HSRP: ಇಂತಹ ವಾಹನಗಳಿಗೆ HSRP ನಂಬರ್ ಪ್ಲೇಟ್ ಅಳವಡಿಕೆ ಸಾಧ್ಯವಿಲ್ಲ !!
HSRP: ಹೆಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಸಲು ಸಾರಿಗೆ ಇಲಾಖೆ ಮೂರು ತಿಂಗಳು ಕಾಲಾವಕಾಶ ನೀಡಿದೆ. ಅಂದರೆ ಮೇ 31 ಕೊನೆಯ ದಿನಾಂಕ ನಿಗದಿ ಮಾಡಿ ಆದೇಶ ಹೊರಡಿಸಿದೆ. HSRP ಹಾಕಿಸದಿದ್ದರೂ ಇದುವರೆಗೂ ಏನೋ ಸರ್ಕಾರ ಗಡುವುಗಳನ್ನು ವಿಸ್ತರಿಸುತ್ತಾ ಬಂದಿದೆ. ಆದರೀಗ 2019ರ ಮೊದಲು ಖರೀದಿಸಿ ನೋಂದಣಿ ಮಾಡಿಕೊಂಡಿದ್ದರೂ ಈ ಇಂತಹ ವಾಹನಗಳಿಗೆ HSRP ನಂಬರ್ ಪ್ಲೇಟ್ ಅಳವಡಿಕೆ ಸಾಧ್ಯವಿಲ್ಲ ಎನ್ನಲಾಗಿದೆ.
ದೇಶದಲ್ಲಿ 2019 ರ ಏಪ್ರಿಲ್ 1 ಕ್ಕಿಂತ ಮೊದಲು ನೋಂದಣಿಯಾದ ವಾಹನಗಳು ಮೇ 31ರ ಒಳಗಾಗಿ High Security Registration Plate (HSRP) ಅಳವಡಿಸಿಕೊಳ್ಳಬೇಕು. ಇದು ಕಡ್ಡಾಯ ಕೂಡ. ಇಲ್ಲವಾದರೆ ಭಾರೀ ದಂಡ ಕಟ್ಟಬೇಕಾದೀತು. ಈ ಬಗ್ಗೆ RTO ಖಡಕ್ ವಾರ್ನಿಂಗ್ ನೀಡಿದೆ. ಇನ್ನು ಮುಂದೆ ಗಡುವು ವಿಸ್ತರಿಸುವುದು ಡೌಟ್ ಎನ್ನಲಾಗಿದೆ. ಈ ಬೆನ್ನಲ್ಲೇ ಹೊಸ ಗೊಂದಲವೊಂದು ಮುನ್ನಲೆಗೆ ಬಂದಿದ್ದು ಕೆಲವು ವಾಹನಗಳಿಗೆ HSRP ಹಾಕಿಸಲು ಆಗುವುದಿಲ್ಲ ಎನ್ನಲಾಗಿದೆ.
ಹೌದು, ದ್ವಿಚಕ್ರ ವಾಹನ ಆಗಿರಲಿ ಇಲ್ಲವೇ ನಾಲ್ಕು ಚಕ್ರಗಳ ಕಾರ್ ಆಗಿರಲಿ ಯಾವುದೇ ವಾಹನಗಳಾದರೂ ಕೂಡ ಟ್ರಾನ್ಸ್ಪೋರ್ಟ್ ವಿಭಾಗಕ್ಕೆ ಸಂಬಂಧಪಟ್ಟಂತಹ ರಿಜಿಸ್ಟ್ರೇಷನ್ ಅಂದ್ರೆ RC ಆನ್ಲೈನ್ನಲ್ಲಿ ಇಲ್ಲವಾದಲ್ಲಿ ಅವರು ಈ ರೀತಿಯ ನಂಬರ್ ಪ್ಲೇಟ್ ಅನ್ನು ಹಾಕಿಕೊಳ್ಳುವ ಹಾಗಿಲ್ಲ ಎಂಬುದಾಗಿ ತಿಳಿದುಬಂದಿದೆ. ಆನ್ಲೈನ್ನಲ್ಲಿ ಆರ್ ಸಿ ಮಾಡುವಂತಹ ಪ್ರಕ್ರಿಯೆಯನ್ನು ಟ್ರಾನ್ಸ್ಪೋರ್ಟ್ ವಿಭಾಗ ನಿಲ್ಲಿಸಿರುವ ಕಾರಣದಿಂದಾಗಿಯೇ ಈ ನಿಯಮವನ್ನು ಜಾರಿಗೆ ತರಲಾಗಿದೆ.
ಮೇ 31 ರ ಬಳಿಕವೂ HARP ನಂಬರ್ ಪ್ಲೇಟ್ ಅಳವಡಿಸದಿದ್ದರೆ ಕಟ್ಟಬೇಕಾದ ದಂಡ:
HSRP Number Plate ಇಲ್ಲದ ವಾಹನ ಮಾಲೀಕರೆ ಎಚ್ಚರ. ಯಾಕೆಂದರೆ ನೀವು ಈ ನಂಬರ್ ಪ್ಲೇಟ್ ಅಳವಡಿಸದೆ ಮೊದಲ ಬಾರಿಗೆ ರಸ್ತೆಗಿಳಿದರೆ 1000 ದಂಡ ಪಾವತಿಸಬೇಕು. ಇದರಿಂದಲೂ ಎಚ್ಚರಗೊಳ್ಳದೆ ನಂಬರ್ ಪ್ಲೇಟ್ ಹಾಕಿಸದೆ ಎರಡನೇ ಬಾರಿ ರಸ್ತೆಗಿಳಿದರೆ 2000 ಹಾಗೂ ಪದೇ ಪದೇ ಇದೆ ತಪ್ಪಾದರೆ ಇನ್ ಹೆಚ್ಚಿನ ದಂಡ ವಿಧಿಸಲು ಸಾರಿಗೆ ಇಲಾಖೆ ನಿರ್ಧರಿಸಿದೆ. ಹೀಗಾಗಿ ದಯವಿಟ್ಟು ಎಲ್ಲರೂ ಮೇ 31ರ ಒಳಗೆ ಸರ್ಕಾರದ ಸೂಚನೆಂತೆ HSRP ಅಳವಡಿಸಿ.
HSRP ನಂಬರ್ ಪ್ಲೇಟ್ ಪಡೆಯುವುದು ಹೇಗೆ?
ಮೊದಲಿಗೆ https://transport.karnataka.gov.in ಅಥವಾ www.siam.in ಗೆ ಭೇಟಿ ನೀಡಿ ನಂತರ Book HSRP ನ್ನು ಕ್ಲಿಕ್ ಮಾಡಿ.
• ವಾಹನ ತಯಾರಕರನ್ನು ಆಯ್ಕೆ ಮಾಡಿ
• ವಾಹನದ ಮೂಲ ವಿವರ ಭರ್ತಿ ಮಾಡಿ
• ಡೀಲರ್ ಸ್ಥಳವನ್ನು ಆಯ್ಕೆ ಮಾಡಿ (HSRP ಅಳವಡಿಕೆಗೆ ನಿಮ್ಮ ಅನುಕೂಲಕ್ಕೆ ತಕ್ಕಂತೆ)
• HSRP ಶುಲ್ಕವನ್ನು ನಗದು ರೂಪದಲ್ಲಿ ಪಾವತಿ ಮಾಡಲು ಅವಕಾಶವಿಲ್ಲ, ಹಾಗಾಗಿ ಆನ್ಲೈನ್ನಲ್ಲಿ ಪಾವತಿಸಿ.
• ಆವಾಗ, ವಾಹನ ಮಾಲೀಕರ ಮೊಬೈಲ್ ಸಂಖ್ಯೆಗೆ ಒಟಿಪಿ ರವಾನಿಸಲಾಗುವುದು.
• ನಿಮಗೆ ಯಾವಗ ಸೂಕ್ತ ಅನಿಸುತ್ತದೆಯೋ ಅದಕ್ಕೆ ತಕ್ಕಂತೆ HSRP ಅಳವಡಿಕೆಯ ದಿನಾಂಕ ಮತ್ತು ಸಮಯವನ್ನು ಆಯ್ಕೆ ಮಾಡಿ
• ನಂತರ ನಿಮ್ಮ ವಾಹನದ ಯಾವುದೇ ತಯಾರಕ/ ಡೀಲರ್ ಸಂಸ್ಥೆಗೆ ಭೇಟಿ ನೀಡಿ.
ಇದನ್ನೂ ಓದಿ: Belthangady Crime: ಕಾಂಗ್ರೆಸ್ ಕಾರ್ಯಕರ್ತನ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ