KSRTC Bus: ಶಕ್ತಿ ಯೋಜನೆ ಎಫೆಕ್ಟ್: KSRTC ಪ್ರಯಾಣಿಕರ ಜೇಬಿಗೆ ಕತ್ತರಿ: ಟಿಕೇಟ್ ದರದಲ್ಲಿ ಭಾರೀ ಹೆಚ್ಚಳ!!

KSRTC BUS: ಕೆಎಸ್‌ಆರ್‌ಟಿಸಿ ಬಸ್(KSRTC Bus)ಪ್ರಯಾಣಿಕರಿಗೆ ಶಾಕಿಂಗ್ ನ್ಯೂಸ್ (Shocking News)ಹೊರಬಿದ್ದಿದೆ. KSRTC ಟಿಕೆಟ್ ದರದಲ್ಲಿ ಒಂದು ರೂ. ಏರಿಕೆ ಕಂಡಿದೆ. ಜ.1 ರಿಂದ ಟಿಕೆಟ್ ದರದಲ್ಲಿ ಒಂದು ರೂ. ಹೆಚ್ಚಿಸಲಾಗಿದ್ದು, 50 ರೂ. ಮೇಲ್ಪಟ್ಟು ಟಿಕೆಟ್ ಖರೀದಿಸುವ ಪ್ರಯಾಣಿಕರಿಂದ 1 ರೂಪಾಯಿ ಹೆಚ್ಚಿನ ದರ ಸಂಗ್ರಹ ಮಾಡಿಕೊಳ್ಳಲಾಗುತ್ತಿದೆ.

ಬಸ್‌ನಲ್ಲಿ‌ ಪ್ರಯಾಣಿಸುವ ವೇಳೆ ಪ್ರಯಾಣಿಕರು ಮೃತಪಟ್ಟರೆ ಮೃತ ಪ್ರಯಾಣಿಕರ ಅವಲಂಬಿತರಿಗೆ ಹೆಚ್ಚಿನ ಆರ್ಥಿಕ ನೆರವು ದೊರೆಯಲಿದೆ. ಹೀಗಾಗಿ ಪ್ರಯಾಣಿಕರಿಂದ 1 ರೂ. ಹೆಚ್ಚಾಗಿ ಸಂಗ್ರಹ ಮಾಡಲಾಗುತ್ತಿದೆ. ಈ ರೀತಿ ಹೆಚ್ಚಿಗೆ ಪಡೆದ 1 ರೂಪಾಯಿಯನ್ನು ಅಪಘಾತ ವಿಮೆಗೆ ಬಳಸಲು ಸಾರಿಗೆ ಇಲಾಖೆ ತೀರ್ಮಾನ ಮಾಡಿದೆ. ಅಪಘಾತ ವಿಮೆಗೆ ಬಳಸಲು 1 ಲಕ್ಷದಿಂದ 10 ಲಕ್ಕಕ್ಕೆ ಏರಿಕೆ ಮಾಡಲಾಗಿದ್ದು, 50 ರೂ.ನಿಂದ 99 ರೂ.ವರೆಗಿನ ಮುಖ ಬೆಲೆಯ ಟಿಕೆಟ್ ಪಡೆದು ಪ್ರಯಾಣಿಸುವ ಪ್ರತಿ ಪ್ರಯಾಣಿಕರಿಂದ ತಲಾ 1 ರೂ. ಪಡೆಯಲಾಗುತ್ತಿದೆ.

ಇದನ್ನೂ ಓದಿ: CM Siddaramaiah: ರಾಜ್ಯ ಸರಕಾರದಿಂದ ಅತಿಥಿ ಶಿಕ್ಷಕರಿಗೆ ಭರ್ಜರಿ ಗುಡ್‌ನ್ಯೂಸ್‌!!!

100 ರೂ. ಹಾಗೂ ಹೆಚ್ಚಿನ ಬೆಲೆಯ ಟಿಕೆಟ್ ಪಡೆದು ಪ್ರಯಾಣಿಸುವ ಪ್ರತಿ ಪ್ರಯಾಣಿಕರಿಂದ ತಲಾ 2 ರೂ.ನಂತೆ ಅಪಘಾತ ಪರಿಹಾರ ನಿಧಿ ವಂತಿಕೆ ಸಂಗ್ರಹ ಮಾಡಿಕೊಳ್ಳಲಾಗುತ್ತಿದೆ. ಅಪಘಾತ ಪರಿಹಾರ ಮೊತ್ತವನ್ನು 3 ಲಕ್ಷ ರೂ.ಗಳಿಂದ 10 ಲಕ್ಷ ರೂ.ಗಳಿಗೆ ಹೆಚ್ಚಿಸಿದ ಹಿನ್ನೆಲೆಯಲ್ಲಿ ಹೆಚ್ಚಿನ ಹಣ ಪಡೆಯಲಾಗುತ್ತಿದೆ.

Leave A Reply

Your email address will not be published.