Arecanut Tree Benefits: ಬಹುಪಯೋಗಿ ಅಡಿಕೆ ಮರದ ಬಗ್ಗೆ ನಿಮಗೆಷ್ಟು ಗೊತ್ತು!!

ಅಡಿಕೆ ಮರವು ಬಹು ಉಪಯೋಗಿಯಾಗಿದೆ. ಇದ್ದರೂ ದುಡ್ಡು ಮುರಿದು ಬಿದ್ದರೂ ದುಡ್ಡು ಎಂಬ ಕ್ಯಾಟಗರಿಗೆ ಸೇರಿದ್ದು ಆಡಿಕೆ ಮರ. ಅಡಿಕೆ ಮರದಿಂದ ಏನೆಲ್ಲಾ ಉಪಯೋಗಗಳಿವೆ ಎಂದು ಈ ಕೆಳಗಿನಂತೆ ನೋಡೋಣ.

ಇದನ್ನೂ ಓದಿ: Bengaluru: ಎಂ. ಎನ್. ಸಿ. ಕಂಪನಿಗಳ ನೋಟೀಸ್ ಬೋರ್ಡ್ಗಳಲ್ಲಿ ಕನ್ನಡಿಗ ಉದ್ಯೋಗಿಗಳ ಸಂಖ್ಯೆ ಪ್ರದರ್ಶಿಸಬೇಕು : ಸಚಿವ ಶಿವರಾಜ್ ತಂಗಡಗಿ

ಅಡಿಕೆ ಮರವು ಗ್ರಾಮೀಣ ಭಾಗದ ಜನರಿಗೆ ಹೆಚ್ಚು ಉಪಯುಕ್ತ ವಸ್ತುವಾಗಿದೆ. ಚಪ್ಪರಗಳಿಗೆ, ತಡಿಕೆಗಳಿಗೆ, ಮನೆ ಕಟ್ಟಲು, ಗುಡಿಸಲು, ಮುದ್ದೆ ಕೋಲು ಹೀಗೆ ಒಂದಲ್ಲ ಎರಡಲ್ಲ ಹತ್ತಾರು ಕೆಲಸಗಳಿಗೆ ಅಡಿಕೆ ದೆಬ್ಬೆಯು ಸಹಾಯವಾಗುತ್ತದೆ. ಅಡಿಕೆಯ ಮರವು ಬಹಳ ನುಣುಪಾದ ಮರವಾಗಿದೆ. ಇದರ ತೊಗಟೆ ಹೆಚ್ಚು ಗಟ್ಟಿ ಇರುವುದರಿಂದ ದೀರ್ಘಕಾಲದ ವರೆಗೆ ಬಾಳಿಕೆ ಬರುತ್ತದೆ. ಈ ಕಾರಣಕ್ಕಾಗಿಯೇ ಹೆಂಚಿನ ಮನೆಗಳಲ್ಲಿ ಹೆಂಚನ್ನು ಜೋಡಿಸಲು ಅಡ್ಡ ಕಡ್ಡಿಯಾಗಿ ಅಡಿಕೆ ದೆಬ್ಬೆಯನ್ನು ಬಳಕೆ ಮಾಡುತ್ತಾರೆ.

DAILY PRIZE DRAW
23:59:59
Daily Prize
Enter Now and Earn $50
View this ad to enter today's drawing
1,453 entries today

ಇನ್ನೂ ಮದುವೆ ಸಮಯದಲ್ಲಿ ಅಂತೂ ಅಡಿಕೆ ಮರಕ್ಕೆ ತುಂಬಾ ಬೇಡಿಕೆ ಇರುತ್ತವೆ. ಮದುವೆ ಮನೆ ಎಂದ ಮೇಲೆ ಚಪ್ಪರ ಹಾಕಬೇಕಲ್ಲ. ಚಪ್ಪರ ಪೂರ್ತಿ ಅಡಿಕೆ ಮತ್ತು ತೆಂಗಿನ ಗರಿಗಳ ಮುಲಕ ಸಿಂಗಾರಗೊಂಡಿರುತ್ತದೆ.

ಅಡುಗೆಯನ್ನು ಸಿದ್ಧಪಡಿಸಲು ಅಡಿಕೆಯ ದೆಬ್ಬೆಯನ್ನು ತಿರುವಲು ಕೋಲಾಗಿ ಸಹ ಬಳಸುತ್ತಾರೆ. ಈ ಮರವು ಅತ್ಯಂತ ಗಟ್ಟಿ ಇರುವುದರಿಂದ ಒಮ್ಮೆ ಸರಿಯಾಗಿ ಕಟ್ಟಿದರೆ ಮತ್ತೆ ಮತ್ತೆ ಸಿಬುರು ಹೇಳೋದಿಲ್ಲ. ಈ ಕಾರಣಕ್ಕಾಗಿಯೇ ಅಡಿಕೆ ದೆಬ್ಬೆ ಬಳಸುತ್ತಾರೆ.

ಕುರಿ ಕೋಳಿ ಸಾಕಾಣಿಕೆ ಮಾಡುವವರು ಅಡಿಕೆ ಮರವನ್ನು ಕೊಂಡು ತರುತ್ತಾರೆ. ಅಡಿಕೆ ಮರದಿಂದಲೇ ಪೂರ್ಣ ಶೆಡ್ ನಿರ್ಮಾಣ ಮಾಡುತ್ತಾರೆ. ಕಡಿಮೆ ಖರ್ಚಿನಲ್ಲಿ ಶೆಡ್ ನಿರ್ಮಿಸಲು ಅಡಿಕೆ ಮರ ಸಹಕಾರಿಯಾಗಿದೆ.

ಈಗ ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಕೆಲವರು ವಿವಿಧ ಕರಕುಶಲ ವಸ್ತುಗಳನ್ನು ಅಡಿಕೆಯ ದೆಬ್ಬೆ ಬಳಸಿ ಮಾಡುತ್ತಿದ್ದಾರೆ. ಶೋ ಕೇಸ್ ನಲ್ಲಿ ಇಡುವ ವಿವಿಧ ರೀತಿಯ ಹೂ ಕುಂಡಗಳು, ಹಾಗೂ ಇತರ

ಚಿಕ್ಕ ಚಿಕ್ಕ ವಸ್ತುಗಳನ್ನು ಮಾಡುತ್ತಾರೆ.

ಈಗೇ ಅಡಿಕೆ ಮರವು ಬಹುಪಯೋಗಿ ವಸ್ತುವಾಗಿ ಎಲ್ಲರಿಗೂ ಉಪಯೋಗಕ್ಕೆ ಬರುವ ಸರ್ವಕಾಲೀನ ವಸ್ತುವಾಗಿದೆ.

Leave A Reply

Your email address will not be published.