Criminal Case: ಹೆತ್ತವರನ್ನು ವೃದ್ಧಾಶ್ರಮಕ್ಕೆ ಸೇರಿಸ್ತೀರಾ? ಅಷ್ಟೇ, ಬೀಳುತ್ತೆ ಕ್ರಿಮಿನಲ್‌ ಕೇಸ್‌ ಮಕ್ಕಳೇ!!!

Criminal Case: ನೀವೇನಾದರೂ ಪೋಷಕರನ್ನು (Parents)ಕಡೆಗಣಿಸಿ, ವೃದ್ಧಾಶ್ರಮಕ್ಕೆ(Old Age Home)ಸೇರಿಸುವ ಯೋಚನೆಯಲ್ಲಿದ್ದೀರಾ??ಹಾಗಿದ್ರೆ, ಈ ವಿಚಾರ ತಿಳಿದುಕೊಳ್ಳಿ!!ಇನ್ನು ಮುಂದೆ ನಗರದಲ್ಲಿ ತಂದೆ-ತಾಯಿಯನ್ನು ನಿರ್ಲಕ್ಷಿಸುವವರ (Negligence)ವಿರುದ್ಧ ಕ್ರಿಮಿನಲ್ ಪ್ರಕರಣ(Criminal Case)ದಾಖಲಿಸಲು ನಗರ ಪೊಲೀಸರು ಮುಂದಾಗಿದ್ದಾರೆ.

 

ಹಲವು ಪ್ರಕರಣಗಳಲ್ಲಿ ಪೋಷಕರ ಹೆಸರಿನಲ್ಲಿ ಸಾಕಷ್ಟು ಆಸ್ತಿ ಇದ್ದರೂ ಕೂಡ ಮಕ್ಕಳು ಮಾತ್ರ ಆ ಪೋಷಕರನ್ನು ಕಡೆಗಣಿಸಿ ವೃದ್ಧಾಶ್ರಮಗಳಿಗೆ ಸೇರಿಸುವುದು ಇಲ್ಲವೇ ಅವರಿಂದ ದೂರು ಹೋಗಿ ನಿರ್ಲಕ್ಷ್ಯ ಧೋರಣೆ ತೋರುತ್ತಿರುವುದು ಹೆಚ್ಚಾಗಿ ಕಂಡುಬರುತ್ತಿದೆ. ಈ ಹಿನ್ನೆಲೆಯಲ್ಲಿ ನಗರ ಪೊಲೀಸರು ತಂದೆ-ತಾಯಿಯನ್ನು ನಿರ್ಲಕ್ಷಿಸುವ ಮಕ್ಕಳಿಗೆ ಕಾನೂನಿನ ಮೂಲಕ ತಕ್ಕ ಪಾಠ ಕಲಿಸಲು ಮುಂದಾಗಿದ್ದಾರೆ.

ಇದನ್ನೂ ಓದಿ: Namma Metro: ನಮ್ಮ ಮೆಟ್ರೋದಿಂದ ಮಹಿಳಾ ಪ್ರಯಾಣಿಕರಿಗೆ ಗುಡ್‌ನ್ಯೂಸ್‌!!!

ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಅವರು ಖುದ್ದು ಅಂಗವಿಕಲರು ಹಾಗೂ ವೃದ್ಧಾಶ್ರಮ ಆಶ್ರ ಮಕ್ಕೆ ತೆರಳಿ ಸಿಹಿ, ಹಣ್ಣು ಹಂಪಲು ಹಂಚಿದ್ದರು. ಇದರ ನಡುವೆ, ಇದೀಗ ಕಾರಣವಿಲ್ಲದೆ ತಂದೆ-ತಾಯಿಯನ್ನು ನಿರ್ಲಕ್ಷಿಸುವರ ಹಾಗೂ ಹೆತ್ತವರ ತ್ಯಜಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ನಗರದ ಎಲ್ಲಾ ಪೊಲೀಸ್ ಠಾಣೆಗಳಿಗೆ ಸೂಚನೆ ನೀಡಿದ್ದಾರೆ. ಪೋಷಕರ ಕಲ್ಯಾಣ ಮತ್ತು ಹಿರಿಯ ನಾಗರಿಕರ ಕಾಯ್ದೆ 2007ರ ಪ್ರಕಾರ ಪೋಷಕರನ್ನು ನಿರ್ಲಕ್ಷಿಸುವುದು ಇಲ್ಲವೇ ಅವರನ್ನು ತ್ಯಜಿಸುವುದು ಅಪರಾಧವಾಗಿದೆ. ಅಂತಹವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲು ಅವಕಾಶವಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ.

Leave A Reply

Your email address will not be published.