Yaduveer Wadiyar: ಟಿಕೆಟ್ ಸಿಕ್ಕ ಬೆನ್ನಲ್ಲೇ ಯದುವೀರ್ ಒಡೆಯರ್ ಫಸ್ಟ್ ರಿಯಾಕ್ಷನ್ ಹೀಗಿತ್ತು !!
Yaduveer Wadiyar:: ಲೋಕಸಭಾ ಚುನಾವಣೆಗೆ ಬಿಜೆಪಿ ಟಿಕೆಟ್ ಸಿಕ್ಕ ಬಳಿಕ ಯದುವೀರ್ ಒಡೆಯರ್(Yaduveer Wadiyar) ಅವರು ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದಾರೆ.
ಹೌದು, ಲೋಕಸಭಾ ಚುನಾವಣೆಗೆ(Parliament election)ಟಿಕೆಟ್ ಸಿಕ್ಕ ಬಳಿಕ ಮೊದಲ ಬಾರಿಗೆ ಗುರುವಾರ ಬಿಜೆಪಿ ಕಚೇರಿಗೆ ಭೇಟಿ ನೀಡಿದ್ದ ಮೈಸೂರು-ಕೊಡಗು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ಕಾರ್ಯಕರ್ತರು ಆರತಿ ಬೆಳಗಿ ಕಚೇರಿಗೆ ಬರಮಾಡಿಕೊಂಡರು. ಈ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಪ್ರತಾಪ್ ಸಿಂಹ(Pratap simha) ಅವರು ಎರಡು ಬಾರಿ, 10 ವರ್ಷದಿಂದ ಸಂಸದರಾಗಿ ಕೆಲಸ ಮಾಡಿದ್ದಾರೆ. ಅವರು ಹಾಕಿಕೊಟ್ಟಿರುವ ಬುನಾದಿಯನ್ನು ನಾನು ಮುಂದುವರಿಸುತ್ತೇನೆ ಎಂದಿದ್ದಾರೆ.
IAS Intresting Question: ಯಾರಿಗೂ ಸಾಧ್ಯ ಆಗದ ಪ್ರಶ್ನೆಗೆ ಉತ್ತರ ಸಿಕ್ತು: ಕೋಳಿ ಕೊಂಡಾಗ ಆದ 1 ರೂ.…
ಅಲ್ಲದೆ ನನಗೆ ತುಂಬಾ ಸಂತೋಷ ಇದೆ. ಕಳೆದ ಒಂದು ವರ್ಷದಿಂದ ರಾಜಕೀಯ ಚರ್ಚೆ ನಡೆಯುತ್ತಾ ಇತ್ತು. ಈಗ ಅದರ ಅವಕಾಶ ಸಿಕ್ಕಿದೆ. ಇಲ್ಲಿ ರಾಜ, ಸಾಮಾನ್ಯ ಜನ ಅನ್ನೋದಿಲ್ಲ. ಇದು ಪ್ರಜಾಪ್ರಭುತ್ವದ ವ್ಯವಸ್ಥೆ. ಇಲ್ಲಿ ಎಲ್ಲರೂ ಒಂದೇ ಎಂದು ಅಭಿಪ್ರಾಯಪಟ್ಟರು. ಜೊತೆಗೆ ನನಗೆ ಟಿಕೆಟ್ ಸಿಕ್ಕಿರುವುದಕ್ಕೆ ಪ್ರತಾಪ್ ಸಿಂಹ ಅವರ ವಿರೋಧ ಇಲ್ಲ. ಇದರೊಂದಿಗೆ ಪ್ರತಾಪ್ ಸಿಂಹ ಅವರ ಸಹಕಾರ ಇದ್ದೇ ಇದೆ. ಅವರ ಜೊತೆ ನಿರಂತರವಾಗಿ ಸಂಪರ್ಕದಲ್ಲಿ ಇದ್ದೀನಿ. ನಿನ್ನೆಯೂ ಮಾತನಾಡಿದ್ದೇನೆ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.
Intresting News: ಹುಡ್ಗೀರು ನಿಮ್ಗೆ ಹೀಗೆಲ್ಲಾ ಟೆಕ್ಸ್ಟ್ ಮಾಡ್ತಾರಾ ?! ಹಾಗಿದ್ರೆ ನಿಮ್ಮೇಲೆ ಲವ್ ಆಗಿರೋದು ಪಕ್ಕಾ !…
9 ವರ್ಷಗಳ ಕಾಲ ಅರಮನೆಯ ಜವಾಬ್ದಾರಿ ಹೊತ್ತು ಜನರ ಜೊತೆ ಬೆರೆತಿದ್ದೇನೆ. ಸಹೋದರನಂತೆ ನನ್ನನ್ನು ಪ್ರೀತಿಸಿದ್ದಾರೆ. ಅವರ ಋಣ ತೀರಿಸುವ ಸಮಯ ಬಂದಿದೆ. ರಾಜಕೀಯದ ಬಗ್ಗೆ ಒಂದು ವರ್ಷದಿಂದ ಮನಸು ಮಾಡಿದ್ದೆ. ಸಾರ್ವಜನಿಕರ ಸೇವೆಗೆ ಅವಕಾಶ ಇದು. ಅಧಿಕಾರ ಇದ್ದರೆ ಅಭಿವೃದ್ಧಿ ಮಾಡಬಹುದು. ಜೀವನದಲ್ಲಿ ಸಮಸ್ಯೆಗಳು, ನೋವುಗಳು ಸಹಜ. ರಾಜಕೀಯದಲ್ಲಿ ಅದು ಸ್ವಲ್ಪ ಹೆಚ್ಚು. ಎಲ್ಲವನ್ನೂ ನಿಭಾಯಿಸುತ್ತೇನೆ ಎಂದರು.