Home News Love Breakup: ಮಾಜಿ ಪ್ರಿಯಕರನ ಮೇಲೆ ಸೇಡು ತೀರಿಸಿಕೊಳ್ಳಲು ಮುಂದಾದ ಪ್ರಿಯತಮೆ; ಈಕೆ ಮಾಡಿದ್ದೇನು ಗೊತ್ತೇ?...

Love Breakup: ಮಾಜಿ ಪ್ರಿಯಕರನ ಮೇಲೆ ಸೇಡು ತೀರಿಸಿಕೊಳ್ಳಲು ಮುಂದಾದ ಪ್ರಿಯತಮೆ; ಈಕೆ ಮಾಡಿದ್ದೇನು ಗೊತ್ತೇ? ಅನಂತರ ತಾನು ಹೆಣೆದ ಬಲೆಗೆ ಈಕೆನೇ ಬಿದ್ದದ್ದು ಹೇಗೆ?

Love Breakup

Hindu neighbor gifts plot of land

Hindu neighbour gifts land to Muslim journalist

Love Breakup: ಪ್ರೀತಿಯಲ್ಲಿ ಜಗಳ ಆಗುವುದು ಸಹಜ. ಈ ಜಗಳದಿಂದ ಕೆಲವೊಮ್ಮೆ ಪ್ರೇಮಿಗಳ ಮಧ್ಯೆ ಬ್ರೇಕಪ್‌ ಕೂಡಾ ಆಗುವುದು ಸಹಜ. ಅದರಲ್ಲೂ ಈಗಿನ ಬ್ರೇಕಪ್‌ಗಳು ಒಂದೆರಡು ತಿಂಗಳ ಮಟ್ಟಿಗೆ ಮಾತ್ರ ಇರುತ್ತದೆ. ಅನಂತರ ಇನ್ನೊಬ್ಬರನ್ನು ಪ್ರೀತಿಸಿ move on ಆಗುವುದು ಸಹಜವಾಗಿದೆ. ಆದರೆ ಇದಕ್ಕೆಲ್ಲ ವಿರುದ್ಧವಾಗಿ ಹೈದರಾಬಾದ್‌ನಲ್ಲಿ ಯುವತಿಯೊಬ್ಬಳು ಮಾಜಿ ಪ್ರಿಯಕರನ ಮೇಲೆ ಸೇಡು ತೀರಿಸಿಕೊಳ್ಳಲು ಮಾಡಿದ ಪ್ಲಾನ್‌ನಲ್ಲಿ ಆತನನ್ನು ಜೈಲಿಗಟ್ಟಿದ ಪ್ರಕರಣವೊಂದು ಕಂಡು ಬಂದಿದೆ. ಅನಂತರ ಈ ಕಹಾನಿಯ ಹಿಂದೆ ಮಾಜಿ ಪ್ರಿಯತಮೆಯ ಕೈವಾಡ ಇದೆ ಎನ್ನುವುದು ಬೆಳಕಿಗೆ ಬಂದಿದೆ.

ಡಿ.25ರಂದು ಅಧೋಕ್ಷಜಾ ಎಂಬ ಪ್ರಿಯತಮೆ ತನ್ನ ಮಾಜಿ ಪ್ರಿಯಕರನಿಗೆ ಶ್ರವಣ್‌ಗೆ ಕರೆ ಮಾಡಿದ್ದಾಳೆ. ” ಒಮ್ಮೆ ಭೇಟಿಯಾಗಿ, ನಮ್ಮ ನಡುವಿನ ಭಿನ್ನಾಭಿಪ್ರಾಯಗಳನ್ನು ಸರಿಮಾಡುವ. ಇಬ್ಬರು ನಮ್ಮ ಪಾಡಿಗೆ ನಾವಿರುವ” ಎಂದು ಹೇಳಿದ್ದಾರೆ. ಈಕೆಯ ಮಾತನ್ನು ನಂಬಿದ ಶ್ರವಣ್‌, ಮಾಜಿ ಪ್ರಿಯತಮೆ, ಆಕೆಯ ಹಾಲಿ ಬಾಯ್‌ಫ್ರೆಂಡ್‌, ಹಾಗೂ ನಾಲ್ವರು ಗೆಳೆಯನ್ನು ತನ್ನ ಕಾರಿನಲ್ಲಿಯೇ ಭೇಟಿಯಾಗಿದ್ದಾನೆ. ಈ ಸಂದರ್ಭದಲ್ಲಿ ಅಧೋಕ್ಷಜಾಳ ಗೆಳೆಯರು ಮಾಜಿ ಪ್ರಿಯಕರನ ಕಾರಿನಲ್ಲಿ ಗಾಂಜಾ ಬಚ್ಚಿಟ್ಟಿದ್ದಾರೆ. ಇದಾದ ನಂತರ ಅಧೋಕ್ಷಜಾ ಜುಬಿಲಿ ಹಿಲ್‌ ಪೊಲೀಸರಿಗೆ ಕರೆ ಮಾಡಿದ್ದು, ಗಾಂಜಾ ಸಾಗಣೆ ಮಾಡಲಾಗುತ್ತಿದೆ ಎಂಬ ವಿಷಯವನ್ನು ಹೇಳಿದ್ದಾಳೆ. ಆದರೆ ಶ್ರವಣ್‌ ಅದೃಷ್ಟ ಚೆನ್ನಾಗಿತ್ತು, ಹಾಗಾಗಿ ವಂಚನೆ ಬಯಲಾಗಿದೆ. ಇದೀಗ ಅಧೋಕ್ಷಜಾ, ಆಕೆಯ ಹಾಲಿ ಪ್ರಿಯತಮ ದೀಪಕ್‌, ನಾಲ್ವರು ಗೆಳೆಯರನ್ನು ಪೊಲೀಸರು ಬಂಧನ ಮಾಡಿದ್ದಾರೆ.

ಇದನ್ನು ಓದಿ: Heart Attack Chest Pain: ಮನುಷ್ಯನಿಗೆ ಹೃದಯಾಘಾತ ಕಾಣಿಸಿಕೊಂಡಾಗ, ಬರುವ ಎದೆನೋವು ಈ ರೀತಿ ಇರುತ್ತದೆ!!!

ಶ್ರವಣ್‌ನನ್ನು ಭೇಟಿಯಾಗಲು ಬಂದ ಈ ಆರು ಜನ ಮುಂದಿನ ಸೀಟಿನಲ್ಲಿ ಕುಳಿತ ಅಧೋಕ್ಷಜಾ ಶ್ರವಣ್‌ ಜೊತೆ ಮಾತನಾಡುತ್ತಾ ಇರುತ್ತಾಳೆ. ಇದೇ ಸಮಯದಲ್ಲಿ ಹಿಂದೆ ಕುಳಿತ ಅಧೋಕ್ಷಜಾ ಗೆಳೆಯರು ಶ್ರವಣ್‌ ಕಾರಿನ ಸೀಟಿನ ಕೆಳಗಡೆ ಗಾಂಜಾ ಇಟ್ಟಿದ್ದಾರೆ. ಅನಂತರ ಕೆಲವು ಹೊತ್ತಿನವರಿಗೆ ಮಾತನಾಡಿದ ಅಧೋಕ್ಷಜಾ ಇವರ ಎಲ್ಲ ಕೆಲಸ ಮುಗಿದ ಮೇಲೆ ಹೋಗಿದ್ದಾಳೆ. ಆದರೆ ಶ್ರವಣ್‌ಗೆ ಯಾಕೋ ಅನುಮಾನ ಬಂದು ತನ್ನ ಕಾರನ್ನು ಚೆಕ್‌ ಮಾಡಿದ್ದಾನೆ. ಆಗ ಆತನ ಕಣ್ಣಿಗೆ ಬಿದ್ದಿದೆ ಗಾಂಜಾ.

ಕೂಡಲೇ ಈ ಸಂಚನ್ನು ಅರಿತ ಶ್ರವಣ್‌, ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಕೂಡಲೇ ಪೊಲೀಸರು ತನಿಖೆ ನಡೆಸಿ ಅಧೊಕ್ಷಜಾ ಹಾಗೂ ಉಳಿದ ಐದು ಮಂದಿಯನ್ನು ಬಂಧನ ಮಾಡಿದ್ದಾರೆ. ನನ್ನ ಕ್ಯಾರೆಕ್ಟರ್‌ ಬಗ್ಗೆ ಶ್ರವಣ್‌ ಕೆಟ್ಟದಾಗಿ ಮಾತನಾಡುತ್ತಿದ್ದ. ಅದಕ್ಕೆ ಸೇಡು ತೀರಿಸಿಕೊಳ್ಳಲು ಈ ರೀತಿ ಮಾಡಿದೆವು ಎಂದು ಯುವತಿ ಪೊಲೀಸರಿಗೆ ಹೇಳಿದ್ದಾಳೆ.