Donkey Route: ಡಾಂಕಿ ರೂಟ್‌ ಹಿಡಿದು ಅಮೆರಿಕನ್‌ ಫ್ಲೈಟ್‌ ಹಿಡಿದ 96,917 ಭಾರತೀಯರು; ಅಮೆರಿಕದಲ್ಲಿ ಅರೆಸ್ಟ್‌!!!

Donkey Route: ಬಾಲಿವುಡ್ನಲ್ಲಿ ಶಾರುಖ್ ಖಾನ್ ಅಭಿನಯದ ‘ಡಂಕಿ’ ಸಿನಿಮಾ ಡಿಸೆಂಬರ್ 21 ರಂದು ತೆರೆಕಂಡು ಭರ್ಜರಿ ಪ್ರದರ್ಶನ ಕಾಣುತ್ತಿದೆ. ಅಮೆರಿಕ, ಬ್ರಿಟನ್, ಕೆನಡಾದಂತಹ ದೇಶಗಳಿಗೆ ಉದ್ಯೋಗಕ್ಕೆ ಹೋಗಲು ಡಾಂಕಿ ರೂಟ್ (Donkey Route) ವಲಸೆ ವಿಧಾನ ಸಂಕಷ್ಟಗಳನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ.

 

ನಿಕರಾಗುವಾ(Nicaragua) ಗೆ ಹೊರಟಿದ್ದ 300ಕ್ಕೂ ಹೆಚ್ಚು ಭಾರತೀಯರನ್ನು ಹೊತ್ತ ವಿಮಾನವನ್ನು “ಮಾನವ ಕಳ್ಳಸಾಗಣೆ” (human trafficking) ಅನುಮಾನದ ಮೇರೆಗೆ ಫ್ರಾನ್ಸ್ನಲ್ಲಿ ತಡೆಹಿಡಿಯಲಾಗಿದೆ. ಭಾರತದಿಂದ ಹೊರಟ ವಿಮಾನವು ಅಕ್ರಮ ವಲಸಿಗರನ್ನು ಒಯ್ಯುತ್ತಿದ್ದಾರೆ ಎಂದು ಫ್ರೆಂಚ್ ಅಧಿಕಾರಿಗಳು ಅನಾಮಧೇಯರಿಂದ ಸುಳಿವು ಸಿಕ್ಕ ಹಿನ್ನೆಲೆಯಲ್ಲಿ ಚಾಲೋನ್ಸ್-ವಾಟ್ರಿ ವಿಮಾನ ನಿಲ್ದಾಣದಲ್ಲಿ ವಿಮಾನವನ್ನು ತಡೆಯಲಾದ ಘಟನೆ ವರದಿಯಾಗಿದೆ.ಇಂಗ್ಲಿಷ್ ಭಾಷೆಯಲ್ಲಿ ಡಾಂಕಿ ರೂಟ್, ಡಾಂಕಿ ಫ್ಲೈಟ್ ಎಂಬಿತ್ಯಾದಿ ಪದಗಳನ್ನು ಈ ಅಕ್ರಮ ವಲಸೆಗೆ ಬಳಸಲಾಗುತ್ತದೆ. ವಿಮಾನದಲ್ಲಿದ್ದವರು ಫ್ರಾನ್ಸ್ನಲ್ಲಿ ನಾಲ್ಕು ದಿನ ವಿಚಾರಣೆ ಎದುರಿಸಿದ್ದು, ಮಂಗಳವಾರ ಭಾರತಕ್ಕೆ ಮರಳಿದ್ದಾರೆ.

 

ಯುಎಸ್ ಕಸ್ಟಮ್ಸ್ ಮತ್ತು ಬಾರ್ಡರ್ ಪ್ರೊಟೆಕ್ಷನ್ (ಯುಸಿಬಿಪಿ) ಅಂಕಿಅಂಶಗಳ ಅನುಸಾರ 2022ರ ಅಕ್ಟೋಬರ್ ಮತ್ತು 2023 ರ ಸೆಪ್ಟೆಂಬರ್ ನಡುವೆ ದಾಖಲೆಯ 96,917 ಭಾರತೀಯರನ್ನು ಅಕ್ರಮವಾಗಿ ಅಮೆರಿಕ ಪ್ರವೇಶಿಸುವಾಗ ಬಂಧಿಸಲಾಗಿದೆ. ಈ ಪೈಕಿ ಕೆನಡಾ ಗಡಿಯಲ್ಲಿ 30,010 ಮತ್ತು ಮೆಕ್ಸಿಕೊ ಗಡಿಯಲ್ಲಿ 41,770 ಭಾರತೀಯರು ಸಿಕ್ಕಿಬಿದ್ದಿದ್ದಾರೆ ಎನ್ನಲಾಗಿದೆ.

ಸಾಮಾನ್ಯವಾಗಿ ನಕಲಿ ದಾಖಲಾತಿಯಿಂದ ಹಿಡಿದು ಶಿಪ್ಪಿಂಗ್ ಕಂಟೈನರ್ಗಳ ಮೂಲಕ ಕಳ್ಳಸಾಗಣೆಯವರೆಗೆ ಸೇವೆಗಳಿಗೆ ಭಾರಿ ಶುಲ್ಕವನ್ನು ವಿಧಿಸಲಾಗುತ್ತದೆ. ಪ್ರತಿ ವರ್ಷ, ಸಾವಿರಾರು ಭಾರತೀಯರು ತಮ್ಮ ಪ್ರಾಣವನ್ನೇ ಪಣವಾಗಿಟ್ಟುಕೊಂಡು ಈ ರೀತಿಯ ಅಪಾಯದ ವಿಧಾನಗಳ ಮೂಲಕ ಯುನೈಟೆಡ್ ಸ್ಟೇಟ್ಸ್, ಕೆನಡಾ ಅಥವಾ ಯುರೋಪಿಯನ್ ದೇಶಗಳನ್ನು ಪ್ರವೇಶಿಸಲು ಪ್ರಯತ್ನ ಪಡುತ್ತಾರೆ. ಅಪಾಯ ಎದುರಿಸಿ ಡಾಂಕಿ ರೂಟ್ ಮೂಲಕ ಹೋಗುವ ಭಾರತೀಯರು, ಈಕ್ವಡಾರ್, ಬೊಲಿವಿಯಾ ಅಥವಾ ಗುಯಾನಾ ಮುಂತಾದ ಲ್ಯಾಟಿನ್ ಅಮೆರಿಕ ದೇಶಗಳಿಗೆ ಮೊದಲು ಪ್ರವೇಶಿಸುತ್ತಾರೆ.

 

ಇದನ್ನು ಓದಿ: Ramanath Rai: ಮುಸ್ಲಿಂ ಮಹಿಳೆಯರಿಗೆ ಪರ್ಮನೆಂಟ್‌ ಗಂಡ ಹೇಳಿಕೆ ವಿವಾದ; ಕಲ್ಲಡ್ಕ ಪ್ರಭಾಕರ್‌ ಭಟ್ಟರ ಬಂಧನಕ್ಕೆ ರಮಾನಾಥ್‌ ರೈ ತೀವ್ರ ಆಗ್ರಹ!!!

Leave A Reply

Your email address will not be published.