Anasuya Bharadwaj: ನನಗೆ ಹೆಣ್ಣು ಮಗು ಬೇಕಂದ್ರೂ ಗಂಡ ರೆಡಿ ಇಲ್ಲ – ಗಂಡನ ಬಗ್ಗೆ ಬೇಸರದ ಸಂಗತಿ ಬಹಿರಂಗಪಡಿಸಿದ ನಟಿ ಅನುಸೂಯ !!

Tollywood News Anasuya Bharadwaj wants to have a girl child latest news

Anasuya Bharadwaj: ನಟಿ ಅನಸುಯಾ ಭಾರದ್ವಾಜ್‌(Anasuya Bharadwaj) ಟಾಲಿವುಡ್‌ನಲ್ಲಿ ನಿರೂಪಕಿಯಾಗಿ ಗುರುತಿಸಿಕೊಂಡು, ಬಳಿಕ ಸಿನಿಮಾಗಳಲ್ಲೂ ನಟಿಸಿ ವಿವಾದಗಳಿಂದ ಹೆಚ್ಚು ಸುದ್ದಿಯಲ್ಲಿರುತ್ತಾರೆ. ಸುದ್ದಿ ನಿರೂಪಕಿಯಾಗಿ ವೃತ್ತಿ ಜೀವನ ಆರಂಭಿಸಿದ ಅನಸೂಯಾ ಭಾರದ್ವಾಜ್‌ ಇಬ್ಬರು ಗಂಡು ಮಕ್ಕಳ ಜೊತೆಗೆ ತುಂಬು ಖುಷಿಯ ಜೀವನ ನಡೆಸುತ್ತಿದ್ದಾರೆ. ಆದರೆ, ಹೆಣ್ಣು ಮಗು ಪಡೆಯಬೇಕೆಂಬ ಅವರ ಹಂಬಲ ಇಲ್ಲಿಯವರೆಗೆ ನೆರವೇರಿಲ್ಲ ಎಂದು ಅನುಸುಯಾ ಹೇಳಿಕೊಂಡಿದ್ದಾರೆ.

 

ಇದೀಗ ಅನಸುಯಾ ಅವರು ತಮ್ಮ ಮನದಾಳದ ನೋವನ್ನು ಬಿಚ್ಚಿಟ್ಟಿದ್ದಾರೆ. ಅನುಸೂಯಾ ಇತ್ತೀಚೆಗೆ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಕೆಲವು ಸಂಗತಿಗಳನ್ನು ಬಹಿರಂಗಪಡಿಸಿದ್ದಾರೆ. ” ತನಗೆ ಹೆಣ್ಣು ಮಗು ಬೇಕು, ಆದರೆ ಪತಿ ನನ್ನ ಭಾವನೆಗೆ ಸಹಕರಿಸುತ್ತಿಲ್ಲ ಎಂದು ಹೇಳಿಕೊಂಡಿದ್ದಾರೆ. ತನ್ನ ಅತ್ತೆಯ ಕುಟುಂಬ ಬಿಹಾರಕ್ಕೆ ಸೇರಿದ್ದು, ಅಲ್ಲಿನ ಸಂಪ್ರದಾಯಗಳೇ ಬೇರೆ ರೀತಿಯದ್ದಾಗಿದೆ. ಬಿಹಾರದಲ್ಲಿ ಪುರುಷರು ಇದ್ದ ಸ್ಥಳದಲ್ಲಿ ಹೆಂಗಸರು ತಲೆಗೆ ಸೆರಗು ಧರಿಸಿ, ತಲೆ ಕೆಳಗೆ ಹಾಕಿಕೊಂಡೇ ಹೋಗಬೇಕು. ಅಲ್ಲಿಗೆ ಹೋದರೆ ನಾನೂ ಹಾಗೇ ಇರುತ್ತೇನೆ.

ಇದನ್ನು ಓದಿ: Menstruation leave: ಮುಟ್ಟಿನ ರಜೆ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ಸ್ಮೃತಿ ಇರಾನಿ !!

ಬಿಹಾರದಲ್ಲಿ ಪುರುಷ ಪ್ರಾಬಲ್ಯ ಹೆಚ್ಚು.ನನಗೀಗ ಇಬ್ಬರು ಗಂಡು ಮಕ್ಕಳಿದ್ದಾರೆ. ಇತ್ತೀಚೆಗಷ್ಟೇ ಅತ್ತೆಗೆ ಹೆಣ್ಣು ಮಗು ಬೇಕು ಎಂದು ಹೇಳಿಕೊಂಡಿದ್ದೆ. ಹೀಗೆ ಹೇಳಿದಾಗ ಅವರಿಗೆ ಸಿಟ್ಟು ಬಂದಿತ್ತು. ಬಿಹಾರದಲ್ಲಿನ ಪದ್ಧತಿಗಳು ಹಾಗಿರುವ ಹಿನ್ನೆಲೆ ಹೀಗಾಗಿ ನನ್ನ ಮಾತನ್ನು ಅತ್ತೆ ಒಪ್ಪಲಿಲ್ಲ. ಈ ಬಗ್ಗೆ ನನ್ನ ಪತಿಗೆ ಕೇಳಿದಾಗ ಅವರು ಕೂಡ ಈ ಬಗ್ಗೆ ಸಹಕರಿಸುತ್ತಿಲ್ಲ. ಹೆಣ್ಣು ಮಕ್ಕಳಿರುವ ಮನೆಯು ಲಕ್ಷ್ಮಿ ದೇವಿಯ ಹಾಗೇ ಶಾಂತ, ವಿನಮ್ರವಾಗಿರಬಹುದು ಎಂದು ಸಂದರ್ಶನದಲ್ಲಿ ತನ್ನ ಮನದಾಸೆಯನ್ನು ತಿಳಿಸಿದ್ದಾರೆ.

 

Leave A Reply

Your email address will not be published.