Daskhina Kannada (Mangaluru): ಬಿಜೆಪಿ ಸಾಮಾಜಿಕ ಜಾಲತಾಣದ ಮುಖ್ಯಸ್ಥನ ಮನೆಗೆ ನುಗ್ಗಿ ದಾಂಧಲೆ; ಶಾಸಕನ ಬೆಂಬಲಿಗರಿಂದ ಜೀವ ಬೆದರಿಕೆ, ಪುತ್ತೂರು ನಗರ ಠಾಣೆಯಲ್ಲಿ ಮೊಕದ್ದಮೆ ದಾಖಲು

Share the Article

Daskhina Kannada (Mangaluru): ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಸಾಮಾಜಿಕ ಜಾಲತಾಣದ ಮುಖ್ಯಸ್ಥ ಜಯಾನಂದ ಕೆ. ಅವರ ಮನೆಗೆ ಶಾಸಕ ಅಶೋಕ್‌ ರೈ ಬೆಂಬಲಿಗರು ನುಗ್ಗಿ ಪುಂಡಾಟ ನಡೆಸಿರುವ ಕುರಿತು ವರದಿಯಾಗಿದೆ.

ಇದನ್ನೂ ಓದಿ: Parliament Election : ದಕ್ಷಿಣ ಕನ್ನಡದಲ್ಲಿ ಪ್ರಬಲ ಸಮುದಾಯದ ಈ ವ್ಯಕ್ತಿಯನ್ನು ಕಣಕ್ಕಿಳಿಸಲು ಕಾಂಗ್ರೆಸ್ ಪ್ಲಾನ್ !!

ಪುತ್ತೂರು ತಾಲೂಕಿನ ತಾರಿಗುಡ್ಡೆಯಲ್ಲಿರುವ ಜಯಾನಂದ ಮನೆಗೆ ರೌಡಿಶೀಟರ್‌ ಪ್ರಜ್ವಲ್‌ ರೈ ಮತ್ತು ಕಾಂಗ್ರೆಸ್‌ ಬೆಂಬಲಿಗರು ಮನೆಗೆ ನುಗ್ಗಿ ಜೀವ ಬೆದರಿಕೆ ಹಾಕಿದ್ದಾರೆ ಎನ್ನುವ ಕುರಿತು ಪುತ್ತೂರು ನಗರ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.

ಪುತ್ತೂರು ಶಾಸಕರು ಅತೀ ಹೆಚ್ಚು ಅನುದಾನ ತಂದಿದ್ದಾರೆ ಅನ್ನುವ ವಿಚಾರದಲ್ಲಿ ಸ್ಪಷ್ಟನೆ ನೀಡುವಂತೆ ಬಿಜೆಪಿ ಕಾರ್ಯಕರ್ತರು ಪೋಸ್ಟ್‌ವೊಂದನ್ನು ಹಾಕಿದ್ದರು. ಈ ವಿಚಾರಕ್ಕೆ ಶಾಸಕ ಅಶೋಕ್‌ ರೈ ಬೆಂಬಲಿಗರ ತಂಡವೊಂದು ಎನ್ನಲಾಗಿದ್ದು, ಮನೆಗೆ ನುಗ್ಗಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ವರದಿಯಾಗಿದೆ.

ಚೆಂಡೆ ವಾಳಗದ ಮೂಲಕ ಕಾಂಗ್ರೆಸ್‌ನ ಅನುದಾನದ ಬ್ಯಾನರ್‌ ಹಿಡಿದು ಬಿಜೆಪಿಯ ಜಯಾನಂದ ಅವರ ಮನೆಗೆ ನುಗ್ಗಿ ಈ ವರ್ತನೆ ಮಾಡಲಾಗಿದೆ.

ಪ್ರಜ್ವಲ್‌ ರೈ, ಸನತ್‌ ರೈ ಸಹಿತ 15 ಮಂದಿಯ ಮೇಲೆ ಪ್ರಕರಣ ದಾಖಲು ಮಾಡಲಾಗಿದೆ. ಬಿಜೆಪಿ ಸಾಮಾಜಿಕ ಜಾಲತಾಣ ಪ್ರಕೋಷ್ಠದ ಜಿಲ್ಲಾ ಸದಸ್ಯ ತಾರಿಗುಣ್ಣ ನಿವಾಸಿ ಜಯಾನಂದ ಕೆ.(41) ದೂರು ನೀಡಿದ್ದಾರೆ.

ಕಾಂಗ್ರೆಸ್‌ ಸರಕಾರದ ಯೋಜನೆಗಳನ್ನು ಬರೆದಿರುವ ಬ್ಯಾನರ್‌ ಪ್ರದರ್ಶನ ಮಾಡಿ ಚೆಂಡೆಗಳನ್ನು ಬಡಿಯುತ್ತಾ ಮನೆಗೆ ನುಗ್ಗಿ ತನಗೆ, ತಾಯಿಗೆ, ಪತ್ನಿ ಮಕ್ಕಳಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ. ಗೋಡೆಗೆ ಕಾಲಿನಿಂದ ಒದ್ದು ಅಸಭ್ಯವಾಗಿ ವರ್ತನೆ ಮಾಡಿದ್ದಾರೆ ಜೊತೆಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ.

Leave A Reply