Lemon Dou By coca Cola: ಹೊಸ ಲಿಕ್ಕರ್ ಬಿಡುಗಡೆಗೊಳಿಸಿ ‘ಮದ್ಯ’ ಮಾರಟಕ್ಕೂ ಜೈ ಎಂದ ಕೋಕಾ ಕೋಲಾ – ಮದ್ಯಪ್ರಿಯರಿಗಂತೂ ಬಂಪರ್ ಲಾಟ್ರಿ

Business news Coca-Cola India Expands Into Alcohol With Lemon-Dou latest news

Lemon Dou By Coca Cola: ಪಾನೀಯ ಮಾರಾಟಗಾರ ಕೋಕಾ ಕೋಲ ಇಂಡಿಯಾ ಸಂಸ್ಥೆ ಭಾರತದಲ್ಲಿ ಹೊಸ ಪ್ರಯತ್ನಕ್ಕೆ ಇಳಿದಿದೆ. ಹೌದು, ಕೋಕಾ ಕೋಲ ಸಂಸ್ಥೆ ಭಾರತದಲ್ಲಿ ಲಿಕ್ಕರ್ ಉತ್ಪನ್ನ ಪರಿಚಯಿಸುತ್ತಿದೆ. ತನ್ನ ರೆಡಿ ಟು ಡ್ರಿಂಕ್ ಆಲ್ಕೋಹಾಲ್ ಆಗಿರುವ ಲೆಮನ್ ಡೌ (Lemon Dou By coca Cola) ಅನ್ನು ಭಾರತದ ಕೆಲ ಆಯ್ದ ಪ್ರದೇಶಗಳಲ್ಲಿ ಬಿಡುಗಡೆ ಮಾಡಿದೆ.

ಸದ್ಯ ಕೋಕಾ ಕೋಲಾದ ಲೆಮನ್ ಡೌ ಉತ್ಪನ್ನವು ಮಹಾರಾಷ್ಟ್ರದ ಕೆಲ ಪ್ರದೇಶಗಳು ಹಾಗೂ ಗೋವಾದಲ್ಲಿ ಬಿಡುಗಡೆ ಆಗಿದೆ. ಕೋಕ ಕೋಲ ಲೆಮನ್ ಡೌ ಉತ್ಪನ್ನವನ್ನು ಚುಹಾಯ್ ಹೆಸರಿನಲ್ಲಿ ಐದು ವರ್ಷದ ಹಿಂದೆ ಜಪಾನ್​ನಲ್ಲಿ ಹೊರತಂದಿತ್ತು. ಅಲ್ಲದೇ ಚೀನಾ, ಫಿಲಿಪ್ಪೈನ್ಸ್ ದೇಶಗಳಲ್ಲೂ ಇದು ಲಭ್ಯ ಇದೆ.

ವರದಿ ಪ್ರಕಾರ ಕೋಕಾ ಕೋಲದ ಲೆಮನ್ ಡೌ ರೆಡಿ ಟು ಡ್ರಿಂಕ್ ಮದ್ಯದ ಬಾಟಲಿಯನ್ನು ಗೋವಾದಲ್ಲಿ ಮೊದಲಿಗೆ ಪರೀಕ್ಷಾರ್ಥವಾಗಿ ಬಿಡುಗಡೆ ಮಾಡಲಾಗಿದೆ. ಮಹಾರಾಷ್ಟ್ರದ ಕೆಲ ಪ್ರದೇಶಗಳಲ್ಲೂ ಇದನ್ನು ಬಿಡುಗಡೆ ಮಾಡಲಾಗಿರುವುದು ತಿಳಿದುಬಂದಿದೆ.
ಬ್ರಾಂದಿ, ವೋಡ್ಕಾ ರೀತಿಯ ಮದ್ಯ
ಲೆಮನ್ ಡೌ ರೆಡಿ ಟು ಡ್ರಿಂಕ್ ಮದ್ಯವಾಗಿದೆ. ಅಂದರೆ ಇದನ್ನು ಇತರ ಜ್ಯೂಸ್, ಕೋಲಾ ಬಾಟಲಿಗಳಂತೆ ಕುಡಿಯಲು ಸಿದ್ಧವಾಗಿರುವ ಪಾನೀಯ. ಬ್ರಾಂದಿ ಮತ್ತು ವೋಡ್ಕಾ ರೀತಿ ಇರುವ ಶೋಚು (Shochu) ಇದರ ಪ್ರಮುಖ ಸಾರ. ಶೋಚು ಮತ್ತು ಲೈಮ್ ಮಿಶ್ರಣದಿಂದ (cocktail) ಲೆಮನ್ ಡೌ ಉತ್ಪನ್ನ ತಯಾರಿಸಲಾಗಿದೆ ಎನ್ನಲಾಗಿದೆ.

ಕೋಕ ಕೋಲಾದ ಲೆಮನ್ ಡೌ ಮದ್ಯಪಾನೀಯ ಭಾರತದಲ್ಲಿ ಸದ್ಯ 250 ಎಂಎಲ್ ಕ್ಯಾನ್​ನಲ್ಲಿ ಲಭ್ಯ ಇರಲಿದೆ. ಇದರ ಬೆಲೆ ಸದ್ಯಕ್ಕೆ 230 ರೂ ನಿಗದಿ ಮಾಡಲಾಗಿದೆ. ಆದರೆ ಕೋಕ ಕೋಲದಿಂದ ಲಿಕರ್ ಮಾರಾಟ ಇದೇ ಮೊದಲಲ್ಲ. ಲೆಮನ್ ಡೌ ಉತ್ಪನ್ನವನ್ನು ಬೇರೆ ಹೆಸರಿನಲ್ಲಿ ಐದು ವರ್ಷದ ಹಿಂದೆ ಹೊರತಂದಿತ್ತು. ಚುಹಾಯ್ (chuhai) ಅನ್ನು 2018ರಲ್ಲಿ ಜಪಾನ್​ನಲ್ಲಿ ತಂದಿತ್ತು. ಚೀನಾ, ಫಿಲಿಪ್ಪೈನ್ಸ್ ದೇಶಗಳಲ್ಲೂ ಇದು ಲಭ್ಯ ಇದೆ.

ಹಾಗೆಯೇ, ಮುಂದಿನ ವರ್ಷ (2024) ಪರ್ನಾಡ್ ರಿಕಾರ್ಡ್ ಎಂಬ ಸ್ಪಿರಿಟ್ ಕಂಪನಿ ಜೊತೆ ಸೇರಿ ಕೋಕಾ ಕೋಲ ಅಬ್ಸಲೂಟ್ ವೋಡ್ಕ (Absolut vodka) ಮತ್ತು ಸ್ಪ್ರೈಟ್ ಮಿಶ್ರಣದ ಕಾಕ್​ಟೈಲ್ ಅನ್ನು ಬಿಡುಗಡೆ ಮಾಡಲು ಯೋಚಿಸಿದೆ ಎನ್ನಲಾಗುತ್ತಿದೆ .

ಇದನ್ನೂ ಓದಿ: ರೇಷನ್ ಕಾರ್ಡ್’ದಾರರೇ ಈಗಲೇ ಎಚ್ಚೆತ್ತು ಈ ಕೆಲಸ ಮಾಡಿ – ಇಲ್ಲವಾದರೆ ಡಿ. 30ಕ್ಕೆ ಕ್ಯಾನ್ಸಲ್ ಆಗುತ್ತೆ ಕಾರ್ಡ್ !!

Leave A Reply

Your email address will not be published.