಚೀನಾದ ನಾಗರಿಕ ವ್ಯವಹಾರಗಳ ಸಚಿವಾಲಯವು ಅರುಣಾಚಲ ಪ್ರದೇಶಕ್ಕೆ ‘ಜಂಗ್ವಾನ್’ ಎಂದು ಹೆಸರಿಟ್ಟು, ರಾಜ್ಯದ 30 ಊರುಗಳ 4ನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದು ದಕ್ಷಿಣ ಟಿಬೆಟ್‌ನ ಭಾಗ ಎಂಬುದು ಚೀನಾದ ಪ್ರತಿಪಾದನೆಯಾಗಿದೆ.
ಈ ಹಿಂದೆ ಚೀನಾದ ನಾಗರಿಕ ವ್ಯವಹಾರ ಸಚಿವಾಲಯವು ಅರುಣಾಚಲದ 6 ಸ್ಥಳಗಳ ಹೆಸರುಗಳುಳ್ಳ ಮೊದಲ ಪಟ್ಟಿಯನ್ನು 2017 ರಲ್ಲಿ ಬಿಡುಗಡೆ ಮಾಡಿತ್ತು. 15 ಸ್ಥಳಗಳ ಎರಡನೇ ಪಟ್ಟಿಯನ್ನು 2021ರಲ್ಲಿ ಹಾಗೂ 2023ರಲ್ಲಿ 11 ಸ್ಥಳಗಳ 3ನೇ ಪಟ್ಟಿಯನ್ನು ಬಿಡುಗಡೆ ಮಾಡಿತ್ತು.