Urfi Javed: ತನ್ನ ಸ್ಕರ್ಟ್‌ನೊಳಗೆ ಇಡೀ ಬ್ರಹ್ಮಾಂಡವನ್ನೇ ತೋರಿಸಿದ ಉರ್ಫಿ

Share the Article

Urfi Javed: ಫ್ಯಾಷನ್‌ ಐಕಾನ್‌ ಎಂದೇ ಖ್ಯಾತಿ ಪಡೆದಿರುವ ಉರ್ಫಿ ಜಾವೇದ್‌ ಬಿಗ್‌ಬಾಸ್‌ನಿಂದ ಹೊರ ಬಂದ ನಂತರ ಕೇವಲ ತನ್ನ ಬಟ್ಟೆಯಿಂದಲೇ ಖ್ಯಾತಿ ಹೊಂದಿದವಳು. ಅದು ಕೂಡಾ ವಿಚಿತ್ರವಾದ ಬಟ್ಟೆ ಧರಿಸಿ, ಸಾರ್ವಜನಿಕವಾಗಿ ಓಡಾಡಿ ಎಲ್ಲರ ಮನಸೂರೆಗೊಂಡೆ ಎಂದು ಹೇಳಿ, ತನ್ನ ಖ್ಯಾತಿ ಹೆಚ್ಚಿಸಿದವಳು. ಇದೀಗ ಅಂತಹುದೇ ಒಂದು ವಿಶೇಷ ಬಟ್ಟೆಯ ಮೂಲಕ ತನ್ನ ಅಭಿಮಾನಿಗಳ ಮನಸ್ಸನ್ನು ತಂಪಾಗಿಸಿದ್ದಾಳೆ.

ಅದೇನೆಂದರೆ ಈ ಉಡುಪಿನೊಳಗಿನಿಂದ ತನ್ನ ಅಭಿಮಾನಿಗಳಿಗೆ ಲೋಕದ ಬ್ರಹ್ಮಾಂಡವೇ ತೋರಿಸಿದ್ದಾಳೆ. ಅಂದು ಶ್ರೀ ಕೃಷ್ಣ ತನ್ನ ತಾಯಿಗೆ ಬಾಯಿಯೊಳಗಿನಿಂದ ಇಡೀ ಬ್ರಹ್ಮಾಂಡ ತೋರಿಸಿದ, ಇಂದು ಉರ್ಫಿ ತನ್ನ ಉಡುಪಿನೊಳಗಿನಿಂದ ಇಡೀ ಬ್ರಹ್ಮಾಂಡವನ್ನೇ ತೋರಿಸಿದ್ದಾಳೆ. ಈಕೆ ಒಂದು ರೀತಿಯಲ್ಲಿ ಮಾಡರ್ನ್‌ ಶ್ರೀ ಕೃಷ್ಣ ಎನ್ನಬಹುದು ಅಲ್ಲವೇ.

ಇಡೀ ಗ್ರಹಗಳು ಆಕೆಯ ಕಾಲ ಸುತ್ತ ತಿರುಗುವುದನ್ನು ಈ ಸ್ಕರ್ಟ್‌ನಲ್ಲಿ ತೋರಿಸಲಾಗಿದೆ. ಈ ಬಟ್ಟೆ ಧರಿಸಿದ ಉರ್ಫಿಗೆ ಇನ್ನೊಂದು ಹೆಜ್ಜೆಯಷ್ಟೇ ಬ್ರಹ್ಮಾಂಡಕ್ಕೆ ಎನ್ನುವಂತಿರಬಹುದೇ?

 

View this post on Instagram

 

A post shared by Uorfi (@urf7i)

Leave A Reply