Tiger Dance: ಖ್ಯಾತ ಹುಲಿ ವೇಷಧಾರಿ ಅಶೋಕ್‌ ರಾಜ್‌ ಇನ್ನಿಲ್ಲ!!

Udupi: ಖ್ಯಾತ ಹುಲಿ ವೇಷಧಾರಿ ಅಶೋಕ್‌ ರಾಜ್‌ (56) ಅವರು ಮೃತ ಹೊಂದಿದ್ದಾರೆ. ಹುಲಿ ವೇಷಕ್ಕೆ ಹೊಸ ಆಯಾಮ ನೀಡಿದ್ದ ಖ್ಯಾತ ಕಲಾವಿದರಾಗಿದ್ದು ಅವರು ಅಲ್ಪ ಕಾಲದ ಅಸೌಖ್ಯದಿಂದ ನಿಧನ ಹಿಂದಿದ್ದಾರೆ.

 

ಇವರು ಕಳೆದ ಮೂರು ದಶಕಗಳಲ್ಲಿ ಹುಲಿ ವೇಷಧಾರಿಯಾಗಿ ಪ್ರಸಿದ್ಧರಾಗಿದ್ದು, ರಾಜ್ಯ, ದೇಶಾದ್ಯಂತ ಪ್ರಚಾರ ಮಾಡಿದ್ದರು.

ಇದನ್ನೂ ಓದಿ: ISIS Threat: ರಾಮಮಂದಿರ ಉದ್ಘಾಟನೆ ಬೆನ್ನಲ್ಲೇ ಐಸಿಸ್‌ ನಿಂದ ಹಿಂದುಗಳಿಗೆ ಬೆದರಿಕೆ, ಹತ್ಯೆಗೆ ಸ್ಕೆಚ್‌!

ಉಡುಪಿಯ ಕಾಡುಬೆಟ್ಟು ನಿವಾಸಿಯಾದ ಅಶೋಕ್ ರಾಜ್, ಉಡುಪಿ ಅಷ್ಟಮಿ ಹಾಗೂ ವಿಟ್ಲಪಿಂಡಿಯ ವೇಳೆ ತಮ್ಮ ತಂಡದ ಜೊತೆಗೆ ಹುಲಿ ವೇಷ ಧರಿಸುತ್ತಿದ್ದರು.

ಅಶೋಕ್ ರಾಜ್ ಕಾಡುಬೆಟ್ಟು ಅವರ ಇಡೀ ಕುಟುಂಬವೇ ಹುಲಿವೇಷ ನೃತ್ಯಕ್ಕೆ ತಮ್ಮ ಜೀವವನ್ನೇ ಮುಡಿಪಾಗಿಟ್ಟುಕೊಂಡಿದ್ದರು. ನಟಿ ಸುಷ್ಮಾ ರಾಜ್, ಅಶೋಕ್ ರಾಜ್ ಕಾಡುಬೆಟ್ಟು ಅವರ ಮಗಳು. ಅಶೋಕ್‌ ಅವರು ಕಳೆದ ಬಾರಿ ನವರಾತ್ರಿಯ ಸಂದರ್ಭ ಬೆಂಗಳೂರಿನಲ್ಲಿ ಹುಲಿವೇಷ ಧರಿಸಿ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾಗ ಅಸ್ವಸ್ಥರಾಗಿ, ಬಳಿಕ ಆಸ್ಪತ್ರೆ ಸೇರಿದ್ದರು.

Leave A Reply

Your email address will not be published.