Maharashtra: ನಕ್ಸಲ್ ಕಾರ್ಯಾಚರಣೆ : ಮಹಾರಾಷ್ಟ್ರ ಪೊಲೀಸರ ಎನ್ಕೌಂಟರ್ನಲ್ಲಿ ನಾಲ್ವರು ನಕ್ಸಲರ ಹತ್ಯೆ

ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯಲ್ಲಿ ಮಂಗಳವಾರ ಪೊಲೀಸರು ಮತ್ತು ನಕ್ಸಲರ ನಡುವಿನ ಗುಂಡಿನ ದಾಳಿಯಲ್ಲಿ ನಾಲ್ವರು ನಕ್ಸಲರನ್ನು ಹತ್ಯೆ ಮಾಡಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: Chandra Grahan 2024: 100 ವರ್ಷಗಳ ನಂತರ ಹೋಳಿ ಸಮಯದಲ್ಲಿ ಚಂದ್ರಗ್ರಹಣದ ನೆರಳು; ಈ 5 ರಾಶಿಯವರಿಗೆ ಮಂಗಳಕರ

ಮುಂಬರುವ ಲೋಕಸಭಾ ಚುನಾವಣೆಗೆ ಜಾರಿಯಲ್ಲಿರುವ ಮಾದರಿ ನೀತಿ ಸಂಹಿತೆಯ ನಡುವೆ ವಿಧ್ವಂಸಕ ಚಟುವಟಿಕೆಗಳನ್ನು ನಡೆಸುವ ಉದ್ದೇಶದಿಂದ ಕೆಲವು ನಕ್ಸಲೀಯರು ನೆರೆಯ ತೆಲಂಗಾಣದಿಂದ ಪ್ರಾಣಹಿತಾ ನದಿಯನ್ನು ದಾಟಿ ಗಡ್ಚಿರೋಲಿಯನ್ನು ಪ್ರವೇಶಿಸಿದ್ದಾರೆ ಎಂದು ಸೋಮವಾರ ಮಧ್ಯಾಹ್ನ ಪೊಲೀಸರಿಗೆ ಮಾಹಿತಿ ದೊರೆತಿತ್ತು ಎಂದು ಪೊಲೀಸ್ ವರಿಷ್ಠಾಧಿಕಾರಿ ನೀಲೋತ್ಪಾಲ್ ತಿಳಿಸಿದ್ದಾರೆ.

ಇದನ್ನೂ ಓದಿ: Kangana Ranaut: ಕಂಗನಾ ರಣಾವತ್ ರಾಜಕೀಯ ಪ್ರವೇಶ ಖಚಿತ! ಈ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧೆ 

ಗಡ್ಚಿರೋಲಿ ಪೊಲೀಸರ ವಿಶೇಷ ಯುದ್ಧ ಘಟಕವಾದ ಸಿ – 60ರ ಅನೇಕ ತಂಡಗಳು ಮತ್ತು ಕೇಂದ್ರ ಮೀಸಲು ಪೊಲೀಸ್ ಪಡೆಯ ತ್ವರಿತ ಕಾರ್ಯಾಚರಣೆಯ ತಂಡವನ್ನು ಈ ಪ್ರದೇಶದಲ್ಲಿ ಶೋಧನೆಗಾಗಿ ಕಳುಹಿಸಲಾಯಿತು . ಸಿ – 60 ಘಟಕಗಳ ತಂಡವೊಂದು ಮಂಗಳವಾರ ಬೆಳಿಗ್ಗೆ ರೆಪಾನ್ಪಲ್ಲಿ ಬಳಿಯ ಕೊಲಾಮರ್ಕಾ ಪರ್ವತಗಳಲ್ಲಿ ಶೋಧ ನಡೆಸುತ್ತಿದ್ದಾಗ, ನಕ್ಸಲೀಯರು ಅವರ ಮೇಲೆ ಗುಂಡು ಹಾರಿಸಿದ್ದು, ಇದಕ್ಕೆ ನಮ್ಮ ಭದ್ರತಾ ಸಿಬ್ಬಂದಿ ಪ್ರತೀಕಾರ ತೀರಿಸಿಕೊಂಡರು ಎಂದು ಅಧಿಕಾರಿ ತಿಳಿಸಿದ್ದಾರೆ.

ಗುಂಡಿನ ದಾಳಿ ನಿಂತ ನಂತರ, ಆ ಪ್ರದೇಶದಲ್ಲಿ ಶೋಧ ನಡೆಸಲಾಯಿತು ಮತ್ತು ನಾಲ್ವರು ಪುರುಷ ನಕ್ಸಲರ ಶವಗಳು ಪತ್ತೆಯಾದವು , ಈ ನಾಲ್ಕು ಜನ ನಕ್ಸಲರ ಪತ್ತೆಗಾಗಿ ₹36 ಲಕ್ಷ ನಗದು ಬಹುಮಾನವನ್ನು ಘೋಷಿಸಲಾಗಿತ್ತು ಎಂದು ಅವರು ಹೇಳಿದರು .

ಈ ಕಾರ್ಯಾಚರಣೆಯಲ್ಲಿ ಎಕೆ – 47 ಬಂದೂಕು , ಕಾರ್ಬೈನ್ , ಎರಡು ದೇಶೀಯ ನಿರ್ಮಿತ ಪಿಸ್ತೂಲುಗಳು , ನಕ್ಸಲ್ ಸಾಹಿತ್ಯ ಮತ್ತು ಇತರ ವಸ್ತುಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಮೃತ ನಕ್ಸಲರನ್ನು ವಿವಿಧ ನಕ್ಸಲ್ ಸಮಿತಿಗಳ ಕಾರ್ಯದರ್ಶಿಗಳಾದ ವರ್ಗೀಶ್ , ಮಗ್ತು ಮತ್ತು ತುಕಡಿ ಸದಸ್ಯರಾದ ಕುರ್ಸಾಂಗ್ ರಾಜು ಮತ್ತು ಕುಡಿಮೆಟ್ಟಾ ವೆಂಕಟೇಶ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Leave A Reply

Your email address will not be published.