Tukali Santhosh Car Accident: ತುಕಾಲಿ ಸಂತೋಷ್‌ ಕಾರು ಅಪಘಾತ ಪ್ರಕರಣ, ಆಟೋ ಚಾಲಕ ಸಾವು

Tukali Santhosh: ಇತ್ತೀಚೆಗೆ ಹೊಸ ಕಾರು ಖರೀದಿ ಮಾಡಿ ಸಾಕಷ್ಟು ಸುದ್ದಿ ಮಾಡಿದ್ದ ತುಕಾಲಿ ಸಂತೋಷ್‌ ಅವರು ತಮ್ಮ ಕನಸು ನನಸಾಯಿತು ಎಂದು ಹೇಳಿಕೊಂಡು ಸ್ವಲ್ಪ ದಿನಗಳಷ್ಟೇ ಆಗಿದೆ. ಆದರೆ ಅದೇನೋ ನಿನ್ನೆ ಅವರ ಕಾರು ಅಪಘಾತಕ್ಕೆ ಒಳಗಾಗಿದ್ದು, ಆಟೋ ಹಾಗೂ ತುಕಾಲಿ ಸಂತೋಷ್‌ ಅವರ ಮಧ್ಯೆ ಅಪಘಾತ ಸಂಭವಿಸಿತ್ತು.

ಇದನ್ನೂ ಓದಿ: Board Exams: ಏಕರೂಪದ ಶಿಕ್ಷಣ ವ್ಯವಸ್ಥೆ ಜಾರಿ ಮಾಡಲು ಬೋರ್ಡ್‌ ಪರೀಕ್ಷೆ- ರಾಜ್ಯ ಸರಕಾರ

ಗಾಯಗೊಂಡ ಆಟೋ ಚಾಲಕ ಜಗದೀಶ್‌ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ವ್ಯಕ್ತಿ ಇದೀಗ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ತುಮಕೂರು ಜಿಲ್ಲೆಯ ಕುಣಿಗಲ್‌ ತಾಲೂಕಿನ ಹೊನ್ನೇನಹಳ್ಳಿ ಬಳಿ ಈ ಅಪಘಾತ ನಡೆದಿದೆ.

DAILY PRIZE DRAW
23:59:59
Daily Prize
Enter Now and Earn $50
View this ad to enter today's drawing
1,453 entries today

ಇದನ್ನೂ ಓದಿ: Pitbull Dog: ಪಿಟ್‌ಬುಲ್‌, ಬುಲ್‌ಡಾಗ್‌, ಅರ್ಜೆಂಟಿನೋ ತಳಿ ಸೇರಿ ಒಟ್ಟು ಸೇರಿ 20 ಕ್ಕೂ ಅಧಿಕ ತಳಿಗೆ ನಿಷೇಧಕ್ಕೆ ಶಿಫಾರಸು ಮಾಡಿದ ಕೇಂದ್ರ ಸರಕಾರ

ತುಕಾಲಿ ಸಂತೋಷ್‌ ಅವರು ತಮ್ಮ ಕಾರಿನಲ್ಲಿ ತುಮಕೂರು ಕಡೆಯಿಂದ ಕುಣಿಗಲ್‌ ಮಾರ್ಗವಾಗಿ ಹೊಳೆನರಸೀಪುರ ಕಡೆ ಹೋಗುತ್ತಿರುವ ಸಂದರ್ಭದಲ್ಲಿ ಕುಣಿಗಲ್‌ನಿಂದ ಕುರುಡಿಹಳ್ಳಿಗೆ ಆಟೋ ತೆರಳುತ್ತಿತ್ತು. ತುಕಾಲಿ ಅವರ ಕಾರಿನ ಬಲ ಭಾಗಕ್ಕೆ ಆಟೋ ಡಿಕ್ಕಿ ಹೊಡೆದಿದ್ದು, ಆಟೋ ಬಹುತೇಕ ನಜ್ಜುಗುಜ್ಜಾಗಿತ್ತು.

ಆಟೋ ಚಾಲಕ ಜಗದೀಶ್‌ (40) ಅವರನ್ನು ಕುಣಿಗಲ್‌ ಸರಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ಫಲಿಸದೇ ಇಂದು (ಮಾ.14)ರ ಮುಂಜಾನೆ ಮೃತ ಹೊಂದಿರುವುದಾಗಿ ವರದಿಯಾಗಿದೆ.

Leave A Reply

Your email address will not be published.