Arecanut: ಸುಳಿಕೊಳೆ ರೋಗ ಇದೆಯೇ!! ಇಲ್ಲಿದೆ ಸುಲಭ ಪರಿಹಾರ.

ಮಳೆಗಾಲದಲ್ಲಿ ಹೆಚ್ಚು ಮಳೆಯಾಗುವ ಕಾರಣ ವಾಣಿಜ್ಯ ಬೆಳೆಯಾದ ಅಡಿಕೆಗೆ ಕೊಳೆ ರೋಗ ಬಾಧಿಸುವ ಸಾಧ್ಯತೆ ಇರುತ್ತದೆ.

ರೈತರು ಮುಂಜಾಗೃತಾ ಕ್ರಮಗಳನ್ನು ತೆಗೆದುಕೊಂಡು ಅಡಿಕೆ ಬೆಳೆಗೆ ಬರುವ ಕೊಳೆ ರೋಗಕ್ಕೆ ಪರಿಹಾರ ಕಂಡುಕೊಳ್ಳಬಹುದು. ಈ ಕೆಳಕಂಡ ರೋಗಗಳ ನಿರ್ವಹಣಾ ಕ್ರಮಗಳನ್ನು ಅನುಸರಿಸಿದರೆ ರೋಗವನ್ನು ಹತೋಟಿಗೆ ತರಬಹುದು.

ಇದನ್ನೂ ಓದಿ: Sahil khan: 21ರ ಸುಂದರಿಯನ್ನು ಮದುವೆಯಾದ 50 ವಯಸ್ಸಿನ ನಟ !!

DAILY PRIZE DRAW
23:59:59
Daily Prize
Enter Now and Earn $50
View this ad to enter today's drawing
1,453 entries today

ಅಡಿಕೆ ಕೊಳೆ ರೋಗದ ನಿರ್ವಹಣಾ ಕ್ರಮಗಳು

ಭೂಮಿಗೆ ಬಿದ್ದಿರುವ ರೋಗ ಬಂದಿರುವ ಅಡಿಕೆ ಕಾಯಿ ಹಾಗೂ ಒಣಗಿದ ಸಿಂಗಾರಗಳನ್ನು ತೆಗೆದು ಸುಡ ಹಾಕಬೇಕು. ಇಲ್ಲವಾದರೆ ಗುಂಡಿಗಳಲ್ಲಿ ಹಾಕಿ ಮಣ್ಣಿನಿಂದ ಮುಚ್ಚಬೇಕು.ಇದರಿಂದ ಗೊಬ್ಬರ ಸಿಗುತ್ತದೆ.

ತೋಟಗಳಲ್ಲಿ ಹೆಚ್ಚು ನೀರು ನಿಲ್ಲದಂತೆ ವ್ಯವಸ್ಥೆ ಮಾಡಬೇಕು. ಸಾಧ್ಯವಾದರೆ ಬಸಿಗಾಲುವೆ ಮಾಡಿ.

ತೋಟದ ಒಳಗೆ ಗಾಳಿ ಆಡುವಂತೆ ಮಾಡಲು ಕಾಡು ಮರಗಳ ರೆಂಬೆಗಳನ್ನು ಕತ್ತರಿಸಿ. ಇದರಿಂದ ಗಾಳಿಯು ಸರಾಗವಾಗಿ ಚಲಿಸುತ್ತದೆ.

ತೋಟದಲ್ಲಿ ಅಡಿಕೆ ಸಿಪ್ಪೆಗಳು, ಬತ್ತದ ಹೊಟ್ಟು ಮತ್ತು ತ್ಯಾಜ್ಯ ವಸ್ತುಗಳನ್ನು ಬಳಸಿ ಹೊಗೆ ಹಾಕಬೇಕು 1 ಎಕರೆಗೆ 3-4 ಕಡೆ ಈ ರೀತಿ ಮಾಡುಬೇಕು.

ರೋಗ ಬಂದಿರುವ ಮರಗಳಿಗೆ ಜುಲೈ, ಆಗಸ್ಟ್, ಸೆಪ್ಟೆಂಬರ್ ಕಾಲದಲ್ಲಿ ಶೇ. 1ರ ಬೋರ್ಡೋ ದ್ರಾವಣ ಅಥವಾ ಶೇ. 0.2 ರ ಮೆಟಕಾಕ್ಸಿಲ್ ಎಂ.ಝಡ್ 02 ಗ್ರಾಂ 1 ಲೀ. ನೀರಿನಲ್ಲಿ ಕರಗಿಸಿ ಅಥವಾ ಶೇ. 0.3 ರ ತಾಮ್ರದ ಆಕ್ಸಿಕ್ಲೋರೈಡ್ 3 ಗ್ರಾಂ 1 ಲೀ ನೀರಿನಲ್ಲಿ ಕರಗಿಸಿ ಪಂಪ್ ನಿಂದ ಅಡಿಕೆ ಗೊನೆಗಳಿಗೆ ಹಾಗೂ ಎಲೆ ತೊಟ್ಟು, ಹೊಡೆ ಭಾಗ ಮತ್ತು ಸುಳಿ ಭಾಗಗಳಿಗೆ ಚೆನ್ನಾಗಿ ನೆನೆಯುವಂತೆ ಸೂಕ್ತ ರಾಳ ಬಳಸಿ ಸಿಂಪರಣೆ ಮಾಡಿ.

ಶಿರಿಕೊಳೆ ರೋಗ ಕಂಡು ಬಂದರೇ ಮುಂಜಾಗೃತ ಕ್ರಮವಾಗಿ ಶೇ. 0.2 ರ ತಾಮ್ರದ ಆಕ್ಸಿಕ್ಲೋರೈಡ್ ಜೊತೆಗೆ ಶೇ. 0.05 ರ ಸ್ಟೆಪ್ಟೊಸೈಕ್ಲಿನ್ ದ್ರಾವಣದಿಂದ ಅಡಿಕೆಯ ತೊಂಡೆ ಭಾಗ ವನ್ನು ನೆನೆಸಬೇಕು.

ಮಣ್ಣು ಪರೀಕ್ಷೆ ಮಾಡಿಸಿ. ಆದರ ಆಧಾರದ ಮೇಲೆ ಹೇಳಿದ ಸುಣ್ಣ, ಸಾವಯವ ಗೊಬ್ಬರ ಪ್ರತಿ ಮರಕ್ಕೆ 10-12 ಕಿ.ಗ್ರಾಂ ಹಾಗೂ ರಾಸಾಯನಿಕ ಗೊಬ್ಬರಗಳನ್ನು ಪ್ರತಿ ಮರಕ್ಕೆ 140:40:140 ಗ್ರಾಂ ಸಾ.ರಂ.ಪೊ ಸೆಪ್ಟೆಂಬರ್-ಅಕ್ಟೋಬರ್ ಕಾಲದಲ್ಲಿ ಮಣ್ಣಿಗೆ ಹಾಕಬೇಕು.

ಮಳೆಗಾಲದಲ್ಲಿ ತುಂತುರು ಮಳೆ ಬೀಳುವಾಗ ಬೋರ್ಡೋ ದ್ರಾವಣವನ್ನು, ಮತ್ತು ಶುಷ್ಕ ವಾತಾವರಣ ಇದ್ದಾಗ ಬೋರ್ಡೋ ದ್ರಾವಣದ ಬದಲಿಗೆ ಶಿಲೀಂದ್ರ ನಾಶಕಗಳಾದ ತಾಮ್ರದ ಆಕ್ಸಿಕ್ಲೋರೈಡ್ ಅಥವಾ ಮೆಟಲಾಕ್ಸಿಲ್ ಎಂ.ಜಡ್ ಔಷಧಗಳನ್ನು ಸೂಕ್ತ ಅಂಟಿನೊಂದಿಗೆ ಸಿಂಪರಣೆ ಮಾಡಬಹುದಾಗಿದೆ.

ಈ ಕ್ರಮಗಳನ್ನು ಒಂದೇ ಸಮಯದಲ್ಲಿ ಸಾಮೂಹಿಕವಾಗಿ ಅನುಸರಿಸಿದಾಗ ಮರಗಳನ್ನು ಸುಳಿಕೊಳೆ ಅಥವಾ ಶಿರಕೊಳೆಯಿಂದ ಸಾಯುವುದನ್ನು ತಪ್ಪಿಸಬಹುದಾಗಿದೆ.

Leave A Reply

Your email address will not be published.