Home Karnataka State Politics Updates Ayodhya Ram Mandir: ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಚ್ಛೆ ಇದೆಯೇ? ಈ ರೀತಿ ಅಯೋಧ್ಯೆಗೆ...

Ayodhya Ram Mandir: ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಚ್ಛೆ ಇದೆಯೇ? ಈ ರೀತಿ ಅಯೋಧ್ಯೆಗೆ ತೆರಳಿ!!!

Ayodhya Ram Mandir

Hindu neighbor gifts plot of land

Hindu neighbour gifts land to Muslim journalist

Ayodhya Ram Mandir: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮಮಂದಿರ ಪ್ರಾಣ ಪ್ರತಿಷ್ಠೆಗೆ (Pran Prathishta) ಇನ್ನೇನು ಕೆಲವೇ ದಿನ ಇದೆ. ಜ.22 ರಂದು ಈ ಸಮಾರಂಭವಿದ್ದು, ಈ ದೇಗುಲ ನಗರಿಗೆ ಅಯೋಧ್ಯೆಗೆ ನೀವು ಹೋಗಬೇಕು ಎಂಬ ಯೋಚನೆಯಲ್ಲಿದ್ದರೆ ಇಲ್ಲಿದೆ ಮಾಹಿತಿ.

ವಿಮಾನ ಮಾರ್ಗ: ಹಲವು ವಿಮಾನಯಾನ ಕಂಪನಿಗಳು ಭಾರತದ ವಿವಿಧ ನಗರಗಳಿಂದ ಅಯೋಧ್ಯೆಗೆ ವಿಮಾನ ಸೇವೆ ಪ್ರಕಟ ಮಾಡಿದೆ. ಮಹಾಯೋಗಿ ಗೋಕ್ರಖ್ನಾಥ್ ವಿಮಾನ ನಿಲ್ದಾಣ, ಗೋರಖ್‌ಪುರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಲಕ್ನೋ ಮತ್ತು ಪ್ರಯಾಗ್‌ರಾಜ್‌ ಅಥವಾ ವಾರಣಾಸಿ ವಿಮಾನ ನಿಲ್ದಾಣಗಳಿಗೆ ತೆರಳಿ ಅಯೋಧ್ಯೆಗೆ ಹೋಗಬಹುದು.

ಇದನ್ನೂ ಓದಿ: Live In Relationship: ಮದುವೆಗೂ ಮುನ್ನವೇ ಸಂಗಾತಿಗಳು ಜೊತೆಯಾಗಿ ಜೀವಿಸೋದು ಸರಿಯೇ?? ಅಧ್ಯಯನ ಬಿಚ್ಚಿಟ್ಟಿದೆ ಶಾಕಿಂಗ್ ನ್ಯೂಸ್!!

ರೈಲು ಮಾರ್ಗ: ರೈಲು ನಿಲ್ದಾಣವನ್ನು ಪ್ರಧಾನಿ ಮೋದಿ ಅವರು ಕಳೆದ ತಿಂಗಳು ಚಾಲನೆ ನೀಡಿದ್ದಾರೆ. ಮೀಸಲಾದ ಅಯೋಧ್ಯೆ ರೈಲ್ವೆ ಸ್ಟೇಷನ್‌ ವಿವಿಧ ವಲಯಗಳ ರೈಲ್ವೆಯಿಂದ ಉತ್ತಮ ಸಂಪರ್ಕ ಇದೆ.

ರಸ್ತೆ ಮಾರ್ಗ: ಸಾರ್ವಜನಿಕ ಮತ್ತು ಖಾಸಗಿ ಸೇವಾ ಬಸ್‌ಗಳು ಲಭ್ಯವಿದೆ. ಹಲವು ಪ್ರದೇಶಗಳಿಂದ ಅಯೋಧ್ಯೆಗೆ ಹಲವು ವಾಹನಗಳು ಸಂಚರಿಸುತ್ತದೆ. ಲಕ್ನೋ, ಗೋರಖ್‌ಪುರ, ದೆಹಲಿ ಮತ್ತು ಇತರ ಪ್ರಮುಖ ನಗರಗಳಿಂದ ಅಯೋಧ್ಯೆಗೆ ತೆರಳುತ್ತದೆ.