Bollywood: ಈ ಖ್ಯಾತ ನಟಿಗೆ ಕುಟುಂಬದಿಂದಲೇ ದೈಹಿಕ ದೌರ್ಜನ್ಯ, ಗಂಡನಿದಲೇ ಚಿತ್ರ ಹಿಂಸೆ – ವೈರಲ್ ಆಯ್ತು ಶಾಕಿಂಗ್ ವಿಡಿಯೋ

Vaishnavi Dhanraj assault video: ಮಹಿಳೆಯರ ಮೇಲಿನ ದೌರ್ಜನ್ಯ, ಹಲ್ಲೆಗಳು ನಿರಂತರವಾಗಿ ನಡೆಯುತ್ತಲೇ ಇವೆ. ಇದೀಗ, ‘ಸಿಐಡಿ’ ಮತ್ತು ‘ಮಧುಬಾಲಾ’ ಶೋಗಳ ಮೂಲಕ ಖ್ಯಾತಿ ಗಳಿಸಿದ ಕಿರುತೆರೆ ನಟಿ ವೈಷ್ಣವಿ ಧನರಾಜ್(Vaishnavi Dhanraj assault video) ಅವರ ಮೇಲೆ ನಡೆದ ಹಲ್ಲೆ ಪ್ರಕರಣ ಮುನ್ನಲೆಗೆ ಬಂದಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ.

 

ಕಿರುತೆರೆ ನಟಿ ವೈಷ್ಣವಿ ಧನರಾಜ್ ಅವರ ವೀಡಿಯೋವೊಂದು ವೈರಲ್ ಆಗಿದ್ದು, ವಿಡಿಯೋದಲ್ಲಿ ವೈಷ್ಣವಿ ಧನರಾಜ್ ತೀವ್ರವಾಗಿ ಗಾಯಗೊಂಡಿರುವುದು ತಿಳಿಯುತ್ತದೆ. ನಟಿಯ ಮುಖ ಮತ್ತು ಕೈಗಳ ಮೇಲೆ ಗಾಯಗಳಾಗಿದ್ದು, ನಟಿ ತನ್ನ ಮೇಲೆ ನಡೆದ ಹಲ್ಲೆ ನಡೆದಿರುವ ಬಗ್ಗೆ ಅಭಿಮಾನಿಗಳ ಮುಂದೆ ಮಾಹಿತಿ ಹಂಚಿಕೊಂಡು ಸಹಾಯಕ್ಕೆ ಮನವಿ ಮಾಡಿದ್ದಾರೆ.

ವೈಷ್ಣವಿ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದಾರೆ. ಈ ಹಿಂದೆ ಕೂಡ ಅವರು ತಾವು ಎದುರಿಸಿದ ಕೌಟುಂಬಿಕ ಹಿಂಸೆಯ ಬಗ್ಗೆ ಮಾತನಾಡಿದ್ದರು. ಈ ಹಿಂದೆಯೂ ಪತಿ ತನಗೆ ಥಳಿಸಿದ್ದಾನೆ ಎಂದು ಆಕೆ ಹೇಳಿದ್ದರು. ವೈವಾಹಿಕ ಜೀವನದಲ್ಲಿ ಬಹಳ ಸಮಯದಿಂದ ಕೌಟುಂಬಿಕ ಹಿಂಸೆಯನ್ನು ಎದುರಿಸುತ್ತಿದ್ದಾರೆ ಎಂದು ಬಹಿರಂಗ ಪಡಿಸಿದ್ದರು. ಇದೀಗ, ನಟಿ ವೈಷ್ಣವಿ ಧನರಾಜ್ ಅವರು ತನಗೆ ಥಳಿಸಿದ್ದು ಕುಟುಂಬಸ್ಥರು ಎಂದು ವಿಡಿಯೋದಲ್ಲಿ ಹೇಳಿದ್ದು, ಪೊಲೀಸ್ ಠಾಣೆಯಲ್ಲಿ ಮಾಡಿದ್ದಾಗಿ ಹೇಳಿದ್ದಾರೆ. ಇದರ ಜೊತೆಗೆ ಮುಖ, ತುಟಿ ಮತ್ತು ಕೈಗಳ ಮೇಲೆ ಆದ ಗಂಭೀರವಾದ ಗಾಯಗಳನ್ನು ಈ ವಿಡಿಯೋದಲ್ಲಿ ನಟಿ ತೋರಿಸಿದ್ದಾರೆ.

ಇದನ್ನು ಓದಿ: Security Breach: ಸಂಸತ್ ಭದ್ರತಾ ಲೋಪ- ಲೋಕಸಭೆಯಲ್ಲಿ ಮಗನನ್ನು ಗೆಲ್ಲಿಸಲು ಪ್ರತಾಪ್ ಸಿಂಹ ವಿರುದ್ಧ ಸಿದ್ದರಾಮಯ್ಯ ಪಿತೂರಿಯೇ?! ಅರೆ ಏನಪ್ಪಾ ಇದು ಶಾಕಿಂಗ್ ನ್ಯೂಸ್?!

Leave A Reply

Your email address will not be published.