Kukke Subramanya: ಕುಕ್ಕೇ ಸೇರಿದ ನಾಗಲಿಂಗ!! ಅಯೋಧ್ಯೆಗೆ ಸಸಿ ಕಳುಹಿಸಿದ್ದ ವಿನೇಶ್ ಪೂಜಾರಿಯಿಂದ ಕುಕ್ಕೆಗೆ ಸಸಿ ವಿತರಣೆ

Share the Article

ಸುಬ್ರಹ್ಮಣ್ಯ:ಕಳೆದ ಕೆಲ ವರ್ಷಗಳಿಂದ ಅಳಿವಿನಂಚಿನ ನಾಗಲಿಂಗ ವೃಕ್ಷದ ಸಸಿಗಳನ್ನು ಸಂರಕ್ಷಣೆ ಮಾಡುವ ಮೂಲಕ ದೈವ-ದೇವಸ್ಥಾನಗಳಿಗೆ ವಿತರಿಸುತ್ತಿರುವ ವಿನೇಶ್ ಪೂಜಾರಿ ನಿಡ್ಡೋಡಿಯವರಿಂದ ದಕ್ಷಿಣ ಭಾರತದ ಪ್ರಸಿದ್ಧ ನಾಗ ಕ್ಷೇತ್ರವಾದ ಕುಕ್ಕೇ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೂ ಸಸಿ ವಿತರಣೆ ನಡೆಯಿತು.

ಇದನ್ನೂ ಓದಿ: Parliment election : ‘ಕಮಲ’ ಪಡೆಗೆ ಬಿಗ್ ಶಾಕ್ !! ಲೋಕಸಭಾ ಚುನಾವಣೆಯಲ್ಲಿ ‘ಕಾಂಗ್ರೆಸ್’ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ ‘ಬಿಜೆಪಿ’ಯ ಈ ಪ್ರಬಲ ನಾಯಕ

ಸುಬ್ರಹ್ಮಣ್ಯ ದೇವಸ್ಥಾನ ಹಾಗೂ ಸಂಪುಟ ನರಸಿಂಹ ಸ್ವಾಮಿ ಮಠಕ್ಕೆ ಸಸಿ ವಿತರಿಸಿದ ವಿನೇಶ್ ಅವರನ್ನು ಮಠದ ಸ್ವಾಮೀಜಿ ಆಶೀರ್ವದಿಸಿದರು.

ಈ ಮೊದಲು ಜಿಲ್ಲೆಯ ಹಲವಾರು ದೇವಸ್ಥಾನ ಮಠ ಮಂದಿರಗಳಲ್ಲಿ ಖುದ್ದು ತೆರಳಿ ಸಸಿ ವಿತರಿಸಿದ್ದ ವಿನೇಶ್ ಕಳೆದ ಒಂದೆರಡು ತಿಂಗಳ ಹಿಂದಷ್ಟೇ ಅಯೋಧ್ಯೆಯ ರಾಮ ಜನ್ಮಭೂಮಿಗೂ ನಾಗಲಿಂಗ ವೃಕ್ಷದ ಸಸಿ ಕಳುಹಿಸಿ ಸುದ್ದಿಯಾಗಿದ್ದರು. ಇವರ ಪರಿಸರ ಪ್ರೇಮಕ್ಕೆ ಹಲವಾರು ಸನ್ಮಾನ ಸಂದಿದ್ದು, ಸಸಿ ಬೇಕಾದಲ್ಲಿ ಇವರನ್ನು ಸಂಪರ್ಕಿಸಬಹುದು.

Leave A Reply