Ram Mandir Construction: ಲೋಕ ಸಭಾ ಚುನಾವಣೆ ಹಿನ್ನೆಲೆ ಬಿಜೆಪಿ ಅಪೂರ್ಣ ರಾಮ ಮಂದಿರ ಉದ್ಘಾಟನೆ: ಕಾಂಗ್ರೆಸ್ ಆರೋಪಕ್ಕೆ ಅಯೋಧ್ಯೆ ಅರ್ಚಕರ ಶಾಕಿಂಗ್ ಹೇಳಿಕೆ!!

Ram Mandir: ಜನವರಿ 16ರಿಂದ ರಾಮ ಮಂದಿರದಲ್ಲಿ ಪೂಜಾ ಕೈಂಕರ್ಯಗಳು ಆರಂಭವಾಗಲಿದೆ. ಅಯೋಧ್ಯೆ (Ayodhya)ರಾಮ ಮಂದಿರ (Ram Mandir)ಪ್ರಾಣಪ್ರತಿಷ್ಠೆಗೆ ಕ್ಷಣಗಣನೆ ಆರಂಭವಾಗಿದೆ. ಈ ನಡುವೆ, ರಾಮ ಮಂದಿರ ಉದ್ಘಾಟನೆ ವಿಚಾರ ರಾಜಕೀಯವಾಗಿ ಭಾರೀ ಚರ್ಚೆಗೆ ಕಾರಣವಾಗಿದೆ.

ಲೋಕಸಭೆ ಚುನಾವಣೆ(Assembly election)ನಡೆಯಲಿರುವ ಹಿನ್ನೆಲೆ ಪೂರ್ಣಗೊಳ್ಳದ ರಾಮ ಮಂದಿರವನ್ನು ಉದ್ಘಾಟನೆ ಮಾಡಲಾಗುತ್ತಿದೆ ಎಂದು ವಿಪಕ್ಷಗಳು ಬಿಜೆಪಿಯ ವಿರುದ್ದ ಆರೋಪ ಮಾಡುತ್ತಿವೆ. ಆದರೆ ಈ ಆರೋಪವನ್ನು ತಳ್ಳಿಹಾಕಿರುವ ಆಯೋಧ್ಯೆ ಅರ್ಚಕ, ಸರಯೂ ಮಹಾ ಆರತಿ ಅಧ್ಯಕ್ಷ ಮಹಾಂತ ದಾಸ್ ಮಹರಾಜ್ ವಿಪಕ್ಷಗಳಿಗೆ ತಿರುಗೇಟು ನೀಡಿದ್ದಾರೆ. ಕಾಂಗ್ರೆಸ್ ಆಡಳಿತದಲ್ಲಿ ನವೀಕರಣಗೊಂಡು ಪ್ರಾಣಪ್ರತಿಷ್ಠೆಗೊಂಡ ಸೋಮನಾಥ ಮಂದಿರದ ಇತಿಹಾಸ ಕೆದಕಿ ಟಾಂಗ್ ನೀಡಿದ್ದಾರೆ. ಸೋಮನಾಥ ಮಂದಿರವನ್ನು ಅಂದಿನ ಗೃಹ ಸಚಿವ ಸರ್ದಾರ್ ವಲ್ಲಬಾಯ್ ಪಟೇಲ್ ನವೀಕರಣ ಮಾಡಿದ್ದರು. ಸೋಮನಾಥ ದೇವಸ್ಥಾನದ ಪ್ರಾಣಪ್ರತಿಷ್ಠ ವೇಳೆ ಗರ್ಭಗುಡಿ, ಶಿಖರ ಯಾವುದು ಪೂರ್ಣಗೊಂಡಿರಲಿಲ್ಲ ಎಂದು ಮಹಾಂತ ದಾಸ್ ಮಹರಾಜ್ ಹೇಳಿದ್ದಾರೆ.

ಇದನ್ನೂ ಓದಿ: Dharmasthala ಕ್ಷೇತ್ರದಿಂದ ಶ್ರೀರಾಮನ ನಿತ್ಯ ಪೂಜೆಗೆ ಬೆಳ್ಳಿ ಪರಿಕರ!!!

ಜನರಿಗೆ ಸುಳ್ಳು ಮಾಹಿತಿಗಳನ್ನು ಹರಡಲಾಗುತ್ತಿದೆ. ಪ್ರಾಣಪ್ರತಿಷ್ಠೆ ಕುರಿತು ಅಪಪ್ರಚಾರ ಮಾಡಲಾಗುತ್ತಿದೆ. ರಾಮ ಮಂದಿರ ಪ್ರಾಣಪ್ರತಿಷ್ಠೆಗೆ ರಾಮ ಮಂದಿರದ ಗರ್ಭಗುಡಿ, ಶಿಖರ ಸಂಪೂರ್ಣ ನಿರ್ಮಾಣಗೊಂಡಿದೆ. ರಾಮ ಮಂದಿರದ ನೆಲಮಹಡಿ ಸಂಪೂರ್ಣ ಪೂರ್ಣಗೊಂಡಿದ್ದು, ಮೂರ್ತಿ ಪ್ರಾಣಪ್ರತಿಷ್ಠೆಗೆ ಗರ್ಭಗುಡಿ ಹಾಗೂ ಗರ್ಭಗುಡಿ ಶಿಖರ ಮುಖ್ಯವಾಗಿದ್ದು, ಈ ಎಲ್ಲಾ ಕೆಲಸಗಳು ಪೂರ್ಣಗೊಂಡಿದೆ ಎಂದಿದ್ದಾರೆ.

Leave A Reply

Your email address will not be published.