Mangaluru: ಮಂಗಳೂರಿನಲ್ಲಿ ಕೊರೊನಾ ಸೋಂಕಿಗೆ ಮತ್ತೊಬ್ಬ ಬಲಿ!

Share the Article

Mangaluru: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕಿಗೆ ಮತ್ತೊಬ್ಬ ವ್ಯಕ್ತಿ ಬಲಿಯಾಗಿದ್ದಾರೆ. ಕೊರೊನಾ ಸೋಂಕಿತ 51 ವರ್ಷದ ವ್ಯಕ್ತಿ ಸಾವಿಗೀಡಾಗಿದ್ದಾರೆ.

ಮೃತ ವ್ಯಕ್ತಿ ಮಂಗಳೂರು ನಿವಾಸಿಯಾಗಿದ್ದು, ಜಿಲ್ಲಾ ವೆನ್ಲಾಕ್‌ ಆಸ್ಪತ್ರೆಗೆ ಡಿ.22 ರಂದು ದಾಖಲು ಮಾಡಲಾಗಿತ್ತು. ಇವರಿಗೆ ಜ್ವರ, ಕಫ, ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಇವರಿಗೆ ಕೊರೊನಾ ದೃಢವಾಗಿತ್ತು. ಈ ಹಿಂದೆ ಪಾರ್ಶ್ವವಾಯು ಸಮಸ್ಯೆಯಿಂದ ಬಳಲುತ್ತಿದ್ದ ವ್ಯಕ್ತಿಗೆ ಬಿಪಿ ಅಸ್ತಮಾ ಸಮಸ್ಯೆ ಇತ್ತು. ಕಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿ ಅನಂತರ ಸೋಂಕು ಹೆಚ್ಚಾಗಿ ಮೃತಪಟ್ಟಿದ್ದಾರೆ.

ಮೃತ ವ್ಯಕ್ತಿಯ ಮನೆಯಲ್ಲಿರುವ ಮೂರು ಜನರ ಮೇಲೆ ಆರೋಗ್ಯ ಇಲಾಖೆ ನಿಗಾ ಇರಿಸಿದೆ.

ಇದನ್ನು ಓದಿ: MP Pratap Simha: ಪ್ರತಾಪ್‌ ಸಿಂಹ ಸಿದ್ದರಾಮಯ್ಯರಿಗೆ ಏನೆಂದು ಹೇಳಿದ್ರು? ಏಕವಚನದಲ್ಲಿ ಅಂದ ಮಾತ್ಯಾವುದು? ದಾಖಲಾಯ್ತು ಪ್ರತಾಪ್‌ ಸಿಂಹ ವಿರುದ್ಧ FIR!!!

Leave A Reply