Cognizant: ಕಾಗ್ನಿಜೆಂಟ್ ಸಂಸ್ಥೆಯ ಉದ್ಯೋಗಿಗಳಿಗೆ ಮುಖ್ಯವಾದ ಮಾಹಿತಿ
ಐಟಿ ಸಂಸ್ಥೆ ಕಾಗ್ನಿಜೆಂಟ್, ವರ್ಕ್ ಫ್ರಮ್ ಹೋಮ್ ಪದ್ಧತಿಯನ್ನು ನಿಧಾನವಾಗಿ ಕೈಬಿಡುತ್ತಿದೆ. ಭಾರತದ ಉದ್ಯೋಗಿಗಳು ವಾರಕ್ಕೆ ಕನಿಷ್ಠ ಮೂರು ಬಾರಿ ಕಚೇರಿಯಿಂದ ಕೆಲಸ ಮಾಡಬೇಕು ಎಂದು ಉದ್ಯೋಗಿಗಳಿಗೆ ಕಳಿಸಿರುವ ಮೆಮೋದಲ್ಲಿ ಕಂಪನಿ ಹೇಳಿದೆ.
ಇದನ್ನೂ ಓದಿ: Bengaluru: ಕನ್ನಡ ನಾಮಫಲಕ ಅಳವಡಿಕೆ: 13 ರವರೆಗೆ ಗಡುವು ವಿಸ್ತರಣೆ
ಕೋವಿಡ್ ಸಂದರ್ಭದಲ್ಲಿ ಆರಂಭಗೊಂಡಿದ್ದ ವರ್ಕ್ ಪ್ರಮ್ ಹೋಮ್ ಪದ್ಧತಿಯನ್ನು ಐಟಿ ಕಂಪನಿಗಳು ಇತ್ತೀಚೆಗೆ ಕೈಬಿಡುತ್ತಿವೆ. ಈ ಸಾಲಿಗೆ ಈಗ ಸೇರ್ಪಡೆಯಾಗಿದೆ.
ಕಾಗ್ನಿಜೆಂಟ್ ಸಿಇಒ ರವಿ ಕುಮಾರ್ ಅವರು ಮೆಮೋದಲ್ಲಿ, “ವಾರಕ್ಕೆ ಸರಾಸರಿ ಮೂರು ದಿನ ಉದ್ಯೋಗಿಗಳು ಕಚೇರಿಯಲ್ಲಿ ಕೆಲಸ ಮಾಡಬೇಕು ಎಂದು ನಾವು ನಿರೀಕ್ಷಿಸುತ್ತೇವೆ. ಸಹಯೋಗದ ಯೋಜನೆಗಳು, ತರಬೇತಿ ಮತ್ತು ತಂಡ ನಿರ್ಮಾಣದಂತಹ ಕೆಲಸಗಳಿಗೆ ಕಚೇರಿಯಲ್ಲಿ ಕೆಲಸ ಮಾಡುವ ಪದ್ಧತಿ ಅನುಕೂಲವಾಗುತ್ತದೆ,” ಎಂದಿದ್ದಾರೆ. ಕಾಗ್ನಿಜೆಂಟ್‌ನ 3,47,700 ಉದ್ಯೋಗಿಗಳಲ್ಲಿ ಸುಮಾರು 2,54,000 ಭಾರತದಲ್ಲಿ ನೆಲೆಸಿದ್ದಾರೆ.