Home Karnataka State Politics Updates Bengaluru : ಬಿಜೆಪಿ ಟಿಕೆಟ್ ಸಿಗುತ್ತಿದ್ದಂತೆ ಯದುವೀರ್ ಒಡೆಯರ್ ಗೆ ಬಿಗ್ ಶಾಕ್ ಕೊಟ್ಟ ರಾಜ್ಯ...

Bengaluru : ಬಿಜೆಪಿ ಟಿಕೆಟ್ ಸಿಗುತ್ತಿದ್ದಂತೆ ಯದುವೀರ್ ಒಡೆಯರ್ ಗೆ ಬಿಗ್ ಶಾಕ್ ಕೊಟ್ಟ ರಾಜ್ಯ ಸರ್ಕಾರ !!

Hindu neighbor gifts plot of land

Hindu neighbour gifts land to Muslim journalist

Bengaluru: ರಾಜ್ಯದ ಹೈವೋಲ್ಟೇಜ್ ಕ್ಷೇತ್ರವಾದ ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಹಾಲಿ ಸಂಸದ, ಪ್ರಬಲ ನಾಯಕ, ಯುವ ನೇತಾರ ಪ್ರತಾಪ್ ಸಿಂಹ(Pratap simha) ಅವರಿಗೆ ಟಿಕೆಟ್ ಮಿಸ್ ಆಗಿದ್ದು, ಅದು ಅರಸರ ಕುಡಿ ಯದುವೀರ್ ಅವರ ಪಾಲಾಗಿದೆ. ಯದುವೀರ್ ಗೆ ಟಿಕೆಟ್ ಸಿಕ್ಕ ಬೆನ್ನಲ್ಲೇ ರಾಜ್ಯ ಸರ್ಕಾರವು ದೊಡ್ಡ ಆಘಾತ ನೀಡಿದೆ.

ಹೌದು, ಯದುವೀರ್ ಕೃಷ್ಣದತ್ತ ನರಸಿಂಹರಾಜ ಒಡೆಯರ್(Yaduveer wadiyar) ಅವರು ಬಿಜೆಪಿ(BJP) ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಹಿನ್ನೆಲೆಯಲ್ಲಿ ಕೇಸರಿ ಪಕ್ಷವನ್ನು ಮಣಿಸಲು ಕಾಂಗ್ರೆಸ್ ತನ್ನ ತಂತ್ರಗಾರಿಕೆ ರೂಪಿಸಲು ಮುಂದಾಗಿದೆ. ಮೈಸೂರು ರಾಜವಂಶಕ್ಕೆ ಭಾರಿ ಪ್ರಮಾಣದ ಆಸ್ತಿ ಇದೆ. ಈ ಆಸ್ತಿ ವಿಚಾರವಾಗಿ ಮಹಾರಾಜರನ್ನು ಕಟ್ಟಿ ಹಾಕಲು ಕಾಂಗ್ರೆಸ್ ರಣತಂತ್ರ ಹೆಣೆದಿದೆ.

ರಾಜರ ಈ ಆಸ್ತಿ ಪೈಕಿ ಬೆಂಗಳೂರು(Bengaluru) ನಗರದಲ್ಲಿ ಮೈಸೂರು ರಾಜವಂಶಕ್ಕೆ ಸೇರಿದ ಹಲವು ಆಸ್ತಿಗಳು ಇವೆ. ಇದರಲ್ಲಿ ಬರುತ್ತಿರುವ ಆದಾಯ ರಾಜವಂಶಕ್ಕೆ ಸೇರಿದ್ದು. ಹೀಗಿದ್ದಾಗಲೇ ಬೆಂಗಳೂರು ಪ್ಯಾಲೆಸ್ ಗ್ರೌಂಡ್ ಬಗ್ಗೆ ಆಗಾಗ ಕಿರಿಕ್ ಆಗುತ್ತಲೇ ಇರುತ್ತದೆ. ಹೀಗಿದ್ದಾಗ ಇದೀಗ ಕರ್ನಾಟಕ ಸರ್ಕಾರ ಬೆಂಗಳೂರು ಪ್ಯಾಲೆಸ್ ಗ್ರೌಂಡ್ ವಿಚಾರದಲ್ಲಿ ಕಠಿಣ ಕ್ರಮ ಕೈಗೊಂಡಿದೆ.

ಅದೇನೆಂದರೆ ಇಂದು ನಡೆದ ಕರ್ನಾಟಕದ ಕಾಂಗ್ರೆಸ್ ಸರ್ಕಾರದ ಸಂಪುಟ ಸಭೆಯಲ್ಲಿ ಈಗ, ಮಹತ್ವದ ನಿರ್ಧಾರ ಕೈಗೊಳ್ಳಾಗಿದ್ದು. ಈ ಪೈಕಿ ಪ್ರಮುಖವಾಗಿ, ಬೆಂಗಳೂರಿನ ಪ್ಯಾಲೆಸ್ ಗ್ರೌಂಡ್(Bengaluru palace ground) ಬಳಿ ರಸ್ತೆ ಅಗಲೀಕರಣಕ್ಕೆ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಇಲ್ಲಿ ಭಾರಿ ಪ್ರಮಾಣದ ಟ್ರಾಫಿಕ್ ಉಂಟಾಗುತ್ತಿರುವ ಕಾರಣಕ್ಕೆ ಸರ್ಕಾರ ಈ ಕ್ರಮ ಕೈಗೊಂಡಿದೆ ಎಂಬ ಮಾತು ಕೇಳಿಬರುತ್ತಿದೆ. ಇದು ಮೈಸೂರು ರಾಜವಂಶದ ಯದುವೀರ್‌ಗೆ ದೊಡ್ಡ ಆಘಾತ ನೀಡಿದೆ ಎಂಬ ಮಾತು ಕೇಳಿಬರುತ್ತಿದೆ. ಇದರಿಂದ ಯದುವೀರ್ ಅವರನ್ನ ಟಾರ್ಗೆಟ್ ಮಾಡುತ್ತಿದ್ದಾರ? ಎಂಬ ಆರೋಪ ಕೂಡ ಕೇಳಿಬಂದಿದೆ.