Scholarships: ವಿದ್ಯಾರ್ಥಿಗಳೇ ಗಮನಿಸಿ, ಎಲ್‌ಐಸಿ ಗೋಲ್ಡನ್ ಜುಬಿಲಿ ಸ್ಕಾಲರ್‌ಶಿಪ್ ಸ್ಕೀಮ್: ನಿಮಗೆ ಸಿಗಲಿದೆ ಭರ್ಜರಿ ಮೊತ್ತ, ಅರ್ಜಿ ಸಲ್ಲಿಸಲು ಜನವರಿ 14 ಕೊನೆಯ ದಿನ!!
Scholarships: ಶಿಕ್ಷಣ( Education)ಪ್ರತಿಯೊಬ್ಬರ ಜೀವನದಲ್ಲಿ ಮಹತ್ತರ ಪಾತ್ರ ವಹಿಸುತ್ತದೆ. ಇಂದು ಓದುವ ಅಭಿಲಾಷೆ ಹೊತ್ತ ಅದೆಷ್ಟೋ ಆಕಾಂಕ್ಷಿಗಳಿಗೆ ಶಿಕ್ಷಣ ಸಂಸ್ಥೆಗಳು, ಟ್ರಸ್ಟಿಗಳು ಬೆಂಬಲವಾಗಿ ನಿಂತು ಓದುವ ಕನಸಿಗೆ ಸಾಥ್ ನೀಡುತ್ತಿವೆ. ಇದರ ಜೊತೆಗೆ ಸರ್ಕಾರ ಕೂಡ ಉಚಿತ ವಿದ್ಯಾಭ್ಯಾಸ, ಉನ್ನತ ಶಿಕ್ಷಣಕ್ಕೆ ಸಾಲ ಸೌಲಭ್ಯ, ಸ್ಕಾಲರ್‌ಶಿಪ್ (Scholarships) ಮುಂತಾದ ಯೋಜನೆಗಳನ್ನು ಪ್ರಕಟಿಸಿ ವಿದ್ಯಾರ್ಥಿಗಳಿಗೆ ನೆರವು ನೀಡುತ್ತಿವೆ.
ಲೈಫ್ ಇನ್ಶುರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (LIC) ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಸೇರಿದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ನೆರವಾಗುವ ಸಲುವಾಗಿ (lic scholarship)ಎಲ್‌ಐಸಿ ಗೋಲ್ಡನ್ ಜುಬಿಲಿ ಸ್ಕಾಲರ್‌ಶಿಪ್ ಸ್ಕೀಮ್ 2023 ಅನ್ನು(LIC Golden Jubilee Scholarship Scheme 2023) ಪರಿಚಯಿಸಲಾಗಿದೆ.
10ನೇ ತರಗತಿಯ ಬಳಿಕ ಮತ್ತು 12ನೇ ತರಗತಿಯ ಬಳಿಕದ ಕೋರ್ಸ್‌ಗಳನ್ನು ಅಧ್ಯಯನ ಮಾಡುವ ವಿದ್ಯಾರ್ಥಿಗಳು ಸ್ಕಾಲರ್‌ಶಿಪ್‌ಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು, ಜನವರಿ 14 ಕೊನೆಯ ದಿನವಾಗಿದೆ. ಈ ವಿದ್ಯಾರ್ಥಿ ವೇತನವನ್ನು ಜನರಲ್ ಸ್ಕಾಲರ್‌ಶಿಪ್ ಮತ್ತು ಹೆಣ್ಣು ಮಕ್ಕಳಿಗಾಗಿ ವಿಶೇಷ ಸ್ಕಾಲರ್‌ಶಿಪ್ ಎನ್ನುವ ಎರಡು ವಿಭಾಗಗಳಲ್ಲಿ ಸ್ಕಾಲರ್‌ಶಿಪ್ ನೀಡಲಾಗುತ್ತಿದೆ.
ಅರ್ಹತೆಗಳು:
ಜನರಲ್ ಸ್ಕಾಲರ್‌ಶಿಪ್:
* 12ನೇ ತರಗತಿ (ದ್ವಿತೀಯ ಪಿಯುಸಿ) ಅಥವಾ ತತ್ಸಮಾನ ಕೋರ್ಸ್ ಮುಗಿಸಿ ಮೆಡಿಕಲ್, ಎಂಜಿನಿಯರಿಂಗ್, ಪದವಿ ಅಥವಾ ಯಾವುದೇ ವೃತ್ತಿಪರ ಕೋರ್ಸ್‌ಗಳಲ್ಲಿ ಶಿಕ್ಷಣ ಮುಂದುವರಿಸುತ್ತಿರುವವರು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
* 10ನೇ ತರಗತಿ ಬಳಿಕ ಸಾಮಾನ್ಯ ವಿಭಾಗದ ಸ್ಕಾಲರ್‌ಶಿಪ್ ಪ್ರಯೋಜನ ಪಡೆಯಲು ಹತ್ತನೇ ತರಗತಿ ತೇರ್ಗಡೆಯಾಗಿ ವೃತ್ತಿಪರ / ಡಿಪ್ಲೋಮಾ ಕೋರ್ಸ್‌ಗಳಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿರುವವರು ಅರ್ಜಿ ಸಲ್ಲಿಸಬಹುದಾಗಿದೆ.
* ಹೆಣ್ಣು ಮಕ್ಕಳ ವಿಶೇಷ ಸ್ಕಾಲರ್‌ಶಿಪ್:
ಹತ್ತನೇ ತರಗತಿಯಲ್ಲಿ ತೇರ್ಗಡೆಯಾಗಿ ದ್ವಿತೀಯ ಪಿಯುಸಿ / ಪ್ಲಸ್ 2 / ವೃತ್ತಿಪರ ಅಥವಾ ಡಿಪ್ಲೋಮಾ ಕೋರ್ಸ್ ಓದುತ್ತಿರುವ ವಿದ್ಯಾರ್ಥಿನಿಯರು ಸ್ಕಾಲರ್ ಶಿಪ್ ಪಡೆಯಲು ಅರ್ಜಿ ಸಲ್ಲಿಸಬಹುದು.
* ಆಯ್ಕೆ ವಿಧಾನ
ಅರ್ಜದಾರರ 10 / 12ನೇ ತರಗತಿಯ ಅಂಕ, ಕುಟುಂಬದ ವಾರ್ಷಿಕ ಆದಾಯ ಪರಿಶೀಲಿಸಿ ಸ್ಕಾಲರ್‌ಶಿಪ್‌ಗೆ ಆಯ್ಕೆ ಮಾಡಲಾಗುತ್ತದೆ.
* ಸ್ಕಾಲರ್‌ಶಿಪ್ ಮೊತ್ತ
ಜನರಲ್ ಸ್ಕಾಲರ್‌ಶಿಪ್:
ಮೆಡಿಸಿನ್ ಕೋರ್ಸ್‌ಗಳಿಗೆ ಪ್ರತಿ ವರ್ಷ 3 ಕಂತುಗಳಲ್ಲಿ 40,000 ರೂ. ನೀಡಲಾಗುತ್ತದೆ.
ಎಂಜಿನಿಯರಿಂಗ್ ಕೋರ್ಸ್‌ಗಳಿಗೆ 3 ಕಂತುಗಳಲ್ಲಿ 30,000 ರೂ. ಯಾವುದೇ ರೀತಿಯ ಪದವಿ, ಡಿಪ್ಲೋಮಾ ಮತ್ತು ಇದೇ ಮಾದರಿಯ ವೃತ್ತಿಪರ ಕೋರ್ಸ್‌ಗಳಿಗೆ 3 ಕಂತುಗಳಲ್ಲಿ 20,000 ರೂ. ನೀಡಲಾಗುತ್ತದೆ.
ಹೆಣ್ಣು ಮಕ್ಕಳ ವಿಶೇಷ ಸ್ಕಾಲರ್‌ಶಿಪ್‌ನಲ್ಲಿ 3 ಕಂತುಗಳಲ್ಲಿ 15,000 ರೂ. ನೀಡಲಾಗುತ್ತದೆ.
* ಷರತ್ತುಗಳು
1. ಅರ್ಜಿದಾರರು 2022-23ನೇ ಸಾಲಿನಲ್ಲಿ ಶೇ. 60ರಷ್ಟು ಅಂಕಗಳೊಂದಿಗೆ ತೇರ್ಗಡೆಯಾಗಿರತಕ್ಕದ್ದು.
2. ಸರ್ಕಾರಿ ಮಾನ್ಯತೆ ಪಡೆದ ಕಾಲೇಜುಗಳು / ಸಂಸ್ಥೆಗಳಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿರಬೇಕು ಇಲ್ಲವೇ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ (ಐಟಿಐ) ಕೋರ್ಸ್ ಮುಂದುವರಿಸುತ್ತಿರಬೇಕು.
3. ಪಾಲಕರ / ಹೆತ್ತವರ ವಾರ್ಷಿಕ ಆದಾಯ 2,50,000 ರೂ. ಮೀರಿರಬಾರದು.