D.K (Belthangady): ತುರ್ತು ಸೇವೆಗೆ ಸಾಗುತ್ತಿದ್ದ ಆಂಬ್ಯುಲೆನ್ಸ್ ಚಾಲಕನ ಮೇಲೆ ಹಲ್ಲೆ
D.K (Belthangady): ತುರ್ತು ಸೇವೆಗೆಂದು ಹೋಗುತ್ತಿದ್ದ ಆಂಬುಲೆನ್ಸ್ ಚಾಲಕನ ಮೇಲೆ ಹಲ್ಲೆ ಮಾಡಿರುವ ಘಟನೆಯೊಂದು ಇಂದು ನಡೆದಿದೆ. ಪಶು ಇಲಾಖೆಯ ವಾಹನ ಚಾಲಕ ಮೇಲೆಯೇ ಈ ಹಲ್ಲೆ ನಡೆದಿದೆ. ಈ ಘಟನೆ ಬೆಳ್ತಂಗಡಿಯ ಲಾಯಿಲ ಜಂಕ್ಷನ್‌ನಲ್ಲಿ ಮಾ.12 ರಂದು ನಡೆದಿದೆ ಎಂದು ವರದಿಯಾಗಿದೆ.
ಕ್ಷುಲ್ಲಕ ಕಾರಣಕ್ಕೆ ಆಂಬ್ಯುಲೆನ್ಸ್ ಬಾಗಿಲು ತೆಗೆದು ಕೈಯಿಂದ ಮತ್ತು ಕಾಲಿನಿಂದ ಹಲ್ಲೆ ಮಾಡಿದ್ದಾರೆ. ಈ ಘಟನೆಯ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ದನದ ಚಿಕಿತ್ಸೆಗೆಂದು ಬೆಳ್ತಂಗಡಿ ತಾಲೂಕಿನ ನೆರಿಯಕ್ಕೆ ತುರ್ತು ಸೇವೆಯಲ್ಲಿ ಆಂಬ್ಯುಲೆನ್ಸ್ ಹೋಗುತ್ತಿದ್ದಾಗ, ಚಾಲಕನ ಮೇಲೆ ಲಾಯಿಲ ಜಂಕ್ಷನ್‌ನಲ್ಲಿ ದಾರಿ ಬಿಡುವ ವಿಚಾರದಲ್ಲಿ ಚಾಲಕ ಶರತ್ ಎಂಬಾತ ಹಿಗ್ಗಾಮುಗ್ಗ ಥಳಿಸಿದ್ದಾನೆ ಎಂದು ವರದಿಯಾಗಿದೆ.
ಶರತ್ ಅವರು ಬೆಂಗಳೂರಿನ ಮಲ್ಲೇಶ್ವರಂ ನಿವಾಸಿ, ಎಚ್‌ಡಿಎಫ್‌ಸಿ ಉದ್ಯೋಗಿ ಎಂದು ತಿಳಿದು ಬಂದಿದೆ. ಕಾರು ಮತ್ತು ಹಲ್ಲೆ ಮಾಡಿದ ಶರತ್ ನನ್ನು ಬೆಳ್ತಂಗಡಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಆಂಬ್ಯುಲೆನ್ಸ್ ಚಾಲಕ ಸುಬ್ರಹ್ಮಣ್ಯ ನಿವಾಸಿ ರಕ್ಷಿತ್ (27) ಇವರನ್ನು ಬೆಳ್ತಂಗಡಿ ತಾಲೂಕಿನ ಸರಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿ ಚಿಕಿತ್ಸೆ ನೀಡಲಾಗುತ್ತಿದೆ.
ದನದ ಚಿಕತ್ಸೆಗೆಂದು ನೆರಿಯದಿಂದ ಕರೆ ಬಂದ ಕಾರಣ ಬೆಳ್ತಂಗಡಿ ಪಶು ಇಲಾಖೆಗೆ ಕಡಬದಿಂದ ಬಂದ ಆಂಬ್ಯುಲೆನ್ಸ್ ನೆರಿಯ ಕಡೆ ಹೊರಟು ಲಾಯಿಲ ಜಂಕ್ಷನ್ ಹೋಗುವಾಗ ಎದುರಿನಿಂದ ಬಂದು ಕಾರು ಚಾಲಕ ಅಡ್ಡ ಬಂದಿದ್ದು, ಪ್ರಶ್ನೆ ಮಾಡಿದಾಗ ಹಲ್ಲೆ ನಡೆದಿದೆ.