CM Siddaramaia: ದೇವೇಗೌಡರದ್ದು ಅನುಕೂಲ ಸಿಂಧು ರಾಜಕಾರಣ : ಸಿಎಂ ಸಿದ್ದರಾಮಯ್ಯ
ಇನ್ನೇನು ಕೆಲವೇ ದಿನಗಳಲ್ಲಿ ಲೋಕಸಭಾ ಚುನಾವಣೆ ನಡೆಯಲಿದ್ದು, ಈ ನಡುವೆ ರಾಜಕೀಯ ನಾಯಕರ ನಡುವೆ ಪರಸ್ಪರ ಕಚ್ಚಾಟಗಳು ಸಹ ಶುರುವಾಗಿವೆ.
ಇದನ್ನೂ ಓದಿ: Bengaluru: ಬೆಂಗಳೂರು ಹೋಟೆಲ್ ನಲ್ಲಿ ಬರ್ಬರವಾಗಿ ಹತ್ಯೆಯಾದ ರೌಡಿಶೀಟರ್ ದಿನೇಶ್
ಇತ್ತೀಚೆಗೆ ಮೇಕೆದಾಟು ವಿಚಾರವಾಗಿ ದೇವೇಗೌಡರ ನಿಲುವಿನ ಕುರಿತು ಮಾತನಾಡಿರುವ ಸಿದ್ದರಾಮಯ್ಯ ಎಚ್ ಡಿ ದೇವೇಗೌಡರದ್ದು ಅನುಕೂಲ ಸಿಂಧು ರಾಜಕಾರಣ ಎಂದು ತಮ್ಮ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ತಿಳಿಸಿದ್ದಾರೆ.
ಜಿಡಿಎಸ್ ಅಂದರೆ ಜಾತ್ಯಾತೀತ ಜನತಾದಳ. ಜನತಾದಳ ಇಂದು ಜಾತ್ಯಾತೀತವಾಗಿ ಉಳಿದಿದೆಯೇ? ನರೇಂದ್ರ ಮೋದಿ ಅವರು ಪ್ರಧಾನಿಯಾದರೆ ದೇಶವನ್ನೇ ಬಿಟ್ಟು ಹೋಗುತ್ತೇನೆ, ನಾನು ಮುಂದಿನ ಜನ್ಮದಲ್ಲಿ ಮುಸಲ್ಮಾನನಾಗಿ ಹುಟ್ಟುತ್ತೇನೆ ಎಂದಿದ್ದ ಮಾಜಿ ಪ್ರಧಾನಿ ದೇವೇಗೌಡರ ಅನುಕೂಲಸಿಂಧು ರಾಜಕಾರಣ ಎಲ್ಲಿಯವರೆಗೆ ನಡೆಯುತ್ತದೆ? ಮೇಕೆದಾಟು ಯೋಜನೆಯನ್ನು ಎನ್‍ಡಿಎ ಮೂಲಕ ಮಾಡಿಸುವುದಾಗಿ ಹೇಳುತ್ತಾರೆ. ಬಿಜೆಪಿ ಕಡೆಯಿಂದ ಯಾಕೆ ಮಾಡಿಸಲಿಲ್ಲ? ಎಂದು ಪ್ರಶ್ನಿಸಿದ್ದಾರೆ.
ಮೈಸೂರು, ಚಾಮರಾಜನಗರ ಕ್ಷೇತ್ರಕ್ಕೆ ಬಿಜೆಪಿಯವರ ಕೊಡುಗೆಗಳೇನು? ಬಿಜೆಪಿ ಎಂದರೆ ಲೂಟಿಕೋರರು. ನಮ್ಮ ಪಕ್ಷಕ್ಕೆ ಸೇರ್ಪಡೆಯಾಗಿರುವವರನ್ನು ಜನರು ಬೆಂಬಲಿಸಬೇಕು. ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಜ್ಞಾನವಿರುವ ಈ ಎಲ್ಲರೂ ಜನರ ಧ್ವನಿಯಾಗಿ ದೇಶದ ಸಂಸತ್ತಿನಲ್ಲಿ ಕೆಲಸ ಮಾಡುವಂತಾಗಬೇಕು.
ಜನರ ಸಮಸ್ಯೆಗಳಿಗೆ ಸ್ಪಂದಿಸುವ ಸಲುವಾಗಿ ಲೋಕಸಭೆಯಲ್ಲಿ ಜನರ ಪ್ರತಿನಿಧಿಯಾಗಬೇಕು. ಆದ್ದರಿಂದ ಲಕ್ಷ್ಮಣ್ ಅವರನ್ನು ಜನರು ಗೆಲ್ಲಿಸಬೇಕು. ಲಕ್ಷ್ಮಣ್ ಅವರ ಗೆಲುವು ನಮ್ಮ ಸರ್ಕಾರದ ಹಾಗೂ ಗ್ಯಾರಂಟಿಗಳ ಗೆಲುವಾಗಲಿದೆ ಎಂದು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಬರೆದುಕೊಂಡಿದ್ದಾರೆ.