Home Latest Sports News Karnataka Pink Ball Test: ಕ್ರಿಕೆಟ್ ಪ್ರೇಮಿಗಳಿಗೆ ಬಿಗ್ ಶಾಕ್ ಕೊಟ್ಟ BCCI – ಭಾರತದಲ್ಲಿ ಇನ್ಮುಂದೆ...

Pink Ball Test: ಕ್ರಿಕೆಟ್ ಪ್ರೇಮಿಗಳಿಗೆ ಬಿಗ್ ಶಾಕ್ ಕೊಟ್ಟ BCCI – ಭಾರತದಲ್ಲಿ ಇನ್ಮುಂದೆ ನಡೆಯಲ್ಲ ಪಿಂಕ್ ಬಾಲ್ ಟೆಸ್ಟ್ !!

Pink Ball Test

Hindu neighbor gifts plot of land

Hindu neighbour gifts land to Muslim journalist

Pink Ball Test: ಡೇ-ನೈಟ್ ಟೆಸ್ಟ್ ಪಂದ್ಯವನ್ನು ಗುಲಾಬಿ ಚೆಂಡಿನೊಂದಿಗೆ ಆಡಲಾಗುತ್ತದೆ ಆದ್ದರಿಂದ ಈ ಆಟವನ್ನು ಪಿಂಕ್ ಬಾಲ್ ಟೆಸ್ಟ್ ಎನ್ನಲಾಗುತ್ತದೆ. ಇದೀಗ ಭಾರತೀಯ ಮೈದಾನದಲ್ಲಿ ಈ ಪಂದ್ಯಗಳನ್ನು ಆಯೋಜಿಸುವ ಕುರಿತು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಮಹತ್ವದ ನಿರ್ಧಾರ ಕೈಗೊಂಡಿದೆ. ಇಲ್ಲಿಯವರೆಗೆ ಗುಲಾಬಿ ಚೆಂಡಿನೊಂದಿಗೆ ಆಡಿದ ಎಲ್ಲಾ ಟೆಸ್ಟ್‌ಗಳು ಕೇವಲ 2-3 ದಿನಗಳಲ್ಲಿ ಕೊನೆಗೊಂಡಿವೆ. ಜನರು 4 ರಿಂದ 5 ದಿನಗಳವರೆಗೆ ಟೆಸ್ಟ್ ಪಂದ್ಯಗಳನ್ನು ವೀಕ್ಷಿಸಲು ಇಷ್ಟಪಡುತ್ತಾರೆ. ಆದರೆ, ಇದು ಬೇಗನೆ ಮುಕ್ತಾಯಗೊಳ್ಳುತ್ತದೆ. ಹೀಗಾಗಿ ಬಿಸಿಸಿಐ ಭಾರತದಲ್ಲಿ ಇದನ್ನು ನಿಲ್ಲಿಸಲು ಮುಂದಾಗಿದೆ ಎನ್ನುವ ಮಾಹಿತಿ ಹೊರಬಿದ್ದಿದೆ.

ಹೌದು, ಬಿಸಿಸಿಐ ಇನ್ನು ಮುಂದೆ ಪುರುಷರ ಕ್ರಿಕೆಟ್‌ನಲ್ಲಿ ಅಥವಾ ಮಹಿಳೆಯರ ಈವೆಂಟ್‌ಗಳಲ್ಲಿ ಡೇ-ನೈಟ್ ಟೆಸ್ಟ್ ಪಂದ್ಯವನ್ನು ದೇಶೀಯ ಋತುವಿನಲ್ಲಿ ಆಯೋಜಿಸುವುದಿಲ್ಲ. ಬಿಸಿಸಿಐ ಪಿಂಕ್ ಬಾಲ್ ಟೆಸ್ಟ್ ಆಯೋಜಿಸಲು ಆಸಕ್ತಿ ಹೊಂದಿಲ್ಲ ಎಂದು ಹೇಳಲಾಗಿದೆ.

ವರದಿಯ ಪ್ರಕಾರ, ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಪತ್ರಕರ್ತರೊಂದಿಗೆ ಮಾತನಾಡುತ್ತಾ, ಭಾರತೀಯ ಮಂಡಳಿಯು ಇನ್ನು ಮುಂದೆ ಪಿಂಕ್ ಬಾಲ್ ಟೆಸ್ಟ್‌ಗೆ ಉತ್ಸುಕವಾಗಿಲ್ಲ, ಏಕೆಂದರೆ ಇದು 4 ಅಥವಾ 5 ದಿನಗಳ ಬದಲಿಗೆ 2 ರಿಂದ 3 ದಿನಗಳಲ್ಲಿ ಕೊನೆಗೊಳ್ಳುತ್ತದೆ ಎಂದು ಹೇಳಿದ್ದಾರೆ. ಪಿಂಕ್ ಬಾಲ್ ಟೆಸ್ಟ್ (Pink Ball Test) ಅನ್ನು ಜನರಲ್ಲಿ ಜನಪ್ರಿಯಗೊಳಿಸಲು ಬಿಸಿಸಿಐ ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡಿದೆ ಎಂದು ಜಯ್ ಶಾ ಹೇಳಿದರು.

ಪಿಂಕ್ ಬಾಲ್ ಟೆಸ್ಟ್ ಅನ್ನು ಕೊನೆಯ ಬಾರಿಗೆ ಆಸ್ಟ್ರೇಲಿಯಾದಲ್ಲಿ ಆಡಲಾಯಿತು, ನಂತರ ಯಾವುದೇ ದೇಶವು ಇದನ್ನು ಆಯೋಜಿಸಲಿಲ್ಲ.
ಮುಖ್ಯವಾಗಿ ಟೀಮ್ ಇಂಡಿಯಾ ಇದುವರೆಗೆ 4 ಪಿಂಕ್ ಬಾಲ್ ಟೆಸ್ಟ್ ಆಡಿದ್ದು, 3ರಲ್ಲಿ ಗೆದ್ದಿದ್ದರೆ ಒಂದರಲ್ಲಿ ಸೋಲು ಕಂಡಿದೆ. ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶ್ರೀಲಂಕಾ ವಿರುದ್ಧ ಭಾರತ ಕೊನೆಯ ಪಿಂಕ್ ಬಾಲ್ ಟೆಸ್ಟ್ ಪಂದ್ಯವನ್ನು ಆಡಿದ್ದು, ಅದು ಕೂಡ 3 ದಿನಗಳಲ್ಲಿ ಕೊನೆಗೊಂಡಿತು. ಭಾರತೀಯ ಮಹಿಳಾ ಕ್ರಿಕೆಟ್ ತಂಡ ಇಲ್ಲಿಯವರೆಗೆ 2021 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಒಂದೇ ಒಂದು ಪಿಂಕ್ ಬಾಲ್ ಟೆಸ್ಟ್ ಆಡಿದ್ದರು. ಕ್ವೀನ್ಸ್‌ಲ್ಯಾಂಡ್‌ನಲ್ಲಿ ನಡೆದ ಆ ಟೆಸ್ಟ್ ಡ್ರಾ ಆಗಿತ್ತು.

ಬಿಸಿಸಿಐ ಕಾರ್ಯದರ್ಶಿಯ ಈ ಹೇಳಿಕೆಯ ನಂತರ, ಟೀಮ್ ಇಂಡಿಯಾ ಗುಲಾಬಿ ಚೆಂಡಿನೊಂದಿಗೆ ಟೆಸ್ಟ್ ಪಂದ್ಯ ಆಡುವುದು ಅನುಮಾನ. ಭಾರತೀಯ ಪುರುಷರ ತಂಡವು ಪ್ರಸ್ತುತ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿದೆ. ಅಲ್ಲಿ ಅದು ಡಿಸೆಂಬರ್ 26 ರಿಂದ 2-ಟೆಸ್ಟ್ ಸರಣಿಯನ್ನು ಆಡಬೇಕಾಗಿದೆ. ಈ ಎರಡೂ ಟೆಸ್ಟ್‌ಗಳನ್ನು ಕೆಂಪು ಚೆಂಡಿನೊಂದಿಗೆ ಆಡಲಾಗುತ್ತದೆ ಎನ್ನಲಾಗಿದೆ.