Mangalore: ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ; ಕುಕ್ಕರ್ ಬಾಂಬ್ ಸಾಮ್ಯತೆ, ಮಂಗಳೂರಿನಲ್ಲಿ ಪರಿಶೀಲನೆ
ಬೆಂಗಳೂರಿನ ಕೆಫೆಯಲ್ಲಿ ಮಾ.2ರಂದು ನಡೆದ 2022ರ ನ.19ರಂದು ಮಂಗಳೂರಿನ ನಾಗುರಿ ಸಮೀಪ ನಡೆದ ಕುಕ್ಕರ್ ಬಾಂಬ್ ಸ್ಫೋಟಕ್ಕೆ ಸಾಮ್ಯತೆ ಕಂಡು ಬಂದ ಹಿನ್ನೆಲೆಯಲ್ಲಿ ಬೆಂಗಳೂರಿನ ಸಿಸಿಬಿ(ಅಪರಾಧ ಪತ್ತೆ ದಳ) ತಂಡ ಮಂಗಳೂರಿಗೆ ಆಗಮಿಸಿ ಪರಿಶೀಲನೆ ನಡೆಸಿದೆ.
ಇದನ್ನೂ ಓದಿ: KPSC: ಕೆಎಎಸ್ ನೇಮಕದ 384 ಹುದ್ದೆಗಳ ಅರ್ಜಿಗೆ ಆನ್ ಲೈನ್ ಲಿಂಕ್ ಬಿಡುಗಡೆ
ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟದ ಆರೋಪಿ ಮೊಹಮ್ಮದ್ ಶಾರೀಕ್ ಆಟೋರಿಕ್ಷಾವೊಂದರಲ್ಲಿ ತೆರಳುತ್ತಿದ್ದ ಸಂದರ್ಭ ಕುಕ್ಕರ್ ಬಾಂಬ್ ಸ್ಫೋಟ ಸಂಭವಿಸಿತ್ತು. ಇದರ ಆರೋಪಿ ಮಂಗಳೂರು ಗೋಡೆಬರಹ ಪ್ರಕರಣದ ಆರೋಪಿ ಶಾರೀಕ್ ಎಂಬುದು ತನಿಖೆಯಿಂದ ಬಯಲಾಗುತ್ತಿದ್ದಂತೆ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿತ್ತು.
ಶಾರೀಕ್ ಕೂಡ ಆಟೋರಿಕ್ಷಾದಲ್ಲಿ ಬರುವಾಗ ಮುಸುಕುಧಾರಿಯಾಗಿ ಬಂದಿದ್ದ. ಈ ಪ್ರಕರಣವನ್ನು ಎನ್ ಐಎ ತನಿಖೆ ನಡೆಸುತ್ತಿದ್ದು, ಈಗಾಗಲೇ ಚಾರ್ಜ್‌ಶೀಟ್ ಸಲ್ಲಿಸಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ಸಿಸಿಬಿ ತಂಡ ಮಂಗಳೂರಿಗೆ ಆಗಮಿಸಿ ನಗರ ಪೊಲೀಸರಿಂದ ಮಾಹಿತಿಗಳನ್ನು ಕಲೆ ಹಾಕಿದೆ ಎಂದು ಮೂಲಗಳು ತಿಳಿಸಿವೆ.
ಶಾರೀಕ್ ವಿಚಾರಣೆ?: ಬೆಂಗಳೂರಿನಲ್ಲಿ ಸಂಭವಿಸಿದ ಕೆಫೆ ಸ್ಫೋಟ ಪ್ರಕರಣದ ಆರೋಪಿಗೂ, ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಆರೋಪಿಗೂ ಲಿಂಕ್ ಇದ್ದ ಅನುಮಾನದಲ್ಲೂ ಪೊಲೀಸ್ ತನಿಖೆ ಮುಂದುವರಿದಿದೆ. ಶಾರೀಕ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಮಾಝ್ ಸೇರಿದಂತೆ ಇತರರು ಬೆಂಗಳೂರಿನ ಆರ್.ಟಿ.ನಗರದ ಮಸೀದಿಯೊಂದರ ಬಳಿ ಮನೆಯನ್ನು ಬಾಡಿಗೆ ಪಡೆದು ದುಷ್ಕೃತ್ಯಕ್ಕೆ ಸಂಚು ರೂಪಿಸುತ್ತಿದ್ದರು.