Home News Internet Speed: ನಿಮ್ಮ ಇಂಟರ್ ನೆಟ್ ಸ್ಪೀಡ್ ಮಾಡಿಕೊಳ್ಳಲು ಹೀಗೆ ಮಾಡಿ!!!

Internet Speed: ನಿಮ್ಮ ಇಂಟರ್ ನೆಟ್ ಸ್ಪೀಡ್ ಮಾಡಿಕೊಳ್ಳಲು ಹೀಗೆ ಮಾಡಿ!!!

Internet Speed

Hindu neighbor gifts plot of land

Hindu neighbour gifts land to Muslim journalist

ನಿಮ್ಮ ವೈಫೈ ಸಿಗ್ನಲ್ ವೇಗವು ಕಡಿಮೆಯಾಗುತ್ತಿದೆಯೇ, ಲ್ಯಾಪ್‌ಟಾಪ್‌ ಮತ್ತು ಮೊಬೈಲ್‌ ಯಾವುದರಲ್ಲೂ ಇಂಟರ್‌ನೆಟ್‌ ಸಂಪರ್ಕ ಇಲ್ಲವೇ ಇಲ್ಲ.ಹಾಗಿದ್ದರೆ ಈ ಲೇಖನ ತಪ್ಪದೇ ಓದಿಕೊಳ್ಳಿ.

ಇದನ್ನೂ ಓದಿ: Intresting News: ಈ ಬ್ಯಾಂಕುಗಳು ದೇಶದ ಸುರಕ್ಷಿತ ಬ್ಯಾಂಕ್ ಗಳು!

ನೀವು ಮನೆಯಿಂದ ಕೆಲಸ ಮಾಡುತ್ತಿರುತ್ತಿರಿ. ಈ ಸಮಯದಲ್ಲಿ ಜೂಮ್‌ ಅಥವಾ ಸ್ಕೈಪಿ ಕರೆ ಇರುತ್ತದೆ. ಈ ಸಮಯದಲ್ಲಿ ಸಾಕಷ್ಟು ಸಮಸ್ಯೆ ಎದುರಿಸಬಹುದಾಗಿದೆ. ಕೆಲವರು ಬ್ರಾಂಡ್‌ಬ್ಯಾಂಡ್‌ ಬಳಸಬಹುದು, ಮೊಬೈಲ್‌ ಡಾಟಾ ಬಳಸಬಹುದು, ಇತರೆ ಇಂಟರ್‌ನೆಟ್‌ ಸರ್ವೀಸ್‌ ಅಥವಾ ಟೆಲಿಕಾಂ ನೆಟ್‌ವರ್ಕ್‌ ಬಳಸಬಹುದು. ವಿಡಿಯೋ ಕರೆ ಮತ್ತು ಕ್ಲೌಡ್‌ ಕಂಪ್ಯೂಟಿಂಗ್ ಗಾಗಿ ಹೆಚ್ಚಿನ ವೇಗದ ಇಂಟರ್‌ನೆಟ್‌ ಸಂಪರ್ಕ ಬೇಕಾಗುತ್ತದೆ. ಈ ಗುಡ್‌ ಇಂಟರ್‌ನೆಟ್‌ ನಿಮ್ಮಲ್ಲಿ ಇಲ್ಲದಿದ್ದಲ್ಲಿ ಏನು ಮಾಡುತ್ತೀರಿ…?

ಈ ಕೆಳಗಿನ 5 ವಿಧಾನಗಳಲ್ಲಿ ನಿಮ್ಮ ವೈಫೈ ಸಂಪರ್ಕ / ಇಂಟರ್‌ನೆಟ್‌ ವೇಗವನ್ನು ಹೆಚ್ಚಿಸಿಕೊಳ್ಳಬಹುದಾಗಿದೆ.

ನಿಮ್ಮ ಮೈಕ್ರೋ ವೇವ್ ಸ್ವಿಚ್ ಆಫ್ ಮಾಡಿ.

ನಿಮ್ಮ ವೈಫೈ ವೇಗ ಹೆಚ್ಚಿಸಲು ನಿಮ್ಮ ಮನೆಯಲ್ಲಿರುವ ಮೈಕ್ರೋ ವೇವ್ ಅನ್ನು ಆಫ್ ಮಾಡಿ. ಕಾರಣ ವೈಫೈ ಹಾಗೂ ಮೈಕ್ರೋವೇವ್ 2.4GHz ನ ಒಂದೇ ಫ್ರಿಕ್ವೆನ್ಸಿಯಲ್ಲಿ ಚಾಲಿತವಾಗಿರುತ್ತವೆ. ಎರಡು ಒಂದೇ ವೇಳೆ ಚಾಲಿತವಾಗಿದ್ದಲ್ಲಿ ನಿಮ್ಮ ವೈಫೈ ವೇಗ ಕುಸಿಯುವ ಸಾಧ್ಯತೆ ಇರುತ್ತದೆ. ಇದನ್ನು ಸಂಶೋಧನೆಯೊಂದು ಬಹಿರಂಗಪಡಿಸಿದೆ . ಆದ್ದರಿಂದ ವಿಡಿಯೋ ಕರೆ, ಇತರೆ ವೇಗದ ಕೆಲಸಗಳನ್ನು ಮಾಡಲು ಉತ್ತಮ ಇಂಟರ್‌ನೆಟ್‌ ಬೇಕಾಗಿದ್ದರೆ ಇದನ್ನು ಆಫ್‌ ಮಾಡಿರಿ.

ರೂಟರ್‌ ಅನ್ನು ತೆರೆದ ಜಾಗದಲ್ಲಿ ಇಡಿ

ಇದರ ಸುತ್ತ ಯಾವುದೇ ವಸ್ತುಗಳನ್ನು ಇಡಬಾರದು. ಅವುಗಳನ್ನು ಬೇರೆ ಸ್ಥಳಕ್ಕೆ ರವಾನಿಸಿ. ಅಲ್ಲದೇ ಟಿವಿ, ಮಾನಿಟರ್‌ಗಳು, ಕಂಪ್ಯೂಟರ್ ಸ್ಪೀಕರ್‌ಗಳು, ಬೇಬಿ ಮಾನಿಟರ್‌ಗಳು, ಕಾರ್ಡ್‌ಲೆಸ್‌ ಫೋನ್ಸ್‌, ಹಾಲೊಜೆನ್‌ ಲ್ಯಾಂಪ್‌, ಸ್ಟೀರಿಯೋಗಳನ್ನು ಸಹ ದೂರದಲ್ಲಿಡಬೇಕು ಎಂದು ಸಂಶೋಧನೆಗಳು ತಿಳಿಸಿವೆ.

5GHz ಬ್ಯಾಂಡ್‌ ಹಾಕಿಕೊಳ್ಳಿ

ರೂಟರ್‌ ಅನ್ನು 5GHz ಬ್ಯಾಂಡ್‌ಗೆ ಸ್ವಿಚ್‌ ಮಾಡುವುದು ತುಂಬ ಸುಲಭವಾಗಿದೆ .ಇದನ್ನು ಹಾಕಿಕೊಳ್ಳುವುದರಿಂದ ಹತ್ತಿರದಿಂದಲೇ ನೀವು ಅತಿವೇಗದ ಇಂಟರ್‌ನೆಟ್‌ ಸ್ಪೀಡ್‌ ನ ಸೌಲಭ್ಯವನ್ನು ಪಡೆಯಬಹುದು.

ಇಂಟರ್ ನೆಟ್ ಕೇಬಲ ಬಳಸಿ

ರೂಟರ್‌ಗಳು, ಕಂಪ್ಯೂಟರ್‌ಗಳು, ಟಿವಿಗಳು, ಇತರೆ ನೆಟ್‌ವರ್ಕ್‌ ಲಭ್ಯ ಡಿವೈಸ್‌ಗಳಲ್ಲಿ ಬಳಸುವ ಇಂಟರ್ನೆಟ್ ಕೇಬಲ್ ಗಳನ್ನು ಬಳಕೆ ಮಾಡಿಬೇಕು. ವೈರ್‌ಲೆಸ್‌ ಸಂಪರ್ಕಗಳಿಗಿಂತ ಇಂಟರ್ನೆಟ್ ಮತ್ತು ಲ್ಯಾನ್‌ ಸಂಪರ್ಕಗಳ ವೇಗ ಹೆಚ್ಚು ಎಂಬುದರಲ್ಲಿ ಯಾವುದೇ ಸಂಶಯಬೇಡ.

ನಿಮ್ಮ ವೈಫೈ ನೆಟ್‌ವರ್ಕ್‌ಗೆ ಡಿವೈಸ್‌ಗಳನ್ನು ಕಡಿಮೆಗೊಳಿಸಿ

ನಿಮ್ಮ ಯಾವುದೇ ಸಾಧನವು ಬಳಕೆಯಾಗದೆ ನಿಷ್ಕ್ರಿಯಗೊಂಡಿರಬಹುದು, ಆದರೆ ಅದು ನಿಮ್ಮ ವೈರ್‌ಲೆಸ್‌ ನೆಟ್‌ವರ್ಕ್‌ಗೆ ಕನೆಕ್ಟ್‌ ಆಗಿದ್ದರೆ, ಅದು ಸಹ ನಿಮ್ಮ ಬ್ಯಾಂಡ್‌ವಿಡ್ತ್‌ ಬಳಕೆ ಮಾಡುತ್ತಿರುತ್ತದೆ. ವೇಗ ಕಡಿಮೆ ಆಗಲು ಅಂತಿಮವಾಗಿ ಕಾರಣವಾಗುತ್ತದೆ. ನಿಮ್ಮ ಸುತ್ತ ಮುತ್ತಲು ಇರುವ ಯಾವುದೇ ಡಿವೈಸ್‌ಗಳು ಬಳಕೆ ಆಗದೆ ನಿಷ್ಕ್ರಿಯವಾಗಿದ್ದು, ಅವುಗಳು ಇಂಟರ್‌ನೆಟ್‌ ಸಂಪರ್ಕ ಹೊಂದಿದ್ದರೆ ಮೊದಲು ಡಿಸ್‌ಕನೆಕ್ಟ್‌ ಮಾಡಿರಿ.