Namma Metro: ನಮ್ಮ ಮೆಟ್ರೋದಿಂದ ಮಹಿಳಾ ಪ್ರಯಾಣಿಕರಿಗೆ ಗುಡ್‌ನ್ಯೂಸ್!!!
Namma Metro : ಇತ್ತೀಚೆಗೆ ಮೆಟ್ರೋ ರೈಲಿನಲ್ಲಿ ಮಹಿಳಾ ಪ್ರಯಾಣಿಕರಿಗೆ ಲೈಂಗಿಕ ಕಿರುಕುಳ ನೀಡುತ್ತಿರುವ (Physical Abuse) ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಹಿನ್ನೆಲೆಯಲ್ಲಿ ಸುರಕ್ಷತೆಗಾಗಿ ರೈಲಿನಲ್ಲಿ ಮತ್ತೊಂದು ಬೋಗಿ ಮಹಿಳೆಯರಿಗೆ ಮೀಸಲಿಡಲು ಮನವಿ ಮಾಡಲಾಗಿದೆ.
ಇದನ್ನೂ ಓದಿ: Rama Temple: ರಾಮ ಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ ಈ ಸಿಎಂಗೆ ಹೊರತುಪಡಿಸಿ ಬೇರೆ ಯಾವ ಸಿಎಂಗಳಿಗೂ ಆಹ್ವಾನಿವಿಲ್ಲ…
ನಮ್ಮ ಮೆಟ್ರೋ ತನ್ನ ಮಹಿಳಾ ಪ್ರಯಾಣಿಕರ ಸುರಕ್ಷತೆಗಾಗಿ ಮತ್ತೊಂದು ಬೋಗಿ ಮೀಸಲಿಡಲು ಚಿಂತನೆ ಮಾಡಿದೆ. ನಮ್ಮ ಮೆಟ್ರೋದಲ್ಲಿ (Namma Metro) ಇತ್ತೀಚೆಗೆ ಮಹಿಳಾ ಪ್ರಯಾಣಿಕರು ಲೈಂಗಿಕ ಕಿರುಕುಳಕ್ಕೆ (Physical Abuse) ಒಳಗಾಗುತ್ತಿದ್ದಾರೆ. ಸದ್ಯ ಮಹಿಳೆಯರ ಸುರಕ್ಷತೆಗಾಗಿ ಮತ್ತೊಂದು ಬೋಗಿ ಮೀಸಲಿಡಲು ಮನವಿಗಳು ಬಂದಿದೆಯಂತೆ. ಈಗಾಗಲೇ ರೈಲಿನಲ್ಲಿ ಮಹಿಳೆಯರಿಗಾಗಿ ಪ್ರತ್ಯೇಕ ಬೋಗಿಯಿದ್ದು, ಇದೀಗ ಮತ್ತೊಂದು ಬೋಗಿ ಮೀಸಲಿಡಬೇಕೆಂದು ಮೆಟ್ರೋಗೆ ಬೇಡಿಕೆ ಬಂದಿದೆ. ಬಿಎಂಆರ್‌ಸಿಎಲ್ ಕೂಡ ಈ ಬಗ್ಗೆ ಚರ್ಚೆ ನಡೆಸುತ್ತಿದ್ದು, ಶೀಘ್ರದಲ್ಲೇ ಮಹಿಳೆಯರಿಗೆ ಒಟ್ಟಾರೆ ಎರಡು ಬೋಗಿ ಮೀಸಲಿಡಲು ಚಿಂತನೆ ನಡೆಸಿದೆ.