Home Karnataka State Politics Updates K S Eshwarappa: ಯಾವುದೇ ಕಾರಣಕ್ಕೂ ಸ್ಪರ್ಧೆಯಿಂದ ಹಿಂದೆ ಸರಿಯಬೇಡಿ – ಈಶ್ವರಪ್ಪಗೆ ಅಯೋಧ್ಯೆ ರಾಮ...

K S Eshwarappa: ಯಾವುದೇ ಕಾರಣಕ್ಕೂ ಸ್ಪರ್ಧೆಯಿಂದ ಹಿಂದೆ ಸರಿಯಬೇಡಿ – ಈಶ್ವರಪ್ಪಗೆ ಅಯೋಧ್ಯೆ ರಾಮ ಮಂದಿರ ಟ್ರಸ್ಟ್ ಗೋಪಾಲ್ ಜೀ ಬೆಂಬಲ !!

Hindu neighbor gifts plot of land

Hindu neighbour gifts land to Muslim journalist

 

K S Eshwarappa: ಮಗನಿಗೆ ಹಾವೇರಿ ಟಿಕೆಟ್ ಸಿಗದೆ ಬಂಡಾಯ ಎದ್ದು ಶಿವಮೊಗ್ಗದಿಂದ ಪಕ್ಷೇತರ ಸ್ಪರ್ಧೆಗೆ ಮುಂದಾಗಿರುವ ಬಿಜೆಪಿ ನಾಯಕ ಈಶ್ವರಪ್ಪನವರಿಗೆ ಇದೀಗ ಮತ್ತೊಂದು ಆನೆ ಬಲ ಸಿಕ್ಕಂತಾಗಿದೆ.

ಹೌದು, ಶಿವಮೊಗ್ಗ (Shivamogga) ಲೋಕಸಭಾ ಕ್ಷೇತ್ರದಿಂದ ಪಕ್ಷೇತರವಾಗಿ ಸ್ಪರ್ಧಿಸುವ ಬಗ್ಗೆ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ (KS Eshwarappa) ಅವರಿಗೆ
ರಾಮಮಂದಿರ ನಿರ್ಮಾಣ ಜವಾಬ್ದಾರಿ ಹೊತ್ತಿರುವ ಕರ್ನಾಟಕ ಮೂಲದ ಗೋಪಾಲ್ ಜೀ(Gopal jee)ಯವರು ಕರೆ ಮಾಡಿ ಮಾತಾಡಿದ್ದು ಕಣದಿಂದ ಯಾವುದೇ ಕಾರಣಕ್ಕೂ ಹಿಂದೆ ಸರಿ ಬೇಡಿ ಎಂದು ಹೇಳಿದ್ದಾರೆ.

ಚುನಾವಣೆಗೆ ಸ್ಪರ್ಧಿಸುವ ತೀರ್ಮಾನ ಮಾಡಿದ ಬಳಿಕ ದೇವಾಲಯಗಳಿಗೆ ಭೇಟಿ ಕೊಡುತ್ತಿರುವ ಈಶ್ವರಪ್ಪ, ಇಂದು ಬಿಳಕಿ ಮಠಕ್ಕೆ ತೆರಳಿದ್ದಾರೆ. ಈ ವೇಳೆ ಗೋಪಾಲ್ ಜೀಯವರ ಕರೆ ಬಂದಿದ್ದು ಈಶ್ವರಪ್ಪ ಸ್ಪರ್ಧೆಗೆ ಬೆಂಬಲ ಸೂಚಿಸಿದ್ದಾರೆ. ಆಗ ಈಶ್ವರಪ್ಪನವರು ಮಠಾಧೀಶರು ಹಾಗೂ ಹಿಂದುತ್ವದ ಕಾರ್ಯಕರ್ತರು ನನಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಹಾವೇರಿಯಲ್ಲಿ ಬೊಮ್ಮಾಯಿ ಸೋಲುತ್ತಾರೆ. ಇಲ್ಲಿ ರಾಘವೇಂದ್ರ ಸೋಲುತ್ತಾನೆ. ಯಡಿಯೂರಪ್ಪ ವಿರುದ್ಧ ಸಾಕಷ್ಟು ವಿರೋಧವಿದೆ ಎಂದು ಈಶ್ವರಪ್ಪ ಹೇಳಿದ್ದಾರೆ.

ಅಲ್ಲದೆ ಈಶ್ವರಪ್ಪನವರು ನಾನು ಗೆದ್ದು ನೀವು ಇರುವ ಜಾಗ ಅಯೋಧ್ಯೆಗೆ ಬಂದು ಪ್ರಭು ಶ್ರೀರಾಮಚಂದ್ರನ ಅಶೀರ್ವಾದ ಪಡೆಯುತ್ತೇನೆ. ನಾನು ಇಂದು ಮೋದಿ ಕಾರ್ಯಕ್ರಮದಲ್ಲಿ ಭಾಗವಹಿಸಲ್ಲ. ಭಾಗವಹಿಸಿದರೆ ಮೋದಿಯವರು ನನ್ನ ಎದುರು ರಾಘವೇಂದ್ರಗೆ ಮತ ಕೇಳ್ತಾರೆ. ನನಗೆ ಮುಜುಗರವಾಗುತ್ತದೆ ಎಂದು ಹೇಳಿದ್ದಾರೆ.