Bloating Acidity: ಪುರುಷರೇ ಹೊಟ್ಟೆ ಊತ, ಗ್ಯಾಸ್ಟ್ರಿಕ್ ಸಮಸ್ಯೆಗೆ ಇಲ್ಲಿದೆ ಪರಿಹಾರ- ಈ 5 ಕ್ರಮ ರೂಡಿಸಿಕೊಂಡ್ರೆ ಎರಡೇ ದಿನದಲ್ಲಿ ಎಲ್ಲಾ ಮಾಯ

Health tip here is the Home remidies for bloating Acidity

Bloating Acidity: ಮದುವೆ ಸಮಾರಂಭಗಳಿಗೆ ಹೋಗುವಾಗ ಜಬರ್ದಸ್ತ್ ಆಗಿ ಭೋಜನ ಮಾಡುವುದು ಸಹಜ. ಒಂದೇ ಸಲಕ್ಕೆ ನಿಯಮಿತ ಆಹಾರಕ್ಕಿಂತ ಹೆಚ್ಚು ಸೇವನೆ ಮಾಡಿದಾಗ ಹೊಟ್ಟೆಯುತ (Bloating Acidity)ಮಾತ್ರವಲ್ಲದೆ, ಊತದಲ್ಲಿ ಗ್ಯಾಸ್ ರಚನೆಗೆ ಕಾರಣವಾಗಬಹುದು. ಮದುವೆ, ಪಾರ್ಟಿ ಎಂದೆಲ್ಲ ಜನರು ಹೆಚ್ಚಾಗಿ ರಾತ್ರಿ ಹೊತ್ತಲ್ಲಿ ಮದ್ಯಪಾನ ಮಾಡುವುದರಿಂದ ಅಸಿಡಿಟಿ ಸಮಸ್ಯೆ ಉಂಟಾಗಬಹುದು. ಹೊಟ್ಟೆಯ ಊತ ಮತ್ತು ಆಮ್ಲೀಯತೆಯಿಂದ ಪರಿಹಾರ ಪಡೆಯಲು ನೀವು ಮನೆಯಲ್ಲೇ ಸರಳ ಮನೆ ಮದ್ದುಗಳನ್ನು (Home Remedies)ಬಳಸಿ ಊತ ಮತ್ತು ಆಮ್ಲೀಯತೆಯಿಂದ ಪರಿಹಾರವನ್ನು ಪಡೆಯಬಹುದು.

 

# ಜೀರಿಗೆ
ಜೀರಿಗೆ ಉರಿಯೂತ ನಿವಾರಕವಾಗಿದ್ದು ಜೀರ್ಣಕ್ರಿಯೆಯನ್ನು ಉತ್ತೇಜಿಸುವ ಗುಣಲಕ್ಷಣಗಳನ್ನು ಒಳಗೊಂಡಿದೆ. ಇದು ಹೊಟ್ಟೆಯ ಉರಿಯೂತ ಮತ್ತು ಆಮ್ಲೀಯತೆಯನ್ನು ಕಡಿಮೆ ಮಾಡುವಲ್ಲಿ ಸಹಕಾರಿಯಾಗಿದೆ. ಇದಕ್ಕಾಗಿ, ಒಂದು ಚಮಚ ಜೀರಿಗೆಯನ್ನು ನೀರಿನಲ್ಲಿ ನೆನೆಸಿ ಕೆಲವು ಗಂಟೆಗಳ ನಂತರ ಕುಡಿಯಬಹುದು.

# ತುಳಸಿ
ತುಳಸಿ ಉರಿಯೂತದಿಂದ ಪರಿಹಾರ ಕಂಡುಕೊಳ್ಳಲು ನೆರವಾಗುತ್ತದೆ. ಅಷ್ಟೇ ಅಲ್ಲದೆ, ಜೀರ್ಣಕಾರಿ-ಉತ್ತೇಜಿಸುವ ಗುಣಲಕ್ಷಣಗಳನ್ನು ಒಳಗೊಂಡಿದೆ. ಇದು ಹೊಟ್ಟೆಯ ಉರಿಯೂತ ಮತ್ತು ಆಮ್ಲೀಯತೆಯನ್ನು ಕಡಿಮೆ ಮಾಡಲು ಸಹಕರಿಸುತ್ತದೆ. ಇದಕ್ಕಾಗಿ ತುಳಸಿ ಎಲೆಗಳನ್ನು ತಿನ್ನಬಹುದು ಇಲ್ಲವೇ ಒಂದು ಕಪ್ ತುಳಸಿ ಚಹಾವನ್ನು ಕುಡಿಯಬಹುದು.

# ಮೊಸರು
ಮೊಸರು ಪ್ರೋಬಯಾಟಿಕ್‌ಗಳನ್ನು ಒಳಗೊಂಡಿದ್ದು, ಇದು ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ. ಅಷ್ಟೇ ಅಲ್ಲದೆ, ಉರಿಯೂತವನ್ನು ಶಮನ ಮಾಡಲು ನೆರವಾಗುತ್ತದೆ. ಒಂದು ಕಪ್ ಮೊಸರು ತಿನ್ನುವುದರಿಂದ ಅಸಿಡಿಟಿಯಿಂದ ಪರಿಹಾರ ಕಂಡುಕೊಳ್ಳಬಹುದು.

# ಶುಂಠಿ
ಶುಂಠಿಯಲ್ಲಿ ಜಿಂಜರಾಲ್ ಎಂಬ ಅಂಶವಿದ್ದು, ಇದು ಜೀರ್ಣಕ್ರಿಯೆಯನ್ನು ಉತ್ತೇಜಿಸುವ ಜೊತೆಗೆ ಉರಿಯೂತವನ್ನು ಕಡಿಮೆ ಮಾಡುವ ಗುಣಲಕ್ಷಣಗಳನ್ನು ಒಳಗೊಂಡಿದೆ. ಸಣ್ಣ ತುಂಡು ಶುಂಠಿಯನ್ನು ಅಗಿಯುವ ಇಲ್ಲವೇ ಒಂದು ಕಪ್ ಶುಂಠಿ ಚಹಾವನ್ನು ಕುಡಿಯುವ ಮೂಲಕ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.

ಇದನ್ನು ಓದಿ:New Rules On EMI Payment: ಬ್ಯಾಂಕಲ್ಲಿ ಸಾಲ ಮಾಡಿ EMI ಕಟ್ಟುವವರಿಗೆ ಬಂತು ಹೊಸ ರೂಲ್ಸ್- ನಿರ್ಮಲಾ ಸೀತಾರಾಮನ್ ಹೊಸ ಘೋಷಣೆ

Leave A Reply

Your email address will not be published.