Home Crime Bengaluru ಹೋಟೆಲ್‌ಗೆ ಬಂದ ಯುವತಿಯ ಹಿಂಬದಿಗೆ ಕೈ ನಿಂದ ಹೊಡೆದ ಕಾಮುಕ! ನೋಡಿ ಖುಷಿಪಟ್ಟ ಉಳಿದಿಬ್ಬರು,...

Bengaluru ಹೋಟೆಲ್‌ಗೆ ಬಂದ ಯುವತಿಯ ಹಿಂಬದಿಗೆ ಕೈ ನಿಂದ ಹೊಡೆದ ಕಾಮುಕ! ನೋಡಿ ಖುಷಿಪಟ್ಟ ಉಳಿದಿಬ್ಬರು, ಮುಂದೇನಾಯ್ತು ಗೊತ್ತೇ?

Hindu neighbor gifts plot of land

Hindu neighbour gifts land to Muslim journalist

Misbehave: ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್, ಮೆಟ್ರೋ, ಮಾಲ್ಗಳಲ್ಲಿ ಹೆಣ್ಣು ಮಕ್ಕಳ ಜೊತೆಗೆ ಅಸಭ್ಯವಾಗಿ ವರ್ತಿಸುವ (Misbehave) ಪ್ರಕರಣಗಳು ಆಗಾಗ ವರದಿಯಾಗುತ್ತಲೇ ಇರುತ್ತವೆ. ಇದೀಗ, ವಿಜಯನಗರದ (Vijayanagar)ನಮ್ಮೂಟ ಹೋಟೆಲ್ ಬಳಿ ಕಾಮುಕರು ಯುವತಿಯೊಬ್ಬಳನ್ನು ಸ್ಪರ್ಶಿಸಿ ವಿಕೃತ ಸುಖ ಪಡುತ್ತಿದ್ದ ಕಾಮುಕರ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಇದನ್ನೂ ಓದಿ: Gruha Jyothi: ಗ್ಯಾರಂಟಿ ಯೋಜನೆ ಜಾರಿ ಬೆನ್ನಲ್ಲೇ ಗೃಹಜ್ಯೋತಿ ಫಲಾನುಭವಿಗಳಿಗೆ ಬೊಂಬಾಟ್ ಸುದ್ದಿ!!

ವಿಜಯನಗರ ಆರ್ಪಿಸಿ ಲೇಔಟ್ನಲ್ಲಿರುವ ನಮ್ಮೂಟ ಹೋಟೆಲ್ನಲ್ಲಿ ಡಿಸೆಂಬರ್ 30 ರ ಸಂಜೆ 7.30 ರ ವೇಳೆಗೆ ಹೋಟೆಲ್ ಗೆ ಬಂದ ಮೂವರು ಹುಡುಗರು ದೋಸೆ ತಿನ್ನುತ್ತ ಹರಟೆ ಹೊಡೆಯುತ್ತ ಅಲ್ಲೇ ನಿಂತಿದ್ದರಂತೆ. ಈ‌ ವೇಳೆ ಹೋಟೆಲ್ ಗೆ ಬಂದ ಯುವತಿಯ ಜೊತೆಗೆ ಯುವಕರ ಪಡೆ ಅನುಚಿತ ವರ್ತನೆ ತೋರಿದ್ದಾರೆ ಎನ್ನಲಾಗಿದೆ. ಈ ಸಂದರ್ಭ ಕಾಮುಕನೊಬ್ಬ ಯುವತಿಯ ಹಿಂಬದಿಗೆ ಕೈ ನಿಂದ ಹೊಡೆದು ಅನುಚಿತ ವರ್ತನೆ ತೋರಿದ್ದು, ಇದನ್ನು ನೋಡಿ ಉಳಿದಿಬ್ಬರು ಸ್ನೇಹಿತರು ಮಜಾ ತೆಗೆದುಕೊಳ್ಳುತ್ತಾ ಖುಷಿ ಪಟ್ಟಿದ್ದಾರೆ. ಈ ವೇಳೆ ಯುವತಿ ಯುವಕರ ಜೊತೆ ಗಲಾಟೆ ಮಾಡಿ ಕೂಗಾಡಿದ್ದಾರೆ. ಹೀಗಾಗಿ, ಸ್ಥಳೀಯರೆಲ್ಲರೂ ಸ್ಥಳಕ್ಕೆ ಜಮಾಯಿಸಿದ್ದಾರೆ. ಇದಾದ ಬಳಿಕ ಯುವಕರು ಪರಾರಿಯಾಗಿದ್ದಾರೆ.

ಘಟನೆ ನಡೆದು ಅನೇಕ ದಿನಗಳ ನಂತರ ಅಂದರೆ 2024 ರ ಜನವರಿ 10 ರಂದು ತಡವಾಗಿ ಈ ಘಟನೆ ಸಂಬಂಧ ಎಫ್ಐಆರ್ ದಾಖಲಾಗಿದೆ. ಈ ಕುರಿತು ಹೊಟೇಲ್ ಕ್ಯಾಷಿಯರ್ ದೂರು ನೀಡಿದ್ದು, ಜನ ಸೇರುತ್ತಿದ್ದಂತೆ ಮೂವರು ಯುವಕರು ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಸದ್ಯ, ಈ ಘಟನೆ ಸಂಬಂಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.