Ullal ಅನ್ಯಮತೀಯ ಯುವಕನೊಂದಿಗೆ ವಿದ್ಯಾರ್ಥಿಗಳ ಸುತ್ತಾಟ; ತಪ್ಪಿತು ನೈತಿಕ ಪೊಲೀಸ್‌ಗಿರಿ!!

Share the Article

Ullala: ವಿದ್ಯಾರ್ಥಿಗಳ ತಂಡವೊಂದು ಸೋಮೇಶ್ವರ ದೇವಸ್ಥಾನ ಸುತ್ತಿ ನಂತರ ಉಳ್ಳಾಲದಲ್ಲಿರುವ ಕಾಲೇಜಿಗೆ ತೆರಳಲು ನಿಂತಿದ್ದ ಸಂದರ್ಭದಲ್ಲಿ ಸ್ಥಳೀಯರು ಇವರನ್ನು ಪ್ರಶ್ನೆ ಮಾಡಿದ್ದು, ಈ ವಿದ್ಯಾರ್ಥಿಗಳ ತಂಡದಲ್ಲಿ ಓರ್ವ ಮುಸ್ಲಿಂ ವಿದ್ಯಾರ್ಥಿ ಇದ್ದ ಕಾರಣ ನೈತಿಕ ಪೊಲೀಸ್‌ಗಿರಿಯಾಗುವ ಮೊದಲೇ ಪೊಲೀಸರಿಗೆ ಮಾಹಿತಿ ನೀಡಿದ ಘಟನೆಯೊಂದು ನಡೆದಿದೆ.

ಈ ಘಟನೆ ಸೋಮೇಶ್ವರ ಬಸ್‌ ನಿಲ್ದಾಣದ ಬಳಿ ನಡೆದಿದೆ.

ಉಳ್ಳಾಲದ ಖಾಸಗಿ ಕಾಲೇಜಿನ ವಿದ್ಯಾರ್ಥಿಗಳ ತಂಡವೊಂದು ಸೋಮೇಶ್ವರ ದೇವಸ್ಥಾನ ಮತ್ತು ಬೀಚ್‌ಗೆ ಬಂದಿದ್ದು ಸಂಜೆ ಕೆಲವು ವಿದ್ಯಾರ್ಥಿಗಳು ತಮ್ಮ ವಾಹನಗಳಲ್ಲಿ ತೆರಳಿದರೆ, ಉಳಿದ ನಾಲ್ವರು ವಿದ್ಯಾರ್ಥಿನಿಯರು ಮತ್ತು ಮೂವರು ವಿದ್ಯಾರ್ಥಿಗಳು ಬಸ್‌ ನಿಲ್ದಾಣದ ಬಳಿ ಬಸ್ಸಿಗಾಗಿ ಕಾಯುತ್ತಿದ್ದರು. ಈ ಸಮಯದಲ್ಲಿ ವಿದ್ಯಾರ್ಥಿನಿಯೊಂದಿಗೆ ಇದ್ದ ಓರ್ವ ವಿದ್ಯಾರ್ಥಿಯನ್ನು ಸ್ಥಳೀಯರು ಪ್ರಶ್ನೆ ಮಾಡಿದಾಗ ಆತ ಮುಸ್ಲಿಂ ವಿದ್ಯಾರ್ಥಿ ಎಂದು ತಿಳಿದು ಬಂದಿದೆ. ಕೂಡಲೇ ಏನಾದರೂ ಅನಾಹುತ ಸಂಭವಿಸುವ ಮೊದಲೇ ಇವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಕೂಡಲೇ ಪೊಲೀಸರು ಆಗಮನಿಸಿದ್ದು, ನೈತಿಕ ಪೊಲೀಸ್‌ಗಿರಿ ತಪ್ಪಿದೆ. ನಂತರ ಪೊಲೀಸರು ವಿದ್ಯಾರ್ಥಿಗಳ ಹೆತ್ತವರಿಗೆ ಮಾಹಿತಿ ನೀಡಿದ್ದು, ಎಲ್ಲರೂ ಕೇರಳದ ಒಂದೇ ಊರಿನವರು ಎಂದು ತಿಳಿದು ಬಂದಿದೆ. ಹಾಗೂ ಆ ವಿದ್ಯಾರ್ಥಿಯ ಪರಿಚಯವಿದೆ ಎಂದು ಹೇಳಿದ್ದಾರೆ. ನಂತರ ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಿದ್ದು, ಯಾವುದೇ ಪ್ರಕರಣ ದಾಖಲು ಮಾಡಿಲ್ಲ ಎಂದು ವರದಿಯಾಗಿದೆ.

ಇದನ್ನು ಓದಿ: ಮದುವೆ ಊಟದಲ್ಲಿ ʼನಲ್ಲಿ ಮೂಳೆʼ ಸಿಗಲಿಲ್ಲ, ಮದುವೆ ಕ್ಯಾನ್ಸಲ್‌ ಮಾಡಿದ ವರ ಮಹಾಶಯ!ಅಷ್ಟೇ ಮುಂದೇನಾಯ್ತು?

Leave A Reply