Hijab Raw: ಹಿಜಾಬ್‌ ನಿಷೇಧ ವಾಪಸ್‌ ಕುರಿತು ಸಿಎಂ ಸಿದ್ದರಾಮಯ್ಯ ನೀಡಿದ್ರು ಬಿಗ್‌ ಅಪ್ಡೇಟ್‌; ಸ್ಪಷ್ಟನೆ ಕೊಟ್ಟ ಸಿಎಂ!

Share the Article

Hijab Raw: ಹಿಜಾಬ್‌ ವಿವಾದ ಆದೇಶ ವಾಪಸ್‌ ಕುರಿತು ಸಿಎಂ ಸಿದ್ದರಾಮಯ್ಯ ಅವರು ಹೇಳಿದ ಹೇಳಿಕೆ ವಿವಾದ ಆಗುತ್ತಿದ್ದಂತೆ ಸಿದ್ದರಾಮಯ್ಯ ಅವರು ಸ್ಪಷ್ಟನೆ ನೀಡಿದ್ದಾರೆ.

ಹಿಜಾಬ್‌ ಆದೇಶ ಇನ್ನೂ ವಾಪಸ್‌ ಪಡೆದಿಲ್ಲ. ಯೋಚನೆ ಮಾಡಿದ್ದೇವೆ ಅಷ್ಟೇ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ ಎಂದು ವರದಿಯಾಗಿದೆ.

ಈ ಕುರಿತು ಅವರು ಮೈಸೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡುತ್ತಾ ಹೇಳಿದ್ದಾರೆ. ಇದು ಯೋಚನೆ ಅಷ್ಟೇ. ಅವರು ಪ್ರಶ್ನೆ ಮಾಡಿದ್ದಕ್ಕೆ ನಾನು ಉತ್ತರ ಕೊಟ್ಟಿದ್ದೇನೆ ಎಂದು ಹೇಳಿದ್ದಾರೆ.

ಇದನ್ನು ಓದಿ: Hijab: ಹಿಜಾಬ್‌ ವಿಚಾರ ಸಂಬಂಧ; ವಿದ್ಯಾರ್ಥಿನಿಯರ ಮುಖದಲ್ಲಿ ಮಂದಹಾಸ!!!

ಸಿಎಂ ಹೇಳಿದ್ದೇನು? ವಿವಾದ ಯಾಕಾಯಿತು?
ಸಿದ್ದರಾಮಯ್ಯ ಅವರು ಪ್ರಧಾನಿ ಮೋದಿ ಅವರ ಸಬ್‌ ಕಾ ಸಾತ್‌ ಸಬ್‌ ಕಾ ವಿಕಾಸ್‌ ಬೋಗಸ್‌. ಬಟ್ಟೆ, ಜಾತಿ ಆಧಾರದ ಮೇಲೆ ಜನರನ್ನು ಸಮಾಜವನ್ನು ವಿಭಜಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ ಎಂಬ ಟೀಕೆ ಮಾಡಿದ್ದಾರೆ. ಬಟ್ಟೆ ಧರಿಸುವುದು ಅವರವರ ಇಷ್ಟ. ಊಟ, ಬಟ್ಟೆ ಎಲ್ಲಾ ನಿಮಗೆ ಸೇರಿದ್ದು. ಇದಕ್ಕೆ ನಾನು ಯಾಕೆ ಅಡ್ಡಿಪಡಿಸಲಿ. ಬಟ್ಟೆ, ಜಾತಿ ಆಧಾರದ ಮೇಲೆ ಬಿಜೆಪಿ ಜನರನ್ನು ವಿಭಜಿಸುತ್ತಿದೆ ಎಂಬ ಹೇಳಿಕೆ ನೀಡಿದ್ದರು.

Leave A Reply