Home ಕೃಷಿ Arecanut Farming: ಅಡಿಕೆಗೆ ಎಷ್ಟು ದಿನಕ್ಕೊಮ್ಮೆ ನೀರು ಕೊಡಬೇಕು?? ನೀರು ಅತಿಯಾದರೆ ಈ ಕಾಯಿಲೆ ಬರುತ್ತದೆ.

Arecanut Farming: ಅಡಿಕೆಗೆ ಎಷ್ಟು ದಿನಕ್ಕೊಮ್ಮೆ ನೀರು ಕೊಡಬೇಕು?? ನೀರು ಅತಿಯಾದರೆ ಈ ಕಾಯಿಲೆ ಬರುತ್ತದೆ.

Arecanut farming

Hindu neighbor gifts plot of land

Hindu neighbour gifts land to Muslim journalist

ಸಾಮಾನ್ಯವಾಗಿ ಅಡಿಕೆಯನ್ನು ನೀರು ಸಮೃದ್ಧವಾಗಿರುವ ಸ್ಥಳಗಳಲ್ಲಿ ಬೆಳೆಯುತ್ತೇವೆ. ಆದರೆ ನಾವು ಅಡಿಕೆಗೆ ನೀರು ಕೊಡುವಾಗ ಗಮನವಹಿಸಬೇಕಾಗುತ್ತದೆ. ಅತಿಯಾದ ನೀರು ಕೊಟ್ಟರೆ, ಅಡಿಕೆಗೆ ಇಲ್ಲಸಲ್ಲದ ಕಾಯಿಲೆಗಳು ಬಂದು ವಕ್ಕರಿಸಿಕೊಳ್ಳುತ್ತವೆ. ಈ ಕಾಯಿಲೆಯನ್ನು ತಡೆಯಲು ಏನು ಮಾಡಬೇಕು ಎಂದು ಕೆಳಗಿನಂತೆ ತಿಳಿಯೋಣ.

ಇದನ್ನೂ ಓದಿ: ಪ್ರೇಮಿಗಳ ದಿನಾಚರಣೆ: ಕಾಂಡಮ್ ಗಳ ಮಾರಾಟದಲ್ಲಿ ದಾಖಲೆ!! ಯಾವ ಫ್ಲೇವರ್‌ ನಂಬರ್ 1!!

ಮೊದಲು ನಾವು ಸಸಿಯನ್ನು ನೆಟ್ಟಿರುವ ಸ್ಥಳ ಯಾವುದು ಎಂಬುದನ್ನು ಗಮನಿಸಬೇಕು. ಕಲ್ಲು ನೆಲವ, ಕೆಂಪು ನೆಲವ, ಕಪ್ಪು ನೆಲವ ಎಂದು. ನೆಲದ ಆಧಾರದ ಮೇಲೆ ನೀರಿನ ಪ್ರಮಾಣವನ್ನು ನಿರ್ಧಾರ ಮಾಡಬೇಕು.

ಸಾಮಾನ್ಯವಾಗಿ ಬೇಸಿಗೆ ಕಾಲದಲ್ಲಿ ಬಿಸಿಲು ಹೆಚ್ಚಾಗಿರುತ್ತದೆ. ಈ ಸಮಯದಲ್ಲಿ ಸೂರ್ಯನ ಬಿಸಿಲಿಗೆ ಭೂಮಿಯು ವೇಗವಾಗಿ ಒಣಗುತ್ತದೆ. ಆ ಸಮಯದಲ್ಲಿ ಹೆಚ್ಚಿನ ಪ್ರಮಾಣದ ನೀರನ್ನು ಗಿಡಗಳಿಗೆ ನೀಡಬೇಕಾಗುತ್ತದೆ. ವಾರಕ್ಕೆ ಕನಿಷ್ಠ 2, 3 ಬಾರಿ ಕೊಡುವುದು ಒಳ್ಳೆಯದು.

ಇನ್ನೂ ಮಳೆಗಾಲದಲ್ಲಿ ವಾತಾವರಣಕ್ಕೆ ಅನುಗುಣವಾಗಿ ನೀರನ್ನು ಕೊಡಬೇಕು. ಮಳೆಯನ್ನು ನೋಡಿಕೊಂಡು ಕೊಡುವುದು ಒಳ್ಳೆಯದು. ಅತಿಯಾದ ನೀರು ಅಡಿಕೆಗೆ ಮಾರಕವಾಗಬಹುದು. ಅತಿಯಾಗಿ ತೇವಾಂಶದಿಂದ ಶಿಲೀಂಧ್ರಗಳು ಬೆಳೆಯುವ ಸಾಧ್ಯತೆ ಇರುತ್ತದೆ.

ಶಿಲೀಂಧ್ರಗಳು ಮಣ್ಣಿನಲ್ಲಿ ಬೆಳೆಯುವುದರಿಂದ ಮಣ್ಣಿನ ಪಲವತ್ತತೆ ಹೆಚ್ಚಾಗುತ್ತದೆ. ಆದ್ರೆ ಕೆಲ ಶಿಲೀಂಧ್ರಗಳು ಅಡಿಕೆಗೆ ಮಾರಕವಾಗಿದೆ. ತೇವಾಂಶವಿರುವ ಪ್ರದೇಶದಲ್ಲಿ ಅಣಬೆ ರೋಗ ಎಂಬ ಕಾಯಿಲೆ ಕಾಣಿಸಿಕೊಳ್ಳುತ್ತದೆ.

ಈ ಅಣಬೆ ರೋಗ ಎಂಬುದು ಬಲು ವಿಚಿತ್ರ ಕಾಯಿಲೆಯಾಗಿದೆ. ಈ ರೋಗ ಬಂದರೆ, ಅಡಿಕೆಯು ಮೇಲ್ನೋಟಕ್ಕೆ ಚೆನ್ನಾಗಿಯೇ ಇರುತ್ತದೆ. ಆದ್ರೆ ಒಳಗಿನಿಂದ ಮರವನ್ನು ತಿನ್ನುತ್ತಾ ಬರುತ್ತದೆ. ಮರವು ಮೆಲ್ಲನೆ ಕೆಂಪು ಬಣ್ಣಕ್ಕೆ ತಿರುಗುತ್ತದೆ. ಕಾಯಿಲೆ ಬಂದ ಒಂದು ತಿಂಗಳಲ್ಲಿ ಗಿಡವು ಒಣಗುತ್ತದೆ.

ಈ ಕಾಯಿಲೆಯು ತುಂಬ ಅಪಾಯಕಾರಿ. ಇದು ಒಮ್ಮೆ ತೋಟಕ್ಕೆ ಬಂದರೆ ಇದರ ಅತೋಟಿ ತುಂಬ ಕಷ್ಟ. ಭಾಗಶಃ ತಡೆಯಲು ಸಾಧ್ಯವಿಲ್ಲ ಎನ್ನುತ್ತಾರೆ. ಈ ರೋಗಕ್ಕೆ ಹಲವು ಲಸಿಕೆಗಳು ಇದ್ದರೂ ಪ್ರಯೋಜನವಿಲ್ಲ.

ನಮ್ಮ ತೋಟಗಳಲ್ಲಿ ಆದಷ್ಟೂ ತೇವಾಂಶವನ್ನು ಕಡಿಮೆ ಮಾಡಿ. ಭೂಮಿಯನ್ನು ತುಸು ಒಣಗಲು ಬಿಡಿ. ಕೆಲವರು ವಾರಕ್ಕೆ 3 4 ಬಾರಿ ನೀರನ್ನು ನೀಡುತ್ತಾರೆ. ಇದು ಬಹಳ ಅಪಾಯಕಾರಿ. ಆದ್ದರಿಂದ ರೈತರು ಬಹಳ ಎಚ್ಚರ ವಹಿಸಬೇಕು.