Home ದಕ್ಷಿಣ ಕನ್ನಡ Dharmasthala: ಧರ್ಮಸ್ಥಳ ಭಕ್ತಾದಿಗಳಿಗೊಂದು ಮಹತ್ವದ ಎಚ್ಚರಿಕೆ !!

Dharmasthala: ಧರ್ಮಸ್ಥಳ ಭಕ್ತಾದಿಗಳಿಗೊಂದು ಮಹತ್ವದ ಎಚ್ಚರಿಕೆ !!

Dharmasthala

Hindu neighbor gifts plot of land

Hindu neighbour gifts land to Muslim journalist

Dharmasthala: ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿಯ ಭಕ್ತಾದಿಗಳಿಗೆ ಮಹತ್ವದ ಸುದ್ದಿಯೊಂದು ಹೊರಬಿದ್ದಿದೆ. ಕ್ಷೇತ್ರದ ದರ್ಶನಕ್ಕೆ ಆಗಮಿಸುವ ಭಕ್ತರಿಗೆ ಮಹತ್ವದ ಎಚ್ಚರಿಕೆಯೊಂದನ್ನು ನೀಡಲಾಗಿದೆ.

ಇದನ್ನೂ ಓದಿ: Chanakya neeti: ವಿದ್ಯಾರ್ಥಿಗಳೇ ಪರೀಕ್ಷೆ ಹತ್ತಿರ ಬರುತ್ತಿದೆಯಲ್ಲವೇ? ಚಾಣಕ್ಯ ಹೇಳಿದ ಈ 10 ಟ್ರಿಕ್ಸ್ ಫಾಲೋ ಮಾಡಿ, ಯಶಸ್ಸನ್ನು ನಿಮ್ಮದಾಗಿಸಿ !!

ಹೌದು, ಶ್ರೀ ಕ್ಷೇತ್ರ ಧರ್ಮಸ್ಥಳದ(Dharmasthala) ಮಂಜುನಾಥ ಸ್ವಾಮಿಯ ಕ್ಷೇತ್ರದಲ್ಲಿ ತಂಗಲು ವಸತಿ ಗೃಹ ಬುಕಿಂಗ್ ಮಾಡುವಾಗ ಮೋಸ ಹೋಗಬಾರದು ಎಂಬ ಕಾರಣಕ್ಕೆ ಧರ್ಮಸ್ಥಳ ಕ್ಷೇತ್ರದ ವತಿಯಿಂದ ಮಹತ್ವದ ಸೂಚನೆಯನ್ನು ನೀಡಲಾಗಿದೆ.

ಅದೇನೆಂದರೆ ಶಿವರಾತ್ರಿ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ವಿಶೇಷ ಪೂಜೆಯಲ್ಲಿ ಪಾಲ್ಗೊಳ್ಳಲು ಲಕ್ಷಾಂತರ ಭಕ್ತರು ಆಗಮಿಸುತ್ತಿದ್ದಾರೆ. ಈ ವೇಳೆ ತಂಗಲು ದೇವಾಲಯ ಆಡಳಿತ ಮಂಡಳಿಗೆ ಒಳಪಟ್ಟ ವಿವಿಧ ವಸತಿಗೃಹಗಳ ವೆಬ್‌ಸೈಟ್‌ ಮೂಲಕ ಭಕ್ತರು ಮುಂಗಡ ಕಾಯ್ದಿರಿಸುತ್ತಾರೆ. ಈ ವೇಳೆ ಎಚ್ಚರ ವಹಿಸುವಂತೆ ಆಡಳಿತ ಮಂಡಳಿ ಎಚ್ಚರಿಕೆ ನೀಡಿದ್ದು, ಶ್ರೀ ಕ್ಷೇತ್ರ ಧರ್ಮಸ್ಥಳದ ವಸತಿ ಗೃಹಗಳನ್ನು ಕ್ಷೇತ್ರದ ಅಧೀಕೃತ ವೆಬ್‌ಸೈಟ್‌ www.shridharmastala.org ಮೂಲಕ ಮಾತ್ರ ಆನ್‌ಲೈನ್‌ ಬುಕ್ಕಿಂಗ್‌ ಮಾಡುವ ಸೌಲಭ್ಯ ನೀಡಲಾಗಿದೆ.

ಅಂದಹಾಗೆ ಆದರೆ ಕ್ಷೇತ್ರದ ಅಧಿಕೃತ ವೆಬ್ ಸೈಟ್ ಹೊರತುಪಡಿಸಿದ ಬೇರೆ ಯಾವುದೇ ವೆಬ್ ಸೈಟ್ ಅಥವಾ ಫೋನ್ ಮೂಲಕ ಧರ್ಮಸ್ಥಳದ ವಸತಿ ಗೃಹಗಳನ್ನು ಬುಕಿಂಗ್ ಮಾಡಲು ಅವಕಾಶ ಇರುವುದಿಲ್ಲ. ಅನಧೀಕೃತ ಬುಕ್ಕಿಂಗ್‌ಗೆ ಶ್ರೀ ಕ್ಷೇತ್ರ ಹೊಣೆಯಾಗುವುದಿಲ್ಲ. ಈ ಬಗ್ಗೆ ಭಕ್ತಾಧಿಗಳು ಎಚ್ಚರ ವಹಿಸಬೇಕಾಗಿ ವಿನಂತಿ ಎಂದು ಮನವಿ ಮಾಡಿದ್ದಾರೆ. ಹೀಗಾಗಿ ಭಕ್ತಾದಿಗಳು ಯಾವುದೇ ರೀತಿಯ ಮೋಸಕ್ಕೆ ಒಳಗಾಗಬಾರದೆಂದು ಕ್ಷೇತ್ರವು ತಿಳಿಸಿದೆ.